ಬಾಹ್ಯಾಕಾಶ ನಿಲ್ದಾಣ ಅಪ್ ಗ್ರೇಡ್ ಗಾಗಿ 6.5 ಗಂಟೆಗಳ ಕಾಲ ಸ್ಪೇಸ್ ವಾಕ್

ಬಾಹ್ಯಾಕಾಶ ನಿಲ್ದಾಣವನ್ನು ಅಪ್ ಗ್ರೇಡ್ ಮಾಡಲು ಅಂತಾರಾಷ್ಟ್ರೀಯ ಬಾಹ್ಯಾಕಾಶ ಸ್ಟೇಷನ್ ನ ಗಗನಯಾತ್ರಿಗಳು ಮಾ.24 ರಿಂದ ಮೊದಲುಗೊಂಡು 3 ಬಾರಿ ಬಾಹ್ಯಾಕಾಶದಲ್ಲಿ 6.5 ಗಂಟೆಗಳ ಕಾಲ ಸ್ಪೇಸ್ ವಾಕ್
ಬಾಹ್ಯಾಕಾಶ ನಿಲ್ದಾಣ ಅಪ್ ಗ್ರೇಡ್ ಗಾಗಿ 6.5 ಗಂಟೆಗಳ ಕಾಲ ಸ್ಪೇಸ್ ವಾಕ್
ಬಾಹ್ಯಾಕಾಶ ನಿಲ್ದಾಣ ಅಪ್ ಗ್ರೇಡ್ ಗಾಗಿ 6.5 ಗಂಟೆಗಳ ಕಾಲ ಸ್ಪೇಸ್ ವಾಕ್
ವಾಷಿಂಗ್ ಟನ್: ಬಾಹ್ಯಾಕಾಶ ನಿಲ್ದಾಣವನ್ನು ಅಪ್ ಗ್ರೇಡ್ ಮಾಡಲು ಅಂತಾರಾಷ್ಟ್ರೀಯ ಬಾಹ್ಯಾಕಾಶ ಸ್ಟೇಷನ್ ನ ಗಗನಯಾತ್ರಿಗಳು ಮಾ.24 ರಿಂದ ಮೊದಲುಗೊಂಡು 3 ಬಾರಿ ಬಾಹ್ಯಾಕಾಶದಲ್ಲಿ 6.5 ಗಂಟೆಗಳ ಕಾಲ ಸ್ಪೇಸ್ ವಾಕ್ ಮಾಡಲಿದ್ದಾರೆ. 
ವಾಣಿಜ್ಯ ಸಿಬ್ಬಂದಿಗಳ ದೃಷ್ಟಿಯಿಂದ ಬಾಹ್ಯಾಕಾಶವನ್ನು ಮತ್ತಷ್ಟು ಅಪ್ ಗ್ರೇಡ್ ಮಾಡುವುದು ಅಗತ್ಯವಿದ್ದು, ಪೂರ್ವಸಿದ್ಧತೆಯ ಭಾಗವಾಗಿ ಸ್ಪೇಸ್ ವಾಕ್ ನಡೆಯಲಿದೆ. ಮೊದಲನೆಯ ಸ್ಪೇಸ್ ವಾಕ್ ಮಾ.24 ರಂದು ನಡೆಯಲಿದ್ದು, ಮತ್ತೆರಡು ಸ್ಪೇಸ್ ವಾಕ್ ಕಾರ್ಯಕ್ರಮ ಏಪ್ರಿಲ್ 2 ಹಾಗೂ ಏಪ್ರಿಲ್ 7 ರಂದು ನಡೆಯಲಿದೆ. 
ವಾಣಿಜ್ಯ ಸಿಬ್ಬಂದಿಗಳ ಬಾಹ್ಯಾಕಾಶ ವಾಹನಕ್ಕೆ ಅವಕಾಶ ನೀಡುವ ಅಂತರರಾಷ್ಟ್ರೀಯ ಡಾಕಿಂಗ್ ಅಡಾಪ್ಟರ್ ನ್ನು ಸ್ಥಾಪಿಸುವುದಕ್ಕೆ ಪೂರಕವಾಗಿ ಪ್ರೆಷರೈಸ್ಡ್ ಮೇಟಿಂಗ್ ಅಡಾಪ್ಟರ್-3 (ಪಿಎಂಎ-3) ನ್ನು ತಯಾರು ಮಾಡಲು ಸಹ ಈ ಸ್ಪೇಸ್ ವಾಕ್ ನೆರವಾಗಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com