ಹಿನ್ನೋಟ: 2018 ರಲ್ಲಿ ಭಾರತೀಯ ಬಾಹ್ಯಾಕಾಶದ ಸಾಧನೆಗಳು

2018, ಭಾರತೀಯ ಭಾಹ್ಯಾಕಾಶ ಸಾಧನೆಗಳಲ್ಲಿ ಹಲವು ಪ್ರಥಮಗಳನ್ನು ಕಂಡ ವರ್ಷ. ಗಗನ್ ಯಾನ್ ಮಿಷನ್ ಗೆ ಸರ್ಕಾರದ ಅನುಮೋದನೆ ಸಿಕ್ಕಿದ್ದು, ಅತಿ ಹೆಚ್ಚು ತೂಕದ ರಾಕೆಟ್ ಗಳ ಉಡಾವಣೆ...
ಹಿನ್ನೋಟ: 2018 ರಲ್ಲಿ ಭಾರತೀಯ ಬಾಹ್ಯಾಕಾಶದ ಸಾಧನೆಗಳು
ಹಿನ್ನೋಟ: 2018 ರಲ್ಲಿ ಭಾರತೀಯ ಬಾಹ್ಯಾಕಾಶದ ಸಾಧನೆಗಳು
2018, ಭಾರತೀಯ ಭಾಹ್ಯಾಕಾಶ ಸಾಧನೆಗಳಲ್ಲಿ ಹಲವು ಪ್ರಥಮಗಳನ್ನು ಕಂಡ ವರ್ಷ. ಗಗನ್ ಯಾನ್ ಮಿಷನ್ ಗೆ ಸರ್ಕಾರದ ಅನುಮೋದನೆ ಸಿಕ್ಕಿದ್ದು, ಅತಿ ಹೆಚ್ಚು ತೂಕದ ರಾಕೆಟ್ ಗಳ ಉಡಾವಣೆ, ಲೀ-ಐಯಾನ್ ಬ್ಯಾಟರಿ ತಂತ್ರಜ್ಞಾನ ಅಳವಡಿಕೆ, ಉಪಗ್ರಹ ರಾಕೆಟ್ ಗಳಲ್ಲಿ ಹೊಸ ತಂತ್ರಜ್ಞಾನ ಅಳವಡಿಕೆ, ಐಡಿಆರ್ ಎಸ್ಎಸ್ ಸೇರಿದಂತೆ ಹಲವು ಪರಿಣಾಮಕಾರಿ ನಿರ್ಧಾರಗಳನ್ನು ಕೈಗೊಂಡಿದ್ದು ಇದೇ ವರ್ಷದಲ್ಲಿ
ವರ್ಷಾಂತ್ಯದ ವೇಳೆ ಸೇನಾ ಸಂವಹನ ಉಪಗ್ರಹ ಜಿಸ್ಯಾಟ್-7 ಉಡಾವಣೆ: ಸೇನಾ ಸಂವಹನ ಉಪಗ್ರಹ ಜಿಸ್ಯಾಟ್- 7ಎ ನ್ನು ವರ್ಷಾಂತ್ಯದ ವೇಳೆಗೆ ಡಿ.22 ರಂದು ಉಡಾವಣೆ  ಮಾಡಲಾಗಿತ್ತು. ಭಾರತೀಯ ವಾಯುಪಡೆಯ ಕಾರ್ಯ ಚಟುವಟಿಕೆಗಳಿಗೆ ಬಲ ತುಂಬುವ ನಿಟ್ಟಿನಲ್ಲಿ ಜಿಸ್ಯಾಟ್-7ಎ ಮಿಲಿಟರಿ ಸಂವಹನ ಉಪಗ್ರಹ ಸಹಕಾರಿಯಾಗಲಿದ್ದು ಇದನ್ನು ಇದು ಇಂಡಿಯನ್ ಆ್ಯಂಗ್ರಿಬರ್ಡ್ ಎಂದೇ ಪರಿಗಣಿಸಲಾಗಿದೆ. 
ಜಿಸ್ಯಾಟ್ 7ಎ ಉಪಗ್ರಹವು 2018ರಲ್ಲಿ ಶ್ರೀಹರಿಕೋಟದಿಂದ ನಡೆದಿರುವ ಏಳನೇ ಉಡಾವಣೆಯಾಗಿದೆ. ಅಲ್ಲದೇ ಇಸ್ರೊ ಅಭಿವೃದ್ಧಿಪಡಿಸಿದ 39ನೇ ಸಂವಹನ ಉಪಗ್ರಹವಾಗಿದೆ. ಭಾರತೀಯ ವಾಯುಪಡೆಯ ವಾಯು ನೆಲೆಗಳ ನಡುವೆ ಸಂಪರ್ಕ ಒದಗಿಸಲು, ಕಾರ್ಯಾಚರಣೆ ನಡೆಸಲು ಮತ್ತು ಸೇನಾಪಡೆಯ ಯುದ್ಧ ವಿಮಾನಗಳು ಹಾರಾಟ ನಡೆಸುವ ವೇಳೆ ಸಂವಹನ ನಡೆಸಲು ಇದು ನೆರವು ನೀಡಲಿದೆ. ಜಿಸ್ಯಾಟ್- 7ಎ, ಐಎಎಫ್‍ಗಾಗಿಯೇ ಸಿದ್ಧಪಡಿಸಲಾದ ಮೊದಲ ಉಪಗ್ರಹವಾಗಿದೆ. 
ಇಸ್ರೋದಲ್ಲೂ ಸ್ವಚ್ಛ ಭಾರತ ಮಿಷನ್: ಕೇಳಿದರೆ ಅಚ್ಚರಿ ಅನ್ನಿಸಬಹುದು, ಆದರೆ ಇಸ್ರೋ ಕೂಡಾ ಸ್ವಚ್ಛ ಭಾರತ ಮಿಷನ್ ಕೈಗೊಂಡಿತ್ತು. ಹೌದು, ಹಲವು ವರ್ಷಗಳಿಂದ ಬಾಕಿ ಇದ್ದ ಉಪಗ್ರಹ ಉಡಾವಣೆಯನ್ನು ಪೂರ್ಣಗೊಳಿಸಿ ಕ್ಲಿಯರ್ ಮಾಡಿದ ವರ್ಷ 2018. ಎನ್ಎವಿಐಸಿ (ಜಿಪಿಎಸ್ ಮಾದರಿಯ ಪ್ರಾದೇಶಿಕ ಉಪಗ್ರಹ ಸಂಚಾರ ವ್ಯವಸ್ಥೆ) ಉಪಗ್ರಹ ಸಮೂಹವನ್ನು ಪೂರ್ಣಗೊಳಿಸಲಾಗಿದ್ದು, GSAT 29, GSAT 11, GSAT 6A and GSAT 7A ಸೇರಿದಂತೆ ಹಲವು ಉಪಗ್ರಹಗಳನ್ನು ಉಡಾವಣೆ ಮಾಡಲಾಗಿತ್ತು. 
ಶಿವನ್ ಅಧಿಕಾರ ಸ್ವೀಕಾರ: 2018 ರಲ್ಲಿ ಹಲವು ಪ್ರಥಮಗಳನ್ನು ಕಂಡಿದ್ದ ಇಸ್ರೋಗೆ ನೂತನ ಅಧ್ಯಕ್ಷರಾಗಿ ಕೆ.ಶಿವನ್ ಸಹ 2018 ರಲ್ಲೇ 
ಚಂದ್ರಯಾನ-2:  ಚಂದ್ರಯಾನ-1 ರ ಯಶಸ್ಸಿನಲ್ಲಿದ್ದ ಇಸ್ರೋ ಚಂದ್ರಯಾನ-2 ಕ್ಕೆ ತಯಾರಿ ನಡೆಸುತ್ತಿದ್ದು, ಚಂದ್ರಯಾನಕ್ಕೆ ಸಂಬಂಧಪಟ್ಟ ಎಲ್ಲಾ ತಾಂತ್ರಿಕ ಅಂಶಗಳು ಅಂತಿಮಗೊಂಡಿದ್ದು, ವೈಜ್ಞಾನಿಕ ಉಪಕರಣಗಳು ಸಿದ್ಧಗೊಂಡಿದ್ದು 2018 ರಲ್ಲಿ 
ಲೀ ಐಯಾನ್ ಬ್ಯಾಟರಿ ತಂತ್ರಜ್ಞಾನ: ಇಸ್ರೋ ತಯಾರಿಕೆಯ ಐಯಾನ್ ಬ್ಯಾಟರಿ ತಂತ್ರಜ್ಞಾನಕ್ಕೆ ಸುಮಾರು 100 ಕ್ಕೂ ಹೆಚ್ಚು ಇಂಡಸ್ಟ್ರಿಗಳು ಆಸಕ್ತಿ ತೋರಿದ್ದು, 14 ಸಂಸ್ಥೆಗಳನ್ನು ಅಂತಿಮಗೊಳಿಸಲಾಗಿತ್ತು. ಬ್ಯಾಟರಿ ತಯಾರಿಕೆಯ ತಂತ್ರಜ್ಞಾನವನ್ನು ಇಸ್ರೋ ಬಿಹೆಚ್ ಇಎಲ್ ಗೆ ಸ್ಪೇಸ್-ಗ್ರೇಡ್ ಲಿಥಿಯಮ್ ಬ್ಯಾಟರಿಗಳನ್ನು ಉತ್ಪಾದಿಸುವುದಕ್ಕೆ  ವರ್ಗಾವಣೆ ಮಾಡಿದ್ದು ಇಸ್ರೋದ 2018 ರ ಸಾಧನೆಗಳ ಪಟ್ಟಿಯಲ್ಲಿ ಮಹತ್ವವಾಗಿದ್ದಾಗಿದೆ. 
ವಿದೇಶಿ ಉಪಗ್ರಹಗಳ ಉಡಾವಣೆ:  ಇಸ್ರೋ ವಿದೇಶಿ ಉಪಗ್ರಹಗಳನ್ನು ಉಡಾವಣೆ ಮಾಡುವುದರಲ್ಲಿ ದಾಖಲೆ ನಿರ್ಮಿಸಿದ್ದು, ಒಟ್ಟಾರೆ 269 ವಿದೇಶಿ ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿ ಮಹತ್ತರವಾದ ಮೈಲುಗಲ್ಲು ಸ್ಥಾಪಿಸಿದೆ.
2018 ರಲ್ಲಿ ಇಸ್ರೋ ಮೈಲುಗಲ್ಲಿನ ಮುಖ್ಯಾಂಶಗಳು: 
  • ಪ್ರಧಾನಿ ನರೇಂದ್ರ ಮೋದಿಯಿಂದ 2022ಕ್ಕೆ ಮಾನವ ಸಹಿತ ಬಾಹ್ಯಾಕಾಶ ಯೋಜನೆ ಘೋಷಣೆ 
  • ಮಾನವ ಸಹಿತ ಬಾಹ್ಯಾಕಾಶ ಯೋಜನೆಯ ಭಾಗವಾಗಿ ಬಾಹ್ಯಾಕಾಶ ಸಿಬ್ಬಂದಿ ಎಸ್ಕೇಪ್ ಮಾಡ್ಯೂಲ್  
  • ಮಾನವ ಸಹಿತ ಬಾಹ್ಯಾಕಾಶ ಯೋಜನೆಗೆ ಪರೀಕ್ಷಿಸಲ್ಪಟ್ಟ ತಂತ್ರಜ್ಞಾನಗಳು
  • ಭಾರತದ ಅತಿ ಹೆಚ್ಚು ತೂಕದ ಉಪಗ್ರಹ ಜಿಎಸ್ ಎಟಿ-11 ಕಕ್ಷೆಗೆ 
  • ರಾಕೆಟ್ ಗಳಿಗಾಗಿ ಘನ ಇಂಧನ ಬೂಸ್ಟರ್ಸ್ ಗಳ ಉತ್ಪಾದನೆಗೆ ಹೆಚ್ಚಿನ ಒತ್ತು
  • 100 ನೇ ಉಪಗ್ರಹ ಉಡಾವಣೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com