ಇಸ್ರೋ ಪಿಎಸ್ಎಲ್ ವಿ
ಇಸ್ರೋ ಪಿಎಸ್ಎಲ್ ವಿ

ಇಸ್ರೋ ರಾಕ್ ಸ್ಟಾರ್ ಪಿಎಸ್ಎಲ್ ವಿ ಸಾಧನೆ: 1999 ರಿಂದ 209 ವಿದೇಶಿ ಉಪಗ್ರಹಗಳ ಉಡಾವಣೆ

ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಯ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ 1999 ರಿಂದ ಈ ವರೆಗೆ 209 ವಿದೇಶಿ ಉಪಗ್ರಹಗಳು ಹಾಗೂ 48 ಭಾರತೀಯ ಉಪಗ್ರಹಗಳನ್ನು ಉಡಾವಣೆ ಮಾಡಿ ಸಂಸ್ಥೆಯ...
ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಯ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ 1999 ರಿಂದ ಈ ವರೆಗೆ 209 ವಿದೇಶಿ ಉಪಗ್ರಹಗಳು ಹಾಗೂ 48 ಭಾರತೀಯ ಉಪಗ್ರಹಗಳನ್ನು ಉಡಾವಣೆ ಮಾಡಿ ಸಂಸ್ಥೆಯ ಅತ್ಯಂತ ಹೆಚ್ಚು ಕಾರ್ಯಕ್ಷಮತೆ, ನಂಬಿಕಸ್ಥ ಉಪಗ್ರಹ ಉಡಾವಣಾ ವಾಹನ ಎಂಬ ಹೆಗ್ಗಳಿಗೆಕೆ ಪಾತ್ರವಾಗಿದೆ. 
1999ರ ಮೇ ತಿಂಗಳಿನಿಂದ ಈ ವರೆಗೂ 28 ರಾಷ್ಟ್ರಗಳ ಒಟ್ಟು 209 ಉಪಗ್ರಹಗಳನ್ನು ಉಡಾವಣೆ ಮಾಡಿರುವುದಷ್ಟೇ ಅಲ್ಲದೇ, ಭಾರತದ 48 ಉಪಗ್ರಹಳನ್ನೂ ಉಡಾವಣೆ ಮಾಡಿದೆ. ಅಕ್ಟೋಬರ್ 1994 ರಲ್ಲಿ ಪಿಎಸ್ಎಲ್ ವಿ ಯ ಮೊದಲ ಕಾಪಿಬುಕ್ ಲಾಂಚ್ ನಂತರ ಪಿಎಸ್ಎಲ್ ವಿ ಅತ್ಯಂತ ಹೆಚ್ಚು ಕಾರ್ಯಕ್ಷಮತೆಯುಳ್ಳ ಉಪಗ್ರಹ ಉಡಾವಣಾ ವಾಹನ ಎಂಬ ಹೆಗ್ಗಳಿಕೆಯನ್ನು ಉಳಿಸಿಕೊಂಡಿದ್ದು, ಈ ವರ್ಷದ ಜೂನ್ ವರೆಗೂ ಸತತ 39 ಯಶಸ್ವಿ ಉಡಾವಣೆಗಳನ್ನು ಮಾಡಿದೆ ಎಂದು ಟೈಮ್ಸ್ ಆಫ್ ಇಂಡಿಯಾಗೆ ಇಸ್ರೋ ಅಧ್ಯಕ್ಷ ಕಿರಣ್ ಕುಮಾರ್ ಹೇಳಿದ್ದಾರೆ.
2015 ರ ಡಿಸೆಂಬರ್ 16 ರಂದು ಉಡಾವಣೆ ಮಾಡಿದ ಸಿಂಗಪೂರ್ ನ 400 ಕೆ.ಜಿ ತೂಕದ ಟೆಲಿಯೋಸ್ ಅರ್ತ್ ಅಬ್ಸರ್ವೇಷನ್ ಉಪಗ್ರಹ ಪಿಎಸ್ಎಲ್ ವಿ ಮೂಲಕ ಉಡಾವಣೆಯಾಗಿರುವ ಅತಿ ಹೆಚ್ಚು ತೂಕದ ಉಪಗ್ರಹವಾಗಿದ್ದು, ಈ ಪೈಕಿ 2007 ರ ಏಪ್ರಿಲ್ 23 ರಂದು ಉಡಾವಣೆಯಾದ ಇಟಲಿಯ ಅಗೈಲ್ ಉಪಗ್ರಹ (352ಕೆ.ಜಿ), 2008 ರ ಜನವರಿ 21 ರಂದು ಉಡಾವಣೇಯಾದ  ಇಸ್ರೇಲ್ ನ ಟೆಕ್ಸಾರ್ (295 ಕೆ.ಜಿ) ಉಪಗ್ರಹಗಳು ಸೇರಿವೆ.
ಪಿಎಸ್ಎಲ್ ವಿ ಇಸ್ರೋ ಸಂಸ್ಥೆಗೆ ಆದಾಯವನ್ನೂ ತಂದುಕೊಟ್ಟಿದ್ದು ಲಾಭದಾಯಕ ಉಪಗ್ರಹ ಉಡಾವಣಾ ವಾಹನವಾಗಿದೆ. ಅಷ್ಟೇ ಅಲ್ಲದೇ ಅತ್ಯಂತ ಕಡಿಮೆ ಖರ್ಚಿನಲ್ಲಿ ಯಶಸ್ವಿಯಾದ 2008 ರಲ್ಲಿ ಪ್ರಾರಂಭವಾದ ಚಂದ್ರಯಾನ-1, 2013 ರ ಮಾರ್ಸ್ ಮಿಷನ್ ನ ಉಪಗ್ರಹಳ ಉಡಾವಣೆಗಳಲ್ಲೂ ಸಹ ಪಿಎಸ್ಎಲ್ ಯನ್ನು ಬಳಕೆ ಮಾಡಲಾಗಿದೆ. 

Related Stories

No stories found.

Advertisement

X
Kannada Prabha
www.kannadaprabha.com