ಸೌರ ಮಂಡಲದ ಅಂಚಿನಲ್ಲಿ ಮಂಗಳನ ಗಾತ್ರದ ಗ್ರಹ ಗೋಚರ!

ಭೂಮಿಯಂತೆಯೇ ಇರುವ ಮತ್ತೊಂದು ಗ್ರಹ ಪತ್ತೆಯಾಗಿರುವುದರ ಬಗ್ಗೆ ವಿಜ್ಞಾನಿಗಳು ಇನ್ನಷ್ಟೇ ಅಧಿಕೃತಪಡಿಸಬೇಕಿದೆ. ಈ ಬೆನ್ನಲ್ಲೇ ಸಂಶೋಧಕರಿಗೆ ಮತ್ತೊಂದು ಗ್ರಹ ಗೋಚರವಾಗಿದೆ.
ಸೌರ ಮಂಡಲದ ಅಂಚಿನಲ್ಲಿ ಮಂಗಳನ ಗಾತ್ರದ ಗ್ರಹ ಗೋಚರ!
ಸೌರ ಮಂಡಲದ ಅಂಚಿನಲ್ಲಿ ಮಂಗಳನ ಗಾತ್ರದ ಗ್ರಹ ಗೋಚರ!
ನವದೆಹಲಿ: ಭೂಮಿಯಂತೆಯೇ ಇರುವ ಮತ್ತೊಂದು ಗ್ರಹ ಪತ್ತೆಯಾಗಿರುವುದರ ಬಗ್ಗೆ ವಿಜ್ಞಾನಿಗಳು ಇನ್ನಷ್ಟೇ ಅಧಿಕೃತಪಡಿಸಬೇಕಿದೆ. ಈ ಬೆನ್ನಲ್ಲೇ ಸಂಶೋಧಕರಿಗೆ ಮತ್ತೊಂದು ಗ್ರಹ ಗೋಚರವಾಗಿದೆ. 
ಭಾರತೀಯರೂ ಇರುವ ಸಂಶೋಧಕರ ತಂಡ ಮಂಗಳ ಗ್ರಹದಷ್ಟು ಗಾತ್ರವಿರುವ ಗ್ರಹವನ್ನು ಹೋಲುವ ವಸ್ತುವನ್ನು ಸೌರ ಮಂಡಲದ ಕೊನೆಯ ಭಾಗದಲ್ಲಿ ಗುರುತಿಸಿದ್ದಾರೆ. ಇತ್ತೀಚೆಗಷ್ಟೇ ಪತ್ತೆಯಾಗಿದ್ದ ಭೂಮಿಯನ್ನು ಹೋಲುವ 9 ನೇ ಗ್ರಹಕ್ಕಿಂತ ಭಿನ್ನವಾಗಿದ್ದು, ಅದಕ್ಕಿಂತ ಹತ್ತಿರವೇ ಇದೆ ಎಂದು ಸಂಶೋಧಕರು ಹೇಳಿದ್ದಾರೆ. 
ಅರಿಝೋನಾ ಲೂನರ್ ಮತ್ತು ಪ್ಲಾನೆಟರಿ ಲ್ಯಾಬೊರೇಟರಿ ವಿಶ್ವವಿದ್ಯಾಲಯದ ಕ್ಯಾಟ್ ವೋಲ್ಕ್ ಮತ್ತು ರೇಣು ಮಲ್ಹೋತ್ರಾ ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಹೊಸದಾಗಿ ಗೋಚರವಾಗುತ್ತಿರುವ ಗ್ರಹ ಭೂಮಿ ಮತ್ತು ಮಂಗಳ ಗ್ರಹದ ನಡುವಿನ ಗಾತ್ರ ಹೊಂದಿದೆ ಎಂದು ಹೇಳಿದ್ದಾರೆ. ಈ ಕುರಿತ ಅಧ್ಯಯನ ಲೇಖನ ಖಗೋಳ ಜರ್ನಲ್ ನ ಮುಂಬರುವ ಸಂಚಿಕೆಯಲ್ಲಿ ಪ್ರಕಟಗೊಳ್ಳಲಿದೆ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com