ಈ ಡಿಎನ್ಎ ಪರೀಕ್ಷೆ ಮೂಲಕ ಮಕ್ಕಳಲ್ಲಿನ 193 ವಿಧದ ವಂಶವಾಹಿ ರೋಗ ಪತ್ತೆ ಸಾಧ್ಯ!

ರಕ್ತಹೀನತೆ, ಅಪಸ್ಮಾರ ಮತ್ತು ಚಯಾಪಚಯ ಅಸ್ವಸ್ಥತೆಗಳು ಸೇರಿ ನವಜಾತ ಶಿಶುಗಳಲ್ಲಿರಬಹುದಾದ 193 ವಿಧದ ವಂಶವಾಹಿ ರೋಗಗಳನ್ನು ಪತ್ತೆ ಮಾಡುವುದಕ್ಕೆ ವಿಜ್ಞಾನಿಗಳು ಹೊಸ ಡಿಎನ್ಎ ಪರೀಕ್ಷೆಯನ್ನು
ಡಿಎನ್ಎ
ಡಿಎನ್ಎ
Updated on

ನ್ಯೂಯಾರ್ಕ್: ರಕ್ತಹೀನತೆ, ಅಪಸ್ಮಾರ ಮತ್ತು ಚಯಾಪಚಯ ಅಸ್ವಸ್ಥತೆಗಳು ಸೇರಿ ನವಜಾತ ಶಿಶುಗಳಲ್ಲಿರಬಹುದಾದ 193 ವಿಧದ ವಂಶವಾಹಿ ರೋಗಗಳನ್ನು ಪತ್ತೆ ಮಾಡುವುದಕ್ಕೆ ವಿಜ್ಞಾನಿಗಳು ಹೊಸ ಡಿಎನ್ಎ ಪರೀಕ್ಷೆಯನ್ನು ಕಂಡುಹಿಡಿದಿದ್ದಾರೆ.

ಸೆಮಾ 4 ನಟಾಲಿಸ್ ಎಂಬ ಹೊಸ ವಿಧದ ಡಿಎನ್ಎ ಪರೀಕ್ಷೆ ಮೂಲಕ ನವಜಾತ ಶಿಶುಗಳಲ್ಲಿ ಇರಬಹುದಾದ 193 ವಿಧದ ವಂಶವಾಹಿ ರೋಗವನ್ನು ಪತ್ತೆ ಮಾಡುವುದಕ್ಕೆ ಸಾಧ್ಯವಾಗಲಿದೆ.

ಶಿಶುವಿನ ಆರೋಗ್ಯದ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಪೋಷಕರಿಗೆ ಈ ಡಿಎನ್ಎ ಪರೀಕ್ಷೆ ಸಹಕಾರಿಯಾಗಲಿದೆ. ನೆಕ್ಸ್ಟ್ ಜನರೇಷನ್ ಟೆಕ್ನಾಲಜಿ ಸಹಕಾರದಿಂದ ನಡೆಸುವ ಈ ಪರೀಕ್ಷೆಗೆ 10 ವರ್ಷಗಳವರೆಗಿನ ಮಕ್ಕಳನ್ನು ಒಳಪಡಿಸಬಹುದಾಗಿದೆ.

ಈ ಡಿಎನ್ಎ ಪರೀಕ್ಷೆ ಮೂಲಕ ಶಿಶುಗಳಲ್ಲಿ ರೋಗ ಉಲ್ಬಣಿಸುವ ಮುನ್ನವೇ ಅವುಗಳನ್ನು ತಿಳಿದುಕೊಳ್ಳಬಹುದಾಗಿದ್ದು, ಮುಂಜಾಗೃತಾ ಕ್ರಮವನ್ನು ಕೈಗೊಳ್ಳಬಹುದಾಗಿದೆ ಎಂದು ಸೆಮಾ4 ನ ಸಿಇಒ ಹಾಗೂ ಸ್ಥಾಪಕ ಎರಿಕ್ ಸ್ಕ್ಯಾಟ್ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com