ವಾಟ್ಸ್ ಅಪ್ ಬಳಕೆದಾರರಿಗೆ ಸಿಗಲಿದೆ ಸಂದೇಶಗಳನ್ನು 'ಹಿಂಪಡೆಯುವ' ಸೌಲಭ್ಯ!

ನೀವು ವಾಟ್ಸ್ ಆಪ್ ನಲ್ಲಿ ತಪ್ಪಾಗಿ ಯಾರಿಗಾದರೂ ಸಂದೇಶವನ್ನು ಕಳುಹಿಸಿದರೆ, ಇನ್ನು ಅದನ್ನೊಂದು ಸಮಸ್ಯೆ ಎಂದೆಣಿಸಬೇಕಿಲ್ಲ.
ವಾಟ್ಸ್ ಅಪ್
ವಾಟ್ಸ್ ಅಪ್
ಸ್ಯಾನ್ ಫ್ರಾನ್ಸಿಸ್ಕೋ: ನೀವು ವಾಟ್ಸ್ ಆಪ್ ನಲ್ಲಿ ತಪ್ಪಾಗಿ ಯಾರಿಗಾದರೂ ಸಂದೇಶವನ್ನು ಕಳುಹಿಸಿದರೆ, ಇನ್ನು ಅದನ್ನೊಂದು ಸಮಸ್ಯೆ ಎಂದೆಣಿಸಬೇಕಿಲ್ಲ. ಜನಪ್ರಿಯ ಮೆಸೆಂಜರ್ ಆಪ್ ವಾಟ್ಸ್ ಆಪ್  ತನ್ನ ಗ್ರಾಹಕರಿಗೆ ಸದ್ಯದಲ್ಲೇ 'ಅನ್ ಸೆಂಡ್' ಆಪ್ಷನ್ ನೀಡಲಿದೆ.
ವಾಟ್ಸ್ ಅಪ್ ಬೇಟಾ ಇನ್ಪೋ ಪ್ರಕಾರ, ವಾಟ್ಸ್ ಅಪ್ ನ  ಹೊಸ ವೈಶಿಷ್ಟ್ಯವಾದ 'ಡಿಲೀಟ್ ಫಾರ್ ಎವೆರಿ ಒನ್' ಆಪ್ಷನ್ ನ್ನು ವಾಟ್ಸ್ ಅಪ್ ಫ್ಯಾನ್ ಸೈಟ್ ಇದೀಗ ಪರೀಕ್ಷೆ ನಡೆಸುತ್ತಿದೆ.
ವಾಟ್ಸ್ ಅಪ್ ನಲ್ಲಿ ಈ ಹೊಸ ವೈಶಿಷ್ಟ್ಯ 'ಡಿಲೀಟ್ ಪಾರ್ ಎವೆರಿ ಒನ್' ಸದ್ಯದಲ್ಲಿಯೇ ಲಭ್ಯವಾಗುವುದಾಗಿ ವಾಟ್ಸ್ ಅಪ್ ಬೇಟಾ ಇನ್ಪೋ ಒಂದು ಟ್ವೀಟ್ ನಲ್ಲಿ ಹೇಳಿಕೊಂಡಿದೆ
ಈ ವೈಶಿಷ್ಟ್ಯದಿಂದಾಗಿ, ವಾಟ್ಸ್ ಅಪ್ ಬಳಕೆದಾರರು ವಾಟ್ಸ್ ಅಪ್ ನಲ್ಲಿ ತಾವು ತಪ್ಪಾಗಿ ಕಳಿಸಿದ ಪಠ್ಯಗಳು, ಚಿತ್ರಗಳು, ವೀಡಿಯೊಗಳು, ಜಿಫ್ ಫೈಲ್ ಗಳು, ಡಾಕ್ಯುಮೆಂಟ್ ಗಳು, ಟೆಕ್ಟ್ ಸಂದೇಶಗಳು ಎಲ್ಲವನ್ನೂ ಹಿಂಪಡೆಯಲು ಅಥವಾ ತೆಗೆದುಹಾಕಲು ಸಾಧ್ಯವಾಗುತ್ತದೆ ಎಂದು ದಿ ಇಂಡಿಪೆಂಡೆಂಟ್ ವರದಿ ಮಾಡಿದೆ.
ಈ ವೈಶಿಷ್ಟ್ಯದಿಂದಾಗಿ, ವಾಟ್ಸ್ ಅಪ್ ಬಳಕೆದಾರರು ವಾಟ್ಸ್ ಅಪ್ ನಲ್ಲಿ ತಾವು ತಪ್ಪಾಗಿ ಕಳಿಸಿದ ಪಠ್ಯಗಳು, ಚಿತ್ರಗಳು, ವೀಡಿಯೊಗಳು, ಜಿಫ್ ಫೈಲ್ ಗಳು, ಡಾಕ್ಯುಮೆಂಟ್ ಗಳು, ಟೆಕ್ಟ್ ಸಂದೇಶಗಳು ಎಲ್ಲವನ್ನೂ ಹಿಂಪಡೆಯಲು ಅಥವಾ ತೆಗೆದುಹಾಕಲು ಸಾಧ್ಯವಾಗುತ್ತದೆ ಎಂದು ದಿ ಇಂಡಿಪೆಂಡೆಂಟ್ ವರದಿ ಮಾಡಿದೆ.
ಆದಾಗ್ಯೂ, ಈಗಾಗಲೇ ಓದಿದ, ಐದು ನಿಮಿಷಗಳಿಗಿಂತ ಹೆಚ್ಚು ಸಮಯವಾದ ಸಂದೇಶಗಳನ್ನು ಈ ವೈಶಿಷ್ಟ್ಯದ ಮೂಲಕ ಹಿಂಪಡೆಯಲು, ತೆಗೆದುಹಾಕಲು ಬರುವುದಿಲ್ಲ. 
ಆಂಡ್ರಾಯ್ಡ್ ಮತ್ತು ಐಒಎಸ್ ಸಾಧನಗಳಲ್ಲಿನ ವಾಟ್ಸ್ ಆಪ್ ನಲ್ಲಿ ಈ ಸೌಲಭ್ಯವು ಶೀಘ್ರವಾಗಿ ಲಭ್ಯವಾಗುತ್ತದೆ.
ಬಳಕೆದಾರರು ಇತ್ತೀಚಿನ ಸಂದೇಶಗಳನ್ನು ಮಾತ್ರ ಎಡಿಟ್ ಮಾದಲು ಸಾಧ್ಯವಾಗುತ್ತದೆ ಹೊರತು ಹಳೆಯ ಸಂದೇಶಗಳನ್ನು ಅಲ್ಲ.
ವಾಟ್ಸ್ ಅಪ್  ಇಂದು 1.2 ಶತಕೋಟಿಗಿಂತ ಹೆಚ್ಚು ಸಕ್ರಿಯ ಬಳಕೆದಾರರನ್ನು ಹೊಂದಿದೆ. 10 ಭಾರತೀಯ ಭಾಷೆ ಸೇರಿದಂತೆ ಪ್ರಪಂಚದಾದ್ಯಂತ 50ಕ್ಕೂ ಹೆಚ್ಚು ವಿವಿಧ  ಭಾಷೆಗಳಲ್ಲಿ  ವಾಟ್ಸ್ ಅಪ್ ಲಭ್ಯವಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com