ಇಂಟರ್ ನೆಟ್ ಸಮಸ್ಯೆ ಕಾಡುತ್ತಿದೆಯೇ? ಯಾಕೆಂಬುದರ ಕಾರಣ ಇಲ್ಲಿದೆ

ಭಾರತದಲ್ಲಿ ಕಳೆದ 8 ತಿಂಗಳಿನಿಂದ ಮೊಬೈಲ್ ಡಾಟಾ ಬಳಕೆ ಅತ್ಯಧಿಕವಾಗಿ ಬೆಳವಣಿಗೆಯಾಗಿದೆಯಾದರೂ, ಶೇ.56 ರಷ್ಟು ಜನರಿಗೆ ದಿನಕ್ಕೆ ಒಮ್ಮೆಯಾದರೂ ಇಂಟರ್ ನೆಟ್ ಕನೆಕ್ಷನ್ ಸಮಸ್ಯೆ ಎದುರಿಸುತ್ತಾರೆ..
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಭಾರತದಲ್ಲಿ ಕಳೆದ 8 ತಿಂಗಳಿನಿಂದ ಮೊಬೈಲ್ ಡಾಟಾ ಬಳಕೆ ಅತ್ಯಧಿಕವಾಗಿ ಬೆಳವಣಿಗೆಯಾಗಿದೆಯಾದರೂ, ಶೇ.56 ರಷ್ಟು ಜನರಿಗೆ ದಿನಕ್ಕೆ ಒಮ್ಮೆಯಾದರೂ ಇಂಟರ್ ನೆಟ್ ಕನೆಕ್ಷನ್ ಸಮಸ್ಯೆ ಎದುರಿಸುತ್ತಾರೆ ಎಂದು ಹೊಸ ವರದಿಯೊಂದು ಹೇಳಿದೆ. 
ಟ್ರು ಬ್ಯಾಲೆನ್ಸ್ ಮೊಬೈಲ್ ಆಪ್ ತಯಾರಿಸಿರುವ ಈ ವರದಿಯ ಪ್ರಕಾರ, ಡಾಟಾ ಕನೆಕ್ಟಿವಿಟಿ ಗುಣಮಟ್ಟ ಇನ್ನೂ ಕಳಪೆಯಾಗಿಯೇ ಉಳಿದಿದ್ದು, ಮೊಬೈಲ್ ಹ್ಯಾಂಡ್ ಸೆಟ್ ಗಳು ಹೆಚ್ಚು ಇಂಟರ್ ನೆಟ್ ಕನೆಕ್ಟಿವಿಟಿ ಸಮಸ್ಯೆ ಎದುರಿಸಲು ಕಾರಣವಾಗುತ್ತಿದೆ ಎಂದು ತಿಳಿದುಬಂದಿದೆ. 
ಭಾರತದಾದ್ಯಂತ ಅಲ್ಲಲ್ಲಿ ಮೊಬೈಲ್ ಇಂಟರ್ ನೆಟ್ ಸಂಪರ್ಕ ಕಡಿತಗೊಳ್ಳುವುದನ್ನು ಕಂಡುಬಂದಿದೆ ಎಂದು ಟ್ರು ಬ್ಯಾಲೆನ್ಸ್ ಡಾಟಾ ಅನಾಲಿಸಿಸ್ ವಿಭಾಗದ ನಿರ್ದೇಶಕ ಅಲೆಕ್ಸ್ ಸುಹ್ ಹೇಳಿದ್ದಾರೆ. ಮೊಬೈಲ್ ಇಂಟರ್ ನೆಟ್ ಬಳಕೆದಾರರ ಸಂಖ್ಯೆ ಹೆಚ್ಚುತ್ತಿದೆಯಾದರೂ ಶೇ.11 ರಷ್ಟು ಜನರು 24 ಗಂಟೆಗಳಿಗಿಂತಲೂ ಹೆಚ್ಚು ಕಾಲ ಆಫ್ ಲೈನ್ ನಲ್ಲಿಯೇ ಇರುತ್ತಾರೆ, ಶೇ.7 ರಷ್ಟು ಜನರು ಮಾತ್ರ 24 ಗಂಟೆ ಆನ್ ಲೈನ್ ಇರಲಿದ್ದು, 2017 ರ ಏಪ್ರಿಲ್ ವರೆಗೆ ಈ ಸಂಖ್ಯೆ ಶೇ.44 ಕ್ಕೇರಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com