ಫೇಸ್ ಬುಕ್ ನಲ್ಲಿರುವ ಅಂಧ ನೌಕರನಿಂದ ಅಂಧರಿಗಾಗಿಯೇ ತಂತ್ರಜ್ಞಾನ ಅಭಿವೃದ್ಧಿ!

ಫೇಸ್ ಬುಕ್ ನಲ್ಲಿ ಕೆಲಸ ಮಾಡುತ್ತಿರುವ ಅಂಧ ನೌಕರರೊಬ್ಬರು ಅಂಧರಿಗಾಗಿಯೇ ತಂತ್ರಜ್ಞಾನ ಅಭಿವೃದ್ಧಿಪಡಿಸುತ್ತಿದ್ದಾರೆ.
ಫೇಸ್ ಬುಕ್
ಫೇಸ್ ಬುಕ್
ಸ್ಯಾನ್ ಫ್ರಾನ್ಸಿಸ್ಕೋ: ಫೇಸ್ ಬುಕ್ ನಲ್ಲಿ ಕೆಲಸ ಮಾಡುತ್ತಿರುವ ಅಂಧ ನೌಕರರೊಬ್ಬರು ಅಂಧರಿಗಾಗಿಯೇ ತಂತ್ರಜ್ಞಾನ ಅಭಿವೃದ್ಧಿಪಡಿಸುತ್ತಿದ್ದಾರೆ. 
ಸಾಮಾನ್ಯ ಜನರಿಗೆ ಕಾಣುವ ಚಿತ್ರ ಅಥವಾ ವಿಡಿಯೋವನ್ನು ಅಂಧರಿಗೆ ಮೌಖಿಕವಾಗಿ ತಿಳಿಸುವ ಸಾಮರ್ಥ್ಯ ಹೊಂದಿರುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಕೃತಕ ಬುದ್ಧಿಮತ್ತೆಯ ನೆರವಿನಿಂದ ಈ ತಂತ್ರಜ್ಞಾನ ಕಾರ್ಯನಿರ್ವಹಿಸಲಿದೆ. 
ಫೇಸ್ ಬುಕ್ ಇಂಜಿನಿಯರ್ ಆಗಿರುವ ಮ್ಯಾಟ್ ಕಿಂಗ್ ಈ ತಂತ್ರಜ್ಞಾನ ಅಭಿವೃದ್ಧಿಪಡಿಸುತ್ತಿರುವ ಯೋಜನೆಯ ತಂಡವನ್ನು ಮುನ್ನಡೆಸುತ್ತಿದ್ದು, ಮುಂದಿನ ದಿನಗಳಲ್ಲಿ ಫೇಸ್ ಬುಕ್ ನಿಬಂಧನೆಗಳನ್ನು ಮೀರುವ ಇಮೇಜ್ ಹಾಗೂ ವಿಡಿಯೋಗಳನ್ನು ಅಂಧರೂ ಸಹ ಗುರುತಿಸಬಹುದಾಗಿದೆ. 
ಫೇಸ್ ಬುಕ್ ನಲ್ಲಿ ದಿನವೊಂದಕ್ಕೆ 2 ಬಿಲಿಯನ್ ಫೋಟೊಗಳನ್ನು ಅಪ್ ಲೋಡ್ ಮಾಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ಕೃತಕ ಬುದ್ಧಿಮತ್ತೆ ಬಳಕೆ ಮಹತ್ವ ಪಡೆಯುತ್ತದೆ ಎಂದು ಕಿಂಗ್ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com