ಮೊದಲ ಬಾರಿಗೆ ರಾತ್ರಿ ವೇಳೆ ಪೃಥ್ವಿ-II ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗ ಯಶಸ್ವಿ!

ಪರಮಾಣು-ಸಾಮರ್ಥ್ಯವುಳ್ಳ ಭೂಮಿಯಿಂದ ಭೂಮಿಗೆ ಚಿಮ್ಮುವ ಕಡಿಮೆ ವ್ಯಾಪ್ತಿಯ ಪೃಥ್ವಿ-II ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಇದೇ ಮೊದಲ ಬಾರಿಗೆ ರಾತ್ರಿ ವೇಳೆ ಪರೀಕ್ಷಾರ್ಥ
ಪೃಥ್ವಿ-II ಕ್ಷಿಪಣಿ
ಪೃಥ್ವಿ-II ಕ್ಷಿಪಣಿ

ಭುವನೇಶ್ವರ್ :ಪರಮಾಣು-ಸಾಮರ್ಥ್ಯವುಳ್ಳ ಭೂಮಿಯಿಂದ ಭೂಮಿಗೆ ಚಿಮ್ಮುವ ಕಡಿಮೆ ವ್ಯಾಪ್ತಿಯ ಪೃಥ್ವಿ-II  ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಇದೇ ಮೊದಲ ಬಾರಿಗೆ ರಾತ್ರಿ ವೇಳೆ ಪರೀಕ್ಷಾರ್ಥ ಪ್ರಯೋಗ ಮಾಡಲಾಗಿದ್ದು, ಯಶಸ್ವಿಯಾಗಿದೆ.

ಒಡಿಶಾದ ಕಡಲ ತೀರದಲ್ಲಿರುವ ಡಿಫೆನ್ಸ್ ಟೆಸ್ಟ್ ಫೆಸಿಲಿಟಿಯಿಂದ ಸುಮಾರು 8:30ಕ್ಕೆ ಪರೀಕ್ಷಾರ್ಥ ಪ್ರಯೋಗ ಮಾಡಲಾಗಿದ್ದು, ಆರ್ಟ್ ಗೈಡೆನ್ಸ್ ಸಿಸ್ಟಮ್ ನ್ನು ಬಳಕೆ ಮಾಡಲಾಗಿದೆ. ಕ್ಷಿಪಣಿ ಉಡಾವಣೆಗೆ ಮೊಬೈಲ್ ಟಟ್ರಾ ಟ್ರಾನ್ಸ್ಪೋರ್ಟರ್-ಎಂಟರ್ಟರ್ ಲಾಂಚರ್ (ಎಂಟಿಎಲ್) ನ್ನು ಬಳಕೆ ಮಾಡಲಾಗಿದ್ದು, ದೇಶಿ ನಿರ್ಮಿತ ಕ್ಷಿಪಣಿಯನ್ನು ಉಡಾವಣೆ ಮಾಡಲಾಗಿದೆ.

2 ವಾರಗಳಲ್ಲಿ ಇದು ಎರಡನೇ ಬಾರಿಗೆ ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆ ನಡೆದಿದ್ದು, ಅಬ್ದುಲ್ ಕಲಾಮ್ ದ್ವೀಪದಿಂದ, 2,000 ಕಿಮೀ ವ್ಯಾಪ್ತಿಯುಳ್ಳ ಮಧ್ಯಂತರ ರೇಂಜ್ ಬ್ಯಾಲಿಸ್ಟಿಕ್ ಕ್ಷಿಪಣಿ(ಐಆರ್ ಬಿಎಂ) ಅಗ್ನಿ-II ರ ಪರೀಕ್ಷಾರ್ಥ ಪ್ರಯೋಗದ ಬೆನ್ನಲ್ಲೇ  ಪೃಥ್ವಿ-II  ಬ್ಯಾಲಿಸ್ಟಿಕ್ ಕ್ಷಿಪಣಿಯ ರಾತ್ರಿ ವೇಳೆಯಲ್ಲಿ ನಡೆದಿರುವ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿದೆ.

ಸುಮಾರು 350 ಕಿಮೀ ವ್ಯಾಪ್ತಿಯ ಗುರಿಯಲ್ಲಿ ಅಪ್ಪಳಿಸುವ ಸಾಮರ್ಥ್ಯ ಹೊಂದಿರುವ ಪೃಥ್ವಿ-II ಬ್ಯಾಲಿಸ್ಟಿಕ್ ಕ್ಷಿಪಣಿ ಭೂಮಿಯಿಂದ ಭೂಮಿಗೆ ಚಿಮ್ಮುವ ದೇಶಿಯವಾಗಿ ಅಭಿವೃದ್ಧಿಪಡಿಸಲಾಗಿರುವ ಮೊದಲ ಕ್ಷಿಪಣಿಯಾಗಿದೆ.  ಈ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿರುವುದರಿಂದ ಹಗಲು ಇರುಳೆನ್ನದೇ ಯಾವ ಸಮಯದಲ್ಲಯಾದರೂ ಪೃಥ್ವಿ- II  ಕ್ಷಿಪಣಿಯನ್ನು ಪ್ರಯೋಗ ಮಾಡಬಹುದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com