ಹೊರಗುತ್ತಿಗೆ ಏರಿಕೆ, ಉಪಗ್ರಹ ಉಡಾವಣೆಯನ್ನು ದ್ವಿಗುಣಗೊಳಿಸಲು ಇಸ್ರೋ ಯೋಜನೆ

ಹೆಚ್ಚುತ್ತಿರುವ ಬೇಡಿಕೆಯನ್ನು ತಲುಪುವ ಉದ್ದೇಶದಿಂದ ಉಪಗ್ರಹ ಉಡಾವಣೆಯನ್ನು ದ್ವಿಗುಣಗೊಳಿಸಿ, ಹೊರಗುತ್ತಿಗೆ ಏರಿಕೆ ಮಾಡುವುದಕ್ಕೆ ಇಸ್ರೋ ಯೋಜನೆ ರೂಪಿಸಿದೆ.
ಇಸ್ರೋ
ಇಸ್ರೋ
ಹೈದರಾಬಾದ್: ಹೆಚ್ಚುತ್ತಿರುವ ಬೇಡಿಕೆಯನ್ನು ತಲುಪುವ ಉದ್ದೇಶದಿಂದ ಉಪಗ್ರಹ ಉಡಾವಣೆಯನ್ನು ದ್ವಿಗುಣಗೊಳಿಸಿ, ಹೊರಗುತ್ತಿಗೆ ಏರಿಕೆ ಮಾಡುವುದಕ್ಕೆ ಇಸ್ರೋ ಯೋಜನೆ ರೂಪಿಸಿದೆ. 
ಈ ಬಗ್ಗೆ ಇಸ್ರೋ ಸ್ಯಾಟಲೈಟ್ ಕೇಂದ್ರದ ನಿರ್ದೇಶಕ ಮೈಲ್‌ಸ್ವಾಮಿ ಅಣ್ಣಾದುರೈ ಮಾಹಿತಿ ನೀಡಿದ್ದು, ಪ್ರಸ್ತುತ ವಾರ್ಷಿಕವಾಗಿ ಇಸ್ರೋ ತಾನು ನಿರ್ಮಿಸುವ 10 ಬಾಹ್ಯಾಕಾಶ ನೌಕೆಗಳನ್ನು ಉಡಾವಣೆ ಮಾಡುತ್ತಿದೆ. ಆದರೆ ಅಗತ್ಯತೆಗಳು ಹೆಚ್ಚುತ್ತಿದ್ದು, ಈ ಹಿನ್ನೆಲೆಯಲ್ಲಿ 2018-19 ರ ವೇಳೆಗೆ ಉಪಗ್ರಹ ಉಡಾವಣೆಯನ್ನು ದುಪ್ಪಟ್ಟುಗೊಳಿಸಿ  ವಾರ್ಷಿಕವಾಗಿ 18-20 ಉಪಗ್ರಹಗಳನ್ನು ಉಡಾವಣೆ ಮಾಡಲು ಚಿಂತನೆ ನಡೆಸಲಾಗಿದೆ ಎಂದು ಹೇಳಿದ್ದಾರೆ. 
ಇದೇ ವೇಳೆ ಹೊರಗುತ್ತಿಗೆ ಏರಿಕೆ ಮಾಡಲು ಉದ್ದೇಶಿಸಿರುವುದಾಗಿ ಇಸ್ರೋ ಅಧ್ಯಕ್ಷ ಕಿರಣ್ ಕುಮಾರ್ ಹೇಳಿದ್ದಾರೆ. ಇಸ್ರೋ 500 ಕ್ಕೂ ಹೆಚ್ಚು ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳೊಂದಿಗೆ ಜೊತೆಗೂಡಿದ್ದು ಹಲವು ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಈ ವರೆಗೂ 300 ತಂತ್ರಜ್ಞಾನಗಳನ್ನು ವಾಣಿಜ್ಯೋದ್ದೇಶಗಳಿಗಾಗಿ ಭಾರತದ ಇಂಡಸ್ಟ್ರಿಗಳೊಂದಿಗೆ ಹಂಚಿಕೊಳ್ಳಲಾಗಿದೆ ಎಂದು ಕಿರಣ್ ಕುಮಾರ್ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com