"ಲಾಕಿ ರ‍್ಯಾನ್ಸಮ್ ವೇರ್" ಬಂದಿದೆ ಎಚ್ಚರ ಎಂದ ಸರ್ಕಾರ

'ಲಾಕಿ ರಮ್ಸಮ್ವೇರ್' ಎನ್ನುವ ಹೊಸ ಮಾಲವೇರ್ ಹರಡಿತು. ಸರ್ಕಾರ ಎಚ್ಚರಿಕೆ ನಿಡಿದೆ.
"ಲಾಕಿ ರಮ್ಸಮ್ವೇರ್" ಬಂದಿದೆ ಎಚ್ಚರ
"ಲಾಕಿ ರಮ್ಸಮ್ವೇರ್" ಬಂದಿದೆ ಎಚ್ಚರ
ನವದೆಹಲಿ: 'ಲಾಕಿ ರ‍್ಯಾನ್ಸಮ್ ವೇರ್' ಎನ್ನುವ ಹೊಸ ಮಾಲವೇರ್ ಹರಡಿತು. ಸರ್ಕಾರ ಎಚ್ಚರಿಕೆ ನಿಡಿದೆ. ಇದು ಕಂಪ್ಯೂಟರ್ ಗಳನ್ನು ಲಾಕ್ ಮಾಡಬಹುದು ಎಂದಿರುವ ಸರ್ಕಾರ "ಇಲಾಕಿ ರಮ್ಸಮ್ವೇರ್ ಗಳನ್ನು ಹರಡುವ ಸ್ಪ್ಯಾಮ್ ಬಗ್ಗೆ ಎಚ್ಚರಿಕೆ" ಎಂದು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಹೆಚ್ಚುವರಿ ಕಾರ್ಯದರ್ಶಿ ಅಜಯ್ ಕುಮಾರ್ ಟ್ವೀಟ್ ಮಾಡಿದ್ದಾರೆ.
ಲಾಕಿ ರ‍್ಯಾನ್ಸಮ್ ವೇರ್ ದುರುದ್ದೇಶದಿಂದ ಕೂಡಿದ ತಂತ್ರಾಂಶವಾಗಿದ್ದು, ಲಾಕಿ ರ‍್ಯಾನ್ಸಮ್ ವೇರ್ ಅಟ್ಯಾಕ್ ಆಗಿರುವ ಸಿಸ್ಟಮ್ ಗಳಿಂದ ಅದನ್ನುಬ್ ತೆಗೆದುಹಾಕಲು ಹಣದ ಬೇಡಿಕೆ ಇಡಲಾಗುತ್ತದೆ . ಸೈಬರ್ ಸ್ವಚ್ಚತಾ ಕೇಂದ್ರದಲ್ಲಿ ನೀಡಿರುವ ಎಚ್ಚರಿಕೆ ಇದಾಗಿದೆ. ವೈವಿದ್ಯಮಯ ಲಾಕಿ ರ‍್ಯಾನ್ಸಮ್ ವೇರ್ ತಂತ್ರಾಂಶ ಗಳಿದ್ದು ಇವನ್ನು ಹರಡಲು ಸ್ಪ್ಯಾಮ್ ಮೇಲ್ ಗಳು ಸಾಮಾನ್ಯ ವಿಷಯದ ಸಬ್ಜೆಕ್ಟ್ ನೊಂದಿಗೆ ಬಿತ್ತರವಾಗುತ್ತದೆ ಎಂದು ಅಲ್ಲಿ ತಿಳಿಸಲಾಗಿದೆ.
"ಈ ಕುರಿತಾಗಿ 23 ದಶಲಕ್ಷಕ್ಕೂ ಹೆಚ್ಚಿನ ಸಂದೇಶಗಳನ್ನು ಕಳುಹಿಸಲಾಗಿದೆ ಎಂದು ವರದಿ ಸೂಚಿಸಿದೆ . ಸಂದೇಶಗಳು 'ಪ್ಲೀಸ್ ಪ್ರಿಂಟ್', 'ಡಾಕ್ಯುಮೆಂಟ್', 'ಫೋಟೋ  ಇಮೇಜಸ್ 'ಸ್ಪ್ಯಾನ್' ಮುಂತಾದ ಸಾಮಾನ್ಯ ಸಬ್ಜೆಕ್ಟ್ ಗಳನ್ನು ಒಳಗೊಂಡಿರುತ್ತವೆ. ಎಲ್ಲರೂ ಇದರ ವಿರುದ್ದ ಎಚ್ಚರವಾಗಿರುವುದಕ್ಕಾಗಿ ಸರ್ಕಾರವು "ಹೈ ಅಲರ್ಟ್" ಎನ್ನುವ ಸೂಚನೆಯೊಡನೆ ಈ ಸಂದೇಶವನ್ನು ರವಾನಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com