ಸೂರ್ಯನ ಬೆಳಕಿನಿಂದ ಹೈಡ್ರೋಜನ್ ಇಂಧನ ಉತ್ಪಾದನೆ: ವಿಜ್ಞಾನಿಗಳ ಆವಿಷ್ಕಾರ

ಒಂದು ಗಂಟೆಯ ಕಾಲ ಸೂರ್ಯನ ಬೆಳಕಿನಿಂದ ಸಿಗುವ ಶಕ್ತಿ, ಮನುಕುಲ ಒಂದು ವರ್ಷ ವ್ಯಯಿಸುವ ಒಟ್ಟಾರೆ ಶಕ್ತಿಗೆ ಸಮನಾಗಿದೆ.
ಸೂರ್ಯನ ಬೆಳಕಿನಿಂದ ಹೈಡ್ರೋಜನ್ ಇಂಧನ ಉತ್ಪಾದನೆ ಮಾಡುವ ವಿಧಾನ ಕಂಡುಹಿಡಿದ ವಿಜ್ಞಾನಿಗಳು!
ಸೂರ್ಯನ ಬೆಳಕಿನಿಂದ ಹೈಡ್ರೋಜನ್ ಇಂಧನ ಉತ್ಪಾದನೆ ಮಾಡುವ ವಿಧಾನ ಕಂಡುಹಿಡಿದ ವಿಜ್ಞಾನಿಗಳು!
ಬೆಂಗಳೂರು: ಒಂದು ಗಂಟೆಯ ಕಾಲ ಸೂರ್ಯನ ಬೆಳಕಿನಿಂದ ಸಿಗುವ ಶಕ್ತಿ, ಮನುಕುಲ ಒಂದು ವರ್ಷ ವ್ಯಯಿಸುವ ಒಟ್ಟಾರೆ ಶಕ್ತಿಗೆ ಸಮನಾಗಿದೆ. ಸೌರ ಶಕ್ತಿ ಇಷ್ಟು ಅಗಾಧ ಪ್ರಮಾಣದಲ್ಲಿ ಲಭ್ಯವಿದ್ದರೂ ಅದನ್ನು ಬಳಕೆ ಮಾಡಲು ಯೋಗ್ಯವಾಗುವಂತೆ ಮಾಡುವ ಸಾಧನವನ್ನು ಕಂಡುಕೊಳ್ಳುವುದು ಮನುಷ್ಯನಿಗೆ ಸವಾಲಿನ ಸಂಗತಿಯೇ ಆಗಿತ್ತು. 
ಆದರೆ ಈಗ ಸಂಶೋಧಕರು ಸೂರ್ಯನ ಬೆಳಕಿನಿಂದ ಹೈಡ್ರೋಜನ್ ಇಂಧನ ಉತ್ಪಾದನೆ ಮಾಡುವ ವಿಧಾನವನ್ನು ಕಂಡುಹಿಡಿದ್ದಿದ್ದಾರೆ. ಬ್ರಿಟನ್ ನಲ್ಲಿರುವ ಭಾರತೀಯ ಮೂಲದ ಸಂಶೋಧಕ  ಗೊವಿಂದರ್ ಸಿಂಗ್ ಪವಾರ್ ಸೋಲಾರ್ ಇಂಧನಕ್ಕೆ ಆಶಾಕಿರಣವಾಗಬಲ್ಲ ಸಂಶೋಧನೆಯೊಂದನ್ನು ಮಾಡಿದ್ದಾರೆ. 
ಸೂರ್ಯನ ಬೆಳಕನ್ನು ಬಳಸಿಕೊಂಡು ನೀರಿನಲ್ಲಿರುವ ಹೈಡ್ರೋಜನ್ ಹಾಗೂ ಆಕ್ಸಿಜನ್ ಅಂಶಗಳನ್ನು ವಿಭಜನೆ ಮಾಡುವ ವಿಧಾನವನ್ನು ಸಂಶೋಧಕರು ಕಂಡುಕೊಂಡಿದ್ದು, ಹೀಗೆ ಬೇರ್ಪಟ್ಟ ಹೈಡ್ರೋಜನ್ ನ್ನು ವಾಹನ ಹಾಗೂ ಮನೆಗಳಿಗೆ ದಿನನಿತ್ಯದ  ಬಳಕೆಯ ಇಂಧನವನ್ನಾಗಿ ಬಳಕೆ ಮಾಡಬಹುದೆಂದು ಸೈಂಟಿಫಿಕ್ ರಿಪೋಟ್ಸ್ ಜರ್ನಲ್ ನಲ್ಲಿ ಪ್ರಕಟಗೊಂಡಿರುವ ಸಂಶೋಧನಾ ವರದಿಯಲ್ಲಿ ತಿಳಿಸಲಾಗಿದೆ. 
ಸಿಂಥಟಿಕ್ ಫೋಟೊ ಸಿಂಥಸಿಸ್ (synthetic photosynthesis) ವಿಧಾನದ ಮೂಲಕ ಹೈಡ್ರೋಜನ್ ಇಂಧನ ತಯಾರಿಸಬಹುದಾಗಿದ್ದು, ಇದರಿಂದ ಕಾರ್ಬನ್ ಎಮಿಷನ್ ಕೂಡ ಕಡಿಮೆಯಾಗಲಿದೆ. ಅಷ್ಟೇ ಅಲ್ಲದೇ ಅಪಾರ ಪ್ರಮಾಣದ ಇಂಧನವನ್ನೂ ಉತ್ಪಾದನೆ ಮಾಡಬಹುದಾಗಿದೆ ಎಂದು ಸಂಶೋಧನಾ ವರದಿಯಲ್ಲಿ ತಿಳಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com