ಜಿಸ್ಯಾಟ್-6ಎ ಸಂಪರ್ಕವನ್ನು ಮರು ಸ್ಥಾಪಿಸಲು ಸತತ ಪ್ರಯತ್ನ: ಇಸ್ರೋ ಮುಖ್ಯಸ್ಥ

ಉಡಾವಣೆಯಾದ ಬೆನ್ನಲ್ಲೇ ಕಳೆದ ಶನಿವಾರ ಸಂಪರ್ಕ ಕಳೆದುಕೊಂಡ ಜಿಸ್ಯಾಟ್ 6ಎ ಉಪಗ್ರಹದ ....
ಕೆ.ಶಿವನ್
ಕೆ.ಶಿವನ್
Updated on

ಬೆಂಗಳೂರು: ಉಡಾವಣೆಯಾದ ಬೆನ್ನಲ್ಲೇ ಕಳೆದ ಶನಿವಾರ ಸಂಪರ್ಕ ಕಳೆದುಕೊಂಡ ಜಿಸ್ಯಾಟ್ 6ಎ ಉಪಗ್ರಹದ ಮರು ಸಂಪರ್ಕಗೊಳಿಸಲು ಹಾಸನದಲ್ಲಿರುವ ಇಸ್ರೋದ ನಿಯಂತ್ರಣ ಕೇಂದ್ರದಲ್ಲಿ ಇಸ್ರೋ ಅಧ್ಯಕ್ಷ ಕೆ.ಶಿವನ್ ಮತ್ತು ಇತರ ಪ್ರಮುಖ ವಿಜ್ಞಾನಿಗಳು ಹಗಲಿರುಳು ಶ್ರಮಿಸುತ್ತಿದ್ದಾರೆ.

ಜಿಸ್ಯಾಟ್ 6 ಎ ಉಪಗ್ರಹ ಸಂಪರ್ಕ ಕಳೆದುಕೊಂಡು ಸುಮಾರು 40 ಗಂಟೆಗಳಾಗುತ್ತಿವೆ. 2,140 ಕೆಜಿ ತೂಕದ ಜಿಸ್ಯಾಟ್-6ಎ ಉಪಗ್ರಹದ ಕಕ್ಷೆಯನ್ನು ಎತ್ತರಿಸಲು ವಿಜ್ಞಾನಿಗಳಿಗೆ ಸಾಧ್ಯವಾಗುತ್ತಿಲ್ಲ. ಉಪಗ್ರಹವನ್ನು ಹಾರಿಸಿಬಿಡುವಾಗ ವಿಜ್ಞಾನಿಗಳು 36,000 ಕಿಲೋ ಮೀಟರ್ ಸಮಭಾಜಕ ಮತ್ತು 83 ಡಿಗ್ರಿ ಪೂರ್ವ ರೇಖಾಂಶದ ಮೇಲೆ ಹಾರಿಸುವ ಯೋಜನೆಯಲ್ಲಿದ್ದರು.

ಈ ವಿಷಯವನ್ನು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಖಚಿತಪಡಿಸಿದ ಶಿವನ್, ವಿದ್ಯುತ್ ಕೊರತೆಯಿಂದ ಉಪಗ್ರಹ ಸಂಪರ್ಕ ಕಳೆದುಕೊಂಡಿದೆ. ವಿದ್ಯುತ್ ವೈಫಲ್ಯವಾದಾಗ ಉಪಗ್ರಹ ಸಹಜವಾಗಿ ಸುರಕ್ಷಿತ ವಿಧಾನಕ್ಕೆ ಹೋಗುತ್ತದೆ. ಆಗ ನಾವು ಸಂಪರ್ಕ ಕಳೆದುಕೊಳ್ಳುತ್ತೇವೆ ಎಂದು ಹಾಸನದಿಂದ ದೂರವಾಣಿ ಮೂಲಕ ಹೇಳಿದರು.

ಈ ರೀತಿ ಉಪಗ್ರಹಗಳು ಸಂಪರ್ಕ ಕಳೆದುಕೊಳ್ಳುವುದು ಆಗಾಗ  ನಡೆಯುವ ವಿದ್ಯಮಾನಗಳಾದರೂ ಕೂಡ ನಮ್ಮನ್ನು ಕಾಡುತ್ತಿರುವ ವಿಷಯವೇನೆಂದರೆ ನಾವು ಸಂಪರ್ಕ ಕಳೆದುಕೊಂಡು ಬಹಳ ಗಂಟೆಗಳೇ ಕಳೆದುಹೋಗಿದೆ. ಕಳೆದ ಶನಿವಾರ ಮಧ್ಯಾಹ್ನದ ಹೊತ್ತಿಗೆ ನಾವು ಸಂಪರ್ಕ ಕಳೆದುಕೊಂಡಿದ್ದೆೇವೆ ಎಂದು ಕಳವಳ ವ್ಯಕ್ತಪಡಿಸಿದರು.

ಇದು ಕೇವಲ ಇಸ್ರೋದಲ್ಲಿ ಮಾತ್ರವಲ್ಲ ಜಗತ್ತಿನ ಯಾವ ಭಾಗಗಳಲ್ಲಿ ಕೂಡ ಉಪಗ್ರಹಗಳನ್ನು ಉಡಾಯಿಸಿದ ಸಂದರ್ಭದಲ್ಲಿ ಇಂತಹ ಘಟನೆಗಳು ಆಗುತ್ತಿರುತ್ತವೆ. ಆದರೆ ಅದು ಸಾಮಾನ್ಯವಾಗಿ ಅಲ್ಪಾವಧಿಯವರೆಗೆ ಸಂಪರ್ಕ ಕಳೆದುಹೋಗುತ್ತವಷ್ಟೆ. ನಾವು ಸಂಪರ್ಕ ಕಳೆದುಕೊಂಡು 30 ಗಂಟೆಗಳಿಗೂ ಹೆಚ್ಚಾಗಿವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಆದರೂ ಉಪಗ್ರಹದ ಸಂಪರ್ಕ ಸಾಧಿಸಬೇಕೆಂಬ ತುಡಿತ ಮತ್ತು ಆಶಾವಾದ ನಮ್ಮಲ್ಲಿದೆ ಎಂದರು. ಒಂದು ವೇಳೆ ಸಂಪರ್ಕ ಸಾಧ್ಯವಾಗದಿದ್ದರೆ ನಾವು ಉಪಗ್ರಹ ಕಳೆದುಕೊಂಡಿದ್ದೇವೆ ಎಂದರ್ಥ. ಆದರೆ ಅದನ್ನು ಮರು ಸ್ಥಾಪಿಸಲು ನಾವು ತುಂಬಾ ಶ್ರಮಪಡುತ್ತಿದ್ದೇವೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com