ಜಿಯೋ ಸರಾಸರಿ ಡೌನ್ ಲೋಡ್ ವೇಗ ದುಪ್ಪಟ್ಟು!

ಟ್ರಾಯ್ ನ ಅಂಕಿ-ಅಂಶಗಳ ಪ್ರಕಾರ ರಿಲಾಯನ್ಸ್ ನ ಜಿಯೋ 4 ಜಿ ಡೌನ್ ಲೋಡ್ ವೇಗದಲ್ಲಿ ಮುಂಚೂಣಿಯಲ್ಲಿದೆ.
ಜಿಯೋ ಸರಾಸರಿ ಡೌನ್ ಲೋಡ್ ವೇಗ ದುಪ್ಪಟ್ಟು!
ಜಿಯೋ ಸರಾಸರಿ ಡೌನ್ ಲೋಡ್ ವೇಗ ದುಪ್ಪಟ್ಟು!
ನವದೆಹಲಿ: ಮೊಬೈಲ್ ಗ್ರಾಹಕರಿಗೆ ಡಾಟಾ ಯೋಜನೆಗಳನ್ನು ಘೋಷಿಸುವುದರಲ್ಲಿ ಮೊಬೈಲ್ ಆಪರೇಟರ್ ಸಂಸ್ಥೆಗಳ ನಡುವೆ ತೀವ್ರ ಪೈಪೋಟಿ ನಡೆಯುತ್ತಿದ್ದು, ಟ್ರಾಯ್ ನ ಅಂಕಿ-ಅಂಶಗಳ ಪ್ರಕಾರ ರಿಲಾಯನ್ಸ್ ನ ಜಿಯೋ 4 ಜಿ ಡೌನ್ ಲೋಡ್ ವೇಗದಲ್ಲಿ ಮುಂಚೂಣಿಯಲ್ಲಿದೆ. 
2017 ರ ಜನವರಿ ಅಂತ್ಯದ ವೇಳೆಗೆ ರಿಲಾಯನ್ಸ್ ಜಿಯೋ 4 ಜಿಯ ಸರಾಸರಿ ಡೌನ್ ಲೋಡ್ ವೇಗ 17.427 ಎಂಬಿಪಿಎಸ್ ನಷ್ಟಿದ್ದು, 2016 ರ ಡಿಸೆಂಬರ್ ತಿಂಗಳ ಅಂತ್ಯದಲ್ಲಿ 8.34 ಎಂಬಿಪಿಎಸ್ ನಷ್ಟಿತ್ತು ಎಂದು ಟ್ರಾಯ್ ಅಂಕಿ-ಅಂಶ ಹೇಳಿದೆ.  17.427 ಎಂಬಿಪಿಎಸ್ ವೇಗದ ಇಂಟರ್ ನೆಟ್ ಸೌಲಭ್ಯ ಬಳಕೆ ಮಾಡುತ್ತಿರುವ ಜಿಯೋ ಗ್ರಾಹಕ ಕೇವಲ ಮೂರು ನಿಮಿಷಗಳಲ್ಲಿ ಒಂದು ಚಿತ್ರವನ್ನು ಡೌನ್ ಲೋಡ್ ಮಾಡಬಹುದಾಗಿದೆ. ಜಿಯೋ ನಂತರದ ಸ್ಥಾನದಲ್ಲಿ ಐಡಿಯಾ ನೆಟ್ವರ್ಕ್ ಇದ್ದು, 2016 ರ ಡಿಸೆಂಬರ್ ನಲ್ಲಿ 6.6 ಎಂಬಿಪಿಎಸ್ ನಷ್ಟಿದ್ದ ವೇಗ ಈಗ 8.53 ಎಂಬಿಪಿಎಸ್ ನಷ್ಟಿದೆ. 
ಇನ್ನು ಡಿಸೆಂಬರ್ 2016 ರಲ್ಲಿ ದಾಖಲೆಯ 11.862 ಎಂಬಿಪಿಎಸ್ ನಷ್ಟಿದ್ದ ಭಾರತಿ ಏರ್ ಟೆಲ್ ನ ವೇಗ ಜನವರಿ ಅಂತ್ಯದ ವೇಳೆಗೆ 11.254 ಎಂಬಿಪಿಎಸ್ ಗೆ ಇಳಿಕೆಯಾಗಿದೆ ಎಂದು ಟ್ರಾಯ್ ನ ಮೈಸ್ ಸ್ಪೀಡ್ ಇಂಟರ್ ನೆಟ್ ಸ್ಪೀಡ್ ಟೆಸ್ಟಿಂಗ್ ಸರ್ವೀಸ್ ನ ಅಂಕಿ-ಅಂಶಗಳ ಮೂಲಕ ತಿಳಿದುಬಂದಿದೆ. ವೋಡಫೋನ್, ಬಿಎಸ್ಎನ್ಎಲ್ ಸಂಸ್ಥೆಗಳ ಇಂಟರ್ ನೆಟ್ ವೇಗ ಅನುಕ್ರಮವಾಗಿ 6.13 ರಿಂದ 6.8  ಹಾಗೂ 3.16 ರಿಂದ 2.89 ಕ್ಕೆ ಇಳಿಕೆಯಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com