ಕಾರ್ಟೊಸ್ಯಾಟ್-2 ತೆಗೆದ ಮೊದಲ ಚಿತ್ರವನ್ನು ಬಿಡುಗಡೆ ಮಾಡಿದ ಇಸ್ರೋ

ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಇತ್ತೀಚೆಗೆ ಅಂತರಿಕ್ಷಕ್ಕೆ ಉಡಾವಣೆ ಮಾಡಿದ್ದ ಹವಾಮಾನ ಮುನ್ಸೂಚನೆ ಉದ್ದೇಶಿತ ಉಪಗ್ರಹ ......
ಕಾರ್ಟೊಸ್ಯಾಟ್-2 ತೆಗೆದ ಮೊದಲ ಚಿತ್ರ
ಕಾರ್ಟೊಸ್ಯಾಟ್-2 ತೆಗೆದ ಮೊದಲ ಚಿತ್ರ
ಚೆನ್ನೈ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇತ್ತೀಚೆಗೆ ಅಂತರಿಕ್ಷಕ್ಕೆ ಉಡಾವಣೆ ಮಾಡಿದ್ದ ಹವಾಮಾನ ಮುನ್ಸೂಚನೆ ಉದ್ದೇಶಿತ ಉಪಗ್ರಹ ಕಾರ್ಟೊಸ್ಯಾಟ್-2 ಸೆರೆಹಿಡಿದಿರುವ ಮೊದಲ ಚಿತ್ರವನ್ನು ಸಂಸ್ಥೆ ಇಂದು ಬಿಡುಗಡೆ ಮಾಡಿದೆ.
ಉಪಗ್ರಹ ಉಡಾವಣೆಗೊಂಡ ಐದು ದಿನಗಳ ಬಳಿಕ ಈ ಚಿತ್ರವನ್ನು ಬಿಡುಗಡೆ ಮಾಡಲಾಗಿದ್ದು ಜ.15ರಂದು ಉಪಗ್ರಹವು ಈ ಚಿತ್ರವನ್ನು ಸೆರೆ ಹಿಡಿದಿದೆ. ಮಧ್ಯಪ್ರದೇಶದ ಇಂದೋರ್ ನ ಹೊಲ್ಕರ್ ಕ್ರಿಕೆಟ್ ಸ್ಟೇಡಿಯಂ ಸೇರಿ ಕೆಲ ಸ್ಥಳಗಳ ಚಿತ್ರಗಳು ಇದರಲ್ಲಿದೆ.
ಇಸ್ರೋದ ಬೆಂಗಳೂರು ಕೇಂದ್ರ ಕಚೇರಿಯ ವೆಬ್‍ಸೈಟ್‍ನಲ್ಲಿ ಈ ಚಿತ್ರವನ್ನು ಬಿಡುಗಡೆ ಮಾಡಲಾಗಿದೆ.
ಜ.12ರಂದು  ಆಂಧ್ರಪ್ರದೇಶದ ಶ್ರೀಹರಿಕೋಟಾದ ಬಾಹ್ಯಾಕಾಶ ಕೇಂದ್ರದಿಂದ ಪಿಎಸ್‍ಎಲ್‍ವಿ-ಸಿ40 ರಾಕೆಟ್ ಮೂಲಕ ಕಾರ್ಟೊಸ್ಯಾಟ್-2 ಸರಣಿ ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com