ನೋಕಿಯಾ ಮೊಬೈಲ್ ಫೋನ್ ಗಳನ್ನು ಉತ್ಪಾದಿಸುವ ಹೆಚ್ ಎಂ ಡಿ ಗ್ಲೋಬಲ್ ತಯಾರಕ ಸಂಸ್ಥೆ, ನೋಕಿಯಾ 6, ನೋಕಿಯಾ 8 ಸಿರೊಕ್ಕಾ, ನೋಕಿಯಾ 7 ಪ್ಲಸ್ ಮೊಬೈಲ್ ಫೋನ್ ಗಳನ್ನು 2018 ರಲ್ಲಿ ಬಿಡುಗಡೆ ಮಾಡಿತ್ತು. 16,999 ರ ಬೆಲೆಯಲ್ಲಿ ನೋಕಿಯಾ 6 ಫೋನ್ ಲಭ್ಯವಿದ್ದು, ಫೆಬ್ರವರಿಯಲ್ಲಿ ನಡೆದಿದ್ದ ವರ್ಲ್ಡ್ ಕಾಂಗ್ರೆಸ್ ನಲ್ಲಿ ಪ್ರದರ್ಶನಗೊಂಡಿತ್ತು.