ಭಾರತದ ದೇಸಿ ನಿರ್ಮಿತ ಸಬ್‍ಸೋನಿಕ್ ಕ್ರೂಸ್ ಕ್ಷಿಪಣಿ ಪರೀಕ್ಷೆಗೆ ಸಿದ್ಧ

2016 ರ ಡಿಸೆಂಬರ್ ನಲ್ಲಿ ನಡೆದ ಪರೀಕ್ಷೆಯಲ್ಲಿ ವಿಫಲಗೊಂಡಿದ್ದ ದೇಸಿ ನಿರ್ಮಿತ ಸಬ್ ಸೋನಿ ಕ್ರೂಸ್ ಕ್ಷಿಪಣಿ ನಿರ್ಭಯ್ 5 ನೇ ಪರೀಕ್ಷೆಗೆ ಸಜ್ಜುಗೊಂಡಿದೆ.
ನಿರ್ಭಯ್ ಕ್ಷಿಪಣಿ
ನಿರ್ಭಯ್ ಕ್ಷಿಪಣಿ
ನವದೆಹಲಿ: 2016 ರ ಡಿಸೆಂಬರ್ ನಲ್ಲಿ ನಡೆದ ಪರೀಕ್ಷೆಯಲ್ಲಿ ವಿಫಲಗೊಂಡಿದ್ದ ದೇಸಿ ನಿರ್ಮಿತ ಸಬ್ ಸೋನಿ ಕ್ರೂಸ್ ಕ್ಷಿಪಣಿ ನಿರ್ಭಯ್ 5 ನೇ ಪರೀಕ್ಷೆಗೆ ಸಜ್ಜುಗೊಂಡಿದೆ. 
ಮುಂದಿನ ವಾರ ಕ್ಷಿಪಣಿಯ ಪರೀಕ್ಷೆ ನಡೆಸುವುದಕ್ಕೆ ಚಿಂತನೆ ನಡೆಸುತ್ತಿದ್ದೇವೆ ಎಂದು ಡಿಆರ್ ಡಿಒ ಮುಖ್ಯಸ್ಥ ಎಸ್ ಕ್ರಿಸ್ಟೊಫೋರ್ ತಿಳಿಸಿದ್ದಾರೆ. ಮೂರು ದಿನಗಳ ಅಂತಾರಾಷ್ಟ್ರೀಯ ಫಿಪ್ಸ್ಫಿಸಿಕಾನ್-2017 ಸಮ್ಮೇಳನದ ಪಾರ್ಶ್ವದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಈ ಹಿಂದಿನ ಪರೀಕ್ಷೆ ವೇಳೆಯಲ್ಲಿ ವಿಫಲವಾಗುವುದಕ್ಕೆ ಕಾರಣವಾಗಿದ್ದ ತೊಡಕುಗಳನ್ನು ನಿವಾರಿಸಲಾಗಿದೆ ಎಂದು ಡಿಆರ್ ಡಿಒ ಮುಖ್ಯಸ್ಥರು ತಿಳಿಸಿದ್ದಾರೆ. 
ನಿರ್ಭಯ್ ಕ್ಷಿಪಣಿ ದೇಶೀಯವಾಗಿ ನಿರ್ಮಿಸಿದ ಮೊದಲ ದೂರಗಾಮಿ ಖಂಡಾಂತರ ಕ್ಷಿಪಣಿಯಾಗಿದ್ದು, 2004ರಲ್ಲಿ ಸುಮಾರು 48 ಕೋಟಿ ರು.ಗಳ ವೆಚ್ಚದಲ್ಲಿ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿತ್ತು. ಈ ಹಿಂದೆ ನಡೆದ ಸತತ ನಾಲ್ಕು ಪರೀಕ್ಷೆಗಳಲ್ಲೂ ಕ್ಷಿಪಣಿ ವಿಫಲವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com