ಫೇಸ್ ಬುಕ್ ಮೆಸೆಂಜರ್ ನಲ್ಲಿ ಇನ್ಮುಂದೆ 360 ಡಿಗ್ರಿ ಫೋಟೊ, ಹೆಚ್ ಡಿ ವಿಡಿಯೋ ಕಳಿಸುವ ಸೌಲಭ್ಯ

ಫೇಸ್ ಬುಕ್ ಸಂಸ್ಥೆ ತನ್ನ ಮೆಸೆಜಿಂಗ್ ಆಪ್ ನ್ನು ಮತ್ತಷ್ಟು ಆಕರ್ಷಕವಾಗಿಸಿದ್ದು, ಇನ್ನು ಮುಂದಿನ ದಿನಗಳಲ್ಲಿ ಫೇಸ್ ಬುಕ್ ಮೆಸೆಂಜರ್ ಮೂಲಕ 360 ಡಿಗ್ರಿ ಫೋಟೊ
ಫೇಸ್ ಬುಕ್ ಮೆಸೆಂಜರ್
ಫೇಸ್ ಬುಕ್ ಮೆಸೆಂಜರ್
ನವದೆಹಲಿ: ಫೇಸ್ ಬುಕ್ ಸಂಸ್ಥೆ ತನ್ನ ಮೆಸೆಜಿಂಗ್ ಆಪ್ ನ್ನು ಮತ್ತಷ್ಟು ಆಕರ್ಷಕವಾಗಿಸಿದ್ದು, ಇನ್ನು ಮುಂದಿನ ದಿನಗಳಲ್ಲಿ ಫೇಸ್ ಬುಕ್ ಮೆಸೆಂಜರ್ ಮೂಲಕ 360 ಡಿಗ್ರಿ ಫೋಟೊ ಹಾಗೂ ಹೆಚ್ ಡಿ ವಿಡಿಯೋಗಳನ್ನು ಕಳಿಸುವ ಸೌಲಭ್ಯ ಸಿಗಲಿದೆ. 
ಐಒಎಸ್ ಹಾಗೂ ಆಂಡ್ರಾಯ್ಡ್ ಗಳಲ್ಲಿ ಈ ಸೌಲಭ್ಯ ಲಭ್ಯವಾಗಿರಲಿದ್ದು, ಮೆಸೆಂಜರ್ ನಲ್ಲಿ ಫೋಟೋ ಕಳಿಸುವುದು ಮತ್ತಷ್ಟು ಆಕರ್ಷಕವಾಗಿರಲಿದೆ.  ವರ್ಷದ ಪ್ರಾರಂಭದಲ್ಲಿ ಮೆಸೆಂಜರ್ ಮೂಲಕ ಫೋಟೊಗಳು, ವಿಡಿಯೋ, ಸ್ಟಿಕರ್, ಜಿಫ್ ಗಳನ್ನು ಕಳಿಸುವ ಸೌಲಭ್ಯವನ್ನು ಮೆಸೆಂಜರ್ ಒದಗಿಸಿತ್ತು. ಹೊಸ ಆಯ್ಕೆಗಳನ್ನು ಬಳಸಲು ಗ್ರಾಹಕರು ಮೆಸೆಂಜರ್ ಆಪ್ ನ ಇತ್ತೀಚಿನ ಆವೃತ್ತಿಯನ್ನು ಅಪ್ಡೇಟ್ ಮಾಡಿಕೊಳ್ಳಬೇಕಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com