100 ಮಿಲಿಯನ್ ವರ್ಷಗಳಿಗೂ ಹಳೆಯ ಕೀಟ ತಳಿ ಪತ್ತೆ

ತ್ರಿಕೋನ ತಲೆ ಮತ್ತು 'ಇಟಿ ತರಹ ನೋಟವನ್ನು ಹೊಂದಿರುವ 100 ದಶಲಕ್ಷ ಹಳೆಯ ಕೀಟ ಪ್ರಬೇಧವನ್ನು...
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ
ವಾಷಿಂಗ್ಟನ್: ತ್ರಿಕೋನ ತಲೆ ಮತ್ತು 'ಇಟಿ ತರಹ ನೋಟವನ್ನು ಹೊಂದಿರುವ 100 ದಶಲಕ್ಷ ಹಳೆಯ ಕೀಟ ಪ್ರಬೇಧವನ್ನು ವಿಜ್ಞಾನಿಗಳು ಕಂಡುಹಿಡಿದಿದ್ದು ಮ್ಯಾನ್ಮಾರ್ ನ ಪಳೆಯುಳಿಕೆಗಳಲ್ಲಿ ಸಂರಕ್ಷಿಸಿಡಲಾಗಿದೆ.
ವೈಜ್ಞಾನಿಕ ಲೋಕದಲ್ಲಿ ಇದೊಂದು ಅಪರೂಪದ ಸಂಗತಿಯಾಗಿದೆ. ಭೂಮಿ ಮೇಲೆ ಸುಮಾರು ಒಂದು ದಶಲಕ್ಷ ಕೀಟ ಪ್ರಬೇಧಗಳಿದ್ದು ಒಂದು ದಶಲಕ್ಷಕ್ಕೂ ಅಧಿಕ ಪ್ರಬೇಧಗಳನ್ನು ಕಂಡುಹಿಡಿಯಬೇಕಿದೆ. ಆದರೆ ಪ್ರತಿ ಪ್ರಬೇಧಗಳನ್ನು 31 ಈಗಿರುವ ಪ್ರಕಾರಗಳಲ್ಲಿ ಇಡಲಾಗಿದೆ.
ಸಣ್ಣ, ರೆಕ್ಕೆರಹಿತ ಹೆಣ್ಣು ಕೀಟ ಮರದ ತೊಗಟೆಯ ಕಂದರಗಳಲ್ಲಿ ವಾಸಿಸುತ್ತಿದ್ದು ಆಹಾರಕ್ಕಾಗಿ ಹುಳುಗಳು ಮತ್ತು ಶಿಲೀಂಧ್ರಗಳನ್ನು ಹುಡುಕುತ್ತವೆ. ಇದು ಸಣ್ಣವಾದರೂ ಕೂಡ ನೋಡುವಾಗ ಹೆದರಿಕೆಯುಂಟಾಗುತ್ತದೆ. ಇದು ವಿಶೇಷ ಗುಣಲಕ್ಷಣಗಳನ್ನು ಹೊಂದಿರುವ ಕೀಟವಾಗಿದ್ದು ಇತರ ಕೀಟ ಪ್ರಬೇಧಗಳೊಂದಿಗೆ ಹೊಂದಿಕೆ ಮಾಡಲು ಸಾಧ್ಯವಿಲ್ಲ ಎಂದು ಅಮೆರಿಕಾದ ಒರೆಗಾನ್ ಸ್ಟೇಟ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಜಾರ್ಜ್ ಪೊಯ್ನಾರ್ ತಿಳಿಸಿದ್ದಾರೆ.
ಮೂರು ತಲೆಗಳು ಮತ್ತು ಉಬ್ಬುವ ಕಣ್ಣುಗಳು, ಕುತ್ತಿಗೆ ತಳದಲ್ಲಿ ಲಂಬ ತ್ರಿಕೋನದ ಶೃಂಗವಿದೆ. ಬಹುಶಃ ಇದು ಸರ್ವಭಕ್ಷಕ ಪ್ರಾಣಿಯಾಗಿರಬಹುದು. ಉದ್ದವಾದ, ಕಿರಿದಾದ, ಸಮತಲದ ದೇಹವನ್ನು ಹೊಂದಿದೆ. ಬಹಳ ತೆಳು ಕಾಲುಗಳು ಇವೆ. ಈ ಕೀಟದ ಬಗ್ಗೆ ಕ್ರಿಟೇಷಿಯಸ್ ರಿಸರ್ಚ್ ಪತ್ರಿಕೆಯಲ್ಲಿ ಲೇಖನವಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com