ಚಂದ್ರನ ಅಂಗಳದಲ್ಲಿ ಬಿಯರ್ ಉತ್ಪಾದನೆ!

ಚಂದ್ರನ ಅಂಗಳದಲ್ಲಿ ಬಿಯರ್ ಉತ್ಪಾದನೆ ಮಾಡಲು ಅಮೆರಿಕಾದ ವಿದ್ಯಾರ್ಥಿಗಳ ತಂಡವೊಂದು ಸಜ್ಜಾಗಿದೆ. ಇದೇ ಮೊದಲ ಬಾರಿಗೆ ಇಂತಹ ಪ್ರಯೋಗ ನಡೆಯುತ್ತಿದೆ.
ಚಂದ್ರ
ಚಂದ್ರ
ಬೆಂಗಳೂರು: ಚಂದ್ರನ ಅಂಗಳದಲ್ಲಿ ಬಿಯರ್ ಉತ್ಪಾದನೆ ಮಾಡಲು ಅಮೆರಿಕಾದ ವಿದ್ಯಾರ್ಥಿಗಳ ತಂಡವೊಂದು ಸಜ್ಜಾಗಿದೆ. ಇದೇ ಮೊದಲ ಬಾರಿಗೆ ಇಂತಹ ಪ್ರಯೋಗ ನಡೆಯುತ್ತಿದೆ. 
ಈ ವರ್ಷ ಚಂದ್ರನ ಅಂಗಳಕ್ಕೆ ನೌಕೆಯೊಂದನ್ನು ಕಳಿಸಲು ಉದ್ದೇಶಿಸಲಾಗಿದ್ದು, ಅಮೆರಿಕಾದ ವಿದ್ಯಾರ್ಥಿಗಳು ಬಿಯರ್ ಉತ್ಪಾದನೆ ಮಾಡುವ ಪ್ರಸ್ತಾವನೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಟೀಂ ಇಂಡಸ್ ಆಯೋಜಿಸಿದ್ದ ಲ್ಯಾಬ್ ಟು ಮೂನ್ ಎಂಬ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಅಮೆರಿಕಾ ವಿದ್ಯಾರ್ಥಿಗಳು ಈ ಹೊಸ ಪ್ರಯೋಗವನ್ನು ಪ್ರಸ್ತಾಪಿಸಿದ್ದಾರೆ. 
ಚಂದ್ರನ ನೆಲದಲ್ಲಿ ಯೀಸ್ಟ್ ಹೇಗೆ ವರ್ತಿಸುತ್ತದೆ ಎಂಬುದರ ಬಗ್ಗೆ ಪ್ರಮುಖವಾಗಿ ಸಂಶೋಧನೆ ನಡೆಯಲಿದ್ದು, ಮುಂದಿನ ಹಂತಗಳಲ್ಲಿ ಇದೇ ಸಂಶೋಧನೆಯನ್ನು ಆಧಾರವಾಗಿಟ್ಟುಕೊಂಡು, ಬಾಹ್ಯಾಕಾಶದಲ್ಲಿ ಬಿಯರ್ ಉತ್ಪಾದನೆ, ಬ್ರೆಡ್ ಸೇರಿದಂತೆ ಯೀಸ್ಟ್ ಸಂಬಂಧಿತ ಆಹಾರ ಪದಾರ್ಥಗಳು ಹಾಗೂ ಔಷಧಗಳ ಅಭಿವೃದ್ಧಿಯ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಯಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. 
ಡಿ.28 ಕ್ಕೆ ನೌಕೆ ಉಡಾವಣೆಯಾಗಲಿದ್ದು, ಟೀಂ ಇಂಡಸ್ ನ ಲ್ಯಾಬ್ ಟು ಮೂನ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಒಟ್ಟು 3000 ಮಂದಿ ಪೈಕಿ 25 ತಂಡಗಳು ಆಯ್ಕೆಯಾಗಿವೆ. " ಸ್ನೇಹಿತರೊಂದಿಗೆ ತಮಾಷೆಯಾಗಿ ಚರ್ಚೆ ನಡೆಸುತ್ತಿದ್ದಾಗ ಚಂದ್ರನ ಅಂಗಳದಲ್ಲಿ ಬಿಯರ್ ಉತ್ಪಾದನೆಯ ಕಲ್ಪನೆ ಸ್ಫುರಿಸಿದೆ, ಬಿಯರ್ ತಯಾರಿಕೆ ಬಗ್ಗೆ ನಮೆಗಲ್ಲಾ ಸಂತಸವಿದ್ದು, ನಮ್ಮಲ್ಲಿ ಕೆಲವರು ತಮ್ಮ ಮನೆಗಳಲ್ಲಿಯೇ ಬಿಯರ್ ಉತ್ಪಾದಿಸುವ ಕಿಟ್ ಗಳನ್ನು ಹೊಂದಿದ್ದಾರೆ ಎನ್ನುತ್ತಾರೆ ಅಮೆರಿಕಾದ ಸ್ಯಾನ್ ಡಿಗೋನಲ್ಲಿರುವ ಕ್ಯಾಲಿಫೋರ್ನಿಯಾದ ವಿದ್ಯಾರ್ಥಿಯಾಗಿರುವ ನೀಕಿ ಅಶಾರಿ
ಭಾರತದ ನೌಕೆಯೊಂದು ಚಂದ್ರನ ಅಂಗಳಕ್ಕೆ ಉಡಾವಣೆಯಾಗಲಿದ್ದು, ಅದಕ್ಕಾಗಿ ವಿನೂತನ ಯೋಜನೆಗಳನ್ನು ವಿನ್ಯಾಸಗೊಳಿಸುವ ಅವಕಾಶ ಇದೆಯೆಂದು ತಿಳಿಯುತ್ತಿದ್ದಂತೆಯೇ, ಯೀಸ್ಟ್ ಚಂದ್ರನ ಮೇಲೆ ಹೇಗೆ ವರ್ತಿಸುತ್ತದೆ ಎಂಬುದರ ಬಗ್ಗೆ ಸಂಶೋಧನೆ ನಡೆಸಲು ತೀರ್ಮಾನಿಸಿದೆವು ಎಂದು ವಿದ್ಯಾರ್ಥಿ ನೀಕಿ ಹೇಳಿದ್ದಾರೆ. ಸಂಶೋಧನೆಯ ಮಾದರಿಯನ್ನು ಅಂತಾರಾಷ್ಟ್ರೀಯ ತೀರ್ಪುಗಾರರ ಎದುರು ಮಾರ್ಚ್ ನಲ್ಲಿ ಪ್ರದರ್ಶಿಸಬೇಕಾಗಿದೆ. ಅಲ್ಲಿ ತೀರ್ಪುಗಾರರು ಒಪ್ಪಿಗೆ ಸೂಚಿಸಿದರೆ ವಿದ್ಯಾರ್ಥಿಗಳಿಗೆ ತಮ್ಮ ಯೋಜನೆಯನ್ನು ಮುಂದುವರೆಸುವ ಅವಕಾಶ ಸಿಗಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com