ಆನ್ ಲೈನ್ ಮಾರಾಟಗಾರರ ಬಗ್ಗೆ ಎಚ್ಚರ... ನಕಲಿ ಐಫೋನ್ ಎಕ್ಸ್ ಕೊಡಬಹುದು!

ಸಿಲಿಕಾನ್ ಸಿಟಿಯಲ್ಲಿ ಐಫೋನ್ ಎಕ್ಸ್ ಜ್ವರ ಜೋರಾಗಿದ್ದು, ನಗರದಲ್ಲಿ ಈಗಾಗಲೇ ಎಲ್ಲಾ ಹ್ಯಾಂಡ್ ಸೆಟ್ ಗಳು ಮಾರಾಟವಾಗಿದ್ದು,....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಐಫೋನ್ ಎಕ್ಸ್ ಜ್ವರ ಜೋರಾಗಿದ್ದು, ನಗರದಲ್ಲಿ ಈಗಾಗಲೇ ಎಲ್ಲಾ ಹ್ಯಾಂಡ್ ಸೆಟ್ ಗಳು ಮಾರಾಟವಾಗಿದ್ದು, ಹಲವು ಜನ ಐಫೋನ್ ಎಕ್ಸ್ ಅನ್ನು ಆನ್ ಲೈನ್ ಮೂಲಕ ಖರೀದಿಸುತ್ತಿದ್ದಾರೆ. ಆದರೆ ಈ ಮೊಬೈಲ್ ಗಳು ನಕಲಿಯಾಗಿರುವ ಸಾಧ್ಯತೆ ಇರುತ್ತದೆ ಎಂದು ಐಫೋನ್ ಸ್ಟೋರ್ ಮ್ಯಾನೇಜರ್ ಮತ್ತು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಐಫೋನ್ ಎಕ್ಸ್ ಈಗಾಗಲೇ 1.15 ಲಕ್ಷ ಮೊಬೈಲ್ ಗಳು ಮಾರಾಟವಾಗಿದ್ದು, ಇದರ ಮೂಲ ಬೆಲೆ 1.02 ಲಕ್ಷ ರುಪಾಯಿ ಇದೆ. ಆನ್ ಲೈನ್ ವೆಬ್ ಸೈಟ್  ಸುಮಾರು 400 ಮಾರಾಟಗಾರರನ್ನು ಹೊಂದಿದ್ದು, 64 ಜಿಬಿ ಮತ್ತು 256 ಜಿಬಿ ಮೊಬೈಲ್ ಅನ್ನು ಮಾರಾಟ ಮಾಡುತ್ತಿದ್ದಾರೆ. 
ಫೋನ್ ಖರೀದಿಸುವುದಾಗಿ ಸಿಟಿ ಎಕ್ಸ್ ಪ್ರೆಸ್ ಆನ್ ಲೈನ್ ಮಾರಾಟಗಾರರನ್ನು ಸಂಪರ್ಕಿಸಿದಾಗ, 'ನಾನು ದುಬೈಯಿಂದ 15 ಸೆಟ್ ಗಳನ್ನು ತರಿಸಿದ್ದು, ಆ ಪೈಕಿ 13 ಈಗಾಗಲೇ ಮಾರಾಟವಾಗಿದ್ದು, ಇನ್ನೂ ಎರಡು ಮಾತ್ರ ಉಳಿದಿವೆ' ಎಂದು ಹೇಳಿದ್ದಾರೆ. ಅಲ್ಲದೆ ಖರೀದಿ ಮಾಡುವವರು ಖರೀದಿಸುವ ಮುನ್ನ ಫೋನ್ ಅನ್ನು ಪರಿಶೀಲಿಸಬಹುದು ಮತ್ತು ನಾವು ಇದಕ್ಕೆ ಶೇ.110ರಷ್ಟು ಗ್ಯಾರಂಟಿ ನೀಡುತ್ತೇವೆ ಎಂದು ಮತ್ತೊಬ್ಬ ಮಾರಾಟಗಾರ ತಿಳಿಸಿದ್ದಾರೆ.
ಆನ್ ಲೈನ್ ಮಾರಾಟಗಾರರು ಹೆಚ್ಚಾಗಿ ನಕಲಿ ಫೋನ್ ಗಳನ್ನು ಮಾರಾಟ ಮಾಡುತ್ತಾರೆ. ಈ ರೀತಿ ಮಾಡುವುದು ಇದೇ ಮೊದಲೇನಲ್ಲ. ಗ್ರಾಹಕರು ನಮ್ಮ ಬಳಿ ಸರ್ವಿಸ್ ಗೆ ಬಂದಾಗ ಮಾತ್ರ ಅದು ನಕಲಿ ಎಂಬುದು ಗೊತ್ತಾಗುತ್ತದೆ ಎಂದು ಐಫೋನ್ ಸ್ಟೋರ್ ಮ್ಯಾನೇಜರ್ ಹರೀಶ್ ಅಗರವಾಲ್ ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com