ಪುಣೆ: ಮೃತ ಪುತ್ರನ ಸಂರಕ್ಷಿಸಿಟ್ಟಿದ್ದ ವೀರ್ಯದಿಂದ ಅವಳಿ ಮೊಮ್ಮಕ್ಕಳನ್ನು ಪಡೆದ ದಂಪತಿ!

ಪುಣೆಯಲ್ಲಿ ನಡೆದಿರುವ ಈ ಪ್ರಕರಣ ಐವಿಎಫ್ ತಂತ್ರಜ್ಞಾನದಿಂದ ಮಕ್ಕಳನ್ನಷ್ಟೇ ಪಡೆಯಬಹುದೋ ಅಥವಾ ಮೊಮ್ಮಕ್ಕಳನ್ನೂ ಪಡೆಯಬಹುದೋ ಎಂಬ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.
ಮೃತ ಪುತ್ರನ ಸಂರಕ್ಷಿಸಿದ ವೀರ್ಯದಿಂದ ಅವಳಿ ಮೊಮ್ಮಕ್ಕಳನ್ನು ಪಡೆದ ಕುಟುಂಬ!
ಮೃತ ಪುತ್ರನ ಸಂರಕ್ಷಿಸಿದ ವೀರ್ಯದಿಂದ ಅವಳಿ ಮೊಮ್ಮಕ್ಕಳನ್ನು ಪಡೆದ ಕುಟುಂಬ!
Updated on
ಪುಣೆ: ಪುಣೆಯಲ್ಲಿ ನಡೆದಿರುವ ಈ ಪ್ರಕರಣ ಐವಿಎಫ್ ತಂತ್ರಜ್ಞಾನದಿಂದ ಮಕ್ಕಳನ್ನಷ್ಟೇ ಪಡೆಯಬಹುದೋ ಅಥವಾ ಮೊಮ್ಮಕ್ಕಳನ್ನೂ ಪಡೆಯಬಹುದೋ ಎಂಬ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ. 
ಆತ ಜರ್ಮನಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಪ್ರತಿಭಾನ್ವಿತ ವಿದ್ಯಾರ್ಥಿ. 27 ವರ್ಷಕ್ಕೇ ಬ್ರೈನ್ ಟ್ಯೂಮರ್ ಗೆ ತುತ್ತಾಗಿ ಮೃತಪಟ್ಟಿದ್ದ. ಒಬ್ಬನೇ ಮಗನನ್ನು ಕಳೆದುಕೊಂಡಿದ್ದ ಪೋಷಕರಿಗೆ ಆಶಾಕಿರಣವಾಗಿ ಕಂಡಿದ್ದು ಮೃತ ಪುತ್ರನಿಂದ ಸಂರಕ್ಷಿಸಲ್ಪಟ್ಟಿದ್ದ ವೀರ್ಯ, ಮಗನನ್ನು ಕಳೆದುಕೊಂಡು ದುಃಖದಲ್ಲಿದ್ದ ದಂಪತಿಗಳು 2 ವರ್ಷಗಳ ನಂತರ ಮೃತ ಪುತ್ರನಿಂದ ಸಂರಕ್ಷಿಸಲಾಗಿದ್ದ ವೀರ್ಯವನ್ನು ಬಳಸಿ ಮೊಮ್ಮಕ್ಕಳನ್ನು ಪಡೆದಿದ್ದಾರೆ. 
ಜರ್ಮನಿಯಲ್ಲಿ ಓದುತ್ತಿದ್ದ ಪುಣೆ ದಂಪತಿಯ ಪುತ್ರನಿಗೆ 2013 ರಲ್ಲಿ ಬ್ರೈನ್ ಟ್ಯೂಮರ್ ಕಾಣಿಸಿಕೊಂಡಿತ್ತು, ಕಿಮೋಥೆರೆಪಿ ಚಿಕಿತ್ಸೆಯಿಂದಾಗಿ ಆತನಲ್ಲಿ ಸಂತಾನೋತ್ಪತ್ತಿ ಸಾಮರ್ಥ್ಯ ಕುಗ್ಗಬಹುದೆಂಬ ಮುಂಜಾಗೃತೆಯಿಂದ ವೈದ್ಯರು ಆತನ ಅನುಮತಿ ಪಡೆದು ವೀರ್ಯವನ್ನು ಸಂಗ್ರಹಿಸಿಟ್ಟಿದ್ದರು. ಆದರೆ 2016 ರ ಸೆಪ್ಟೆಂಬರ್ ನಲ್ಲಿ ಆ ಯುವಕ ಮೃತಪಟ್ಟಿದ್ದ. ಈ ಬೆನ್ನಲ್ಲೇ ಮೊಮ್ಮಕ್ಕಳನ್ನು ಪಡೆಯುವುದಕ್ಕೆ ನಿರ್ಧರಿಸಿದ್ದ ಪೋಷಕರು ಮಗನ ಜರ್ಮನಿಯ ಸ್ಪರ್ಮ್ ಬ್ಯಾಂಕ್ ನಿಂದ ಮಗನ ಸಂರಕ್ಷಿಸಿದ ವೀರ್ಯವನ್ನು ತರಿಸಿಕೊಂಡು ಐವಿಎಫ್ ಗಾಗಿ ಪುಣೆಯ ಸಹ್ಯಾದ್ರಿ ಆಸ್ಪತ್ರೆಯನ್ನು ಸಂಪರ್ಕಿಸಿದ್ದರು. ಅಲ್ಲಿನ ವೈದ್ಯರೂ ಸಹಕರಿಸಿ, ಎಲ್ಲವೂ ಅಂದುಕೊಂಡಂತೆಯೇ ನಡೆಯಿತು. ಆರಂಭದಲ್ಲಿ 49 ವರ್ಷದ ಆತನ  ತಾಯಿಯೇ ಗರ್ಭಧರಿಸಲು ನಿರ್ಧರಿಸಿದ್ದರು. ಆದರೆ ದೈಹಿಕವಾಗಿ ಸದೃಢವಾಗಿರದ ಕಾರಣ ಆಕೆಯ ಸೋದರಸಂಬಂಧಿಯೊಬ್ಬರು ಬಾಡಿಗೆ ತಾಯಿಯಾಗಲು ಒಪ್ಪಿಗೆ ಸೂಚಿಸಿದ್ದರು. ಎಲ್ಲವೂ ಅಂದುಕೊಂಡಂತೆಯೇ ನಡೆದಿದ್ದು, ಮಗನನ್ನು ಕಳೆದುಕೊಂಡ ಪೋಷಕರು ಈಗ ಬಾಡಿಗೆ ತಾಯಿಯ ಮೂಲಕ ಅವಳಿ ಮೊಮ್ಮಕ್ಕಳನ್ನು ಪಡೆದಿದ್ದಾರೆ. 
ಮೃತಪಟ್ಟ ನಂತರವೂ ವ್ಯಕ್ತಿ ಮಕ್ಕಳನ್ನು ಪಡೆಯಬಹುದಾ? ಬಾಡಿಗೆ ತಾಯಿಯ ಮೂಲಕ ಮೊಮ್ಮಕ್ಕಳನ್ನು ಪಡೆದ ದಂಪತಿಗಳು ಆ ಮಕ್ಕಳ ಭವಿಷ್ಯವನ್ನು ಹೇಗೆ ರೂಪಿಸುತ್ತಾರೆ? ಪೋಷಕರಿಂದ ಸಹಜ ಪಾಲನೆಯನ್ನು ಪಡೆಯುವ ಆ ಮಕ್ಕಳ ಹಕ್ಕುಗಳ ಕಥೆಯೇನು ಎಂಬ ಒಂದಷ್ಟು ಪ್ರಶ್ನೆಗಳು ಹಾಗೂ ಚರ್ಚೆಗಳನ್ನು ಈ ಪ್ರಕರಣ ಹುಟ್ಟು ಹಾಕಿದೆ. 
2016 ರ ಬಾಡಿಗೆ ತಾಯ್ತನದ ಮಸೂದೆ ಇನ್ನೂ ಅಂಗೀಕಾರವಾಗದೇ ಉಳಿದಿದ್ದು, ಮಕ್ಕಳನ್ನು ಪಡೆಯಲು ಸಾಧ್ಯವಾಗದವರು ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ಪಡೆಯಬಹುದಾಗಿದೆ. ಆದರೆ ಮಗನ ಸಾವಿನ ನಂತರ ಮೊಮ್ಮಕ್ಕಳನ್ನು ಪಡೆಯಬಹುದಾ? ಎಂಬ ಬಗ್ಗೆಯೂ ಚರ್ಚೆ ನಡೆಯುವಂತೆ ಮಾಡಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com