ಫೆಬ್ರವರಿಯಿಂದ ವಾಟ್ಸ್ ಅಪ್ ಪೇಮೆಂಟ್ ಸೌಲಭ್ಯ, ಡಿಜಿಟಲ್ ಪಾವತಿ ಕ್ಷೇತ್ರದಲ್ಲಿ ಹೊಸ ಕ್ರಾಂತಿಯ ನಿರೀಕ್ಷೆ

ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಷನ್ ಆದ ವಾಟ್ಸ್ ಅಪ್ ತನ್ನ ಗ್ರಾಹಕರಿಗಾಗಿ ಹಣ ಪಾವತಿ ಸೌಲಭ್ಯ ಪ್ರಾಋಅಂಭಿಸಲಿದೆ.
ಫೆಬ್ರವರಿಯಿಂದ ವಾಟ್ಸ್ ಅಪ್ ಪೇಮೆಂಟ್ ಸೌಲಭ್ಯ-ಸಾಂದರ್ಭಿಕ ಚಿತ್ರ
ಫೆಬ್ರವರಿಯಿಂದ ವಾಟ್ಸ್ ಅಪ್ ಪೇಮೆಂಟ್ ಸೌಲಭ್ಯ-ಸಾಂದರ್ಭಿಕ ಚಿತ್ರ
ನವದೆಹಲಿ: ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಷನ್ ಆದ ವಾಟ್ಸ್ ಅಪ್ ತನ್ನ ಗ್ರಾಹಕರಿಗಾಗಿ ಹಣ ಪಾವತಿ ಸೌಲಭ್ಯ ಪ್ರಾರಂಭಿಸಲಿದೆ. . 
ವಾಟ್ಸ್ ಅಪ್ ಪೇಮೆಂಟ್ಸ್ ಎನ್ನುವ ಈ ನೂತನ ಸೌಲಭ್ಯ ಬಳಸಿಕೊಂಡು ಗ್ರಾಹಕರು ಹಣ ವರ್ಗಾವಣೆ, ಪಾವತಿ ನಡೆಸಬಹುದಾಗಿದೆ. ಈ ನೂತನ ಸೌಲಭ್ಯವು ಫೆಬ್ರವರಿ ತಿಂಗಳ ಅಂತ್ಯದ ವೇಳೆಗೆ ವಾಟ್ಸ್ ಅಪ್ ನಲ್ಲಿ ಅಳವಡಿಸಲಾಗುತ್ತದೆ ಎಂದು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.
ವಾಟ್ಸ್ ಅಪ್ ಮುಖೇನ ಹಣ ಕಳಿಸುವ ಹಾಗೂ ಸ್ವೀಕರಿಸುವವರನ್ನು ಸಂಸ್ಥೆಯು ಬ್ಯಾಂಕ್ ಎಂಡ್ ನಿಂದ ಗುರುತಿಸಲಿದೆ.ಪೇಮೆಂಟ್ ಆಯ್ಕೆಯನ್ನು ಗ್ರಾಹಕರ ಬ್ಯಾಂಕ್ ಖಾತೆಗಳೊಡನೆ ಜೋಡಣೆಯಾದ  ನಂತರ ಆಯಾ ಬ್ಯಾಂಕ್ ಖಾತೆಗಳನ್ನು ವಾಟ್ಸ್ ಅಪ್ ಪತ್ತೆಹಚ್ಚುತ್ತದೆ.
ದೇಶದಲ್ಲಿ ಶೀಘ್ರವಾಗಿ ಬೆಳವಣಿಗೆ ಕಾಣುತ್ತಿರುವ ಡಿಜಿಟಲ್ ಪಾವತಿ ಕ್ಷೇತ್ರಕ್ಕೆ ವಾಟ್ಸ್ ಅಪ್ ಪ್ರವೇಶಿಸುವುದರಿಂದ ದೊಡ್ಡ ಮಟ್ಟದ ಕ್ರಾಂತಿಯೇ ಆಗಲಿದೆ ಎಂದು ಅಂದಾಜಿಸಲಾಗಿದೆ. ದೇಶದಲ್ಲಿನ ಬೃಹತ್ ಬ್ಯಾಂಕ್ ಗಳೊಡನೆ ವಾಟ್ಸ್ ಅಪ್ ಇದಾಗಲೇ ಪೇಮೆಂಟ್ ಆಯ್ಕೆ ಸಂಬಂಧ ಮಾತುಕತೆ ನಡೆಸಿದೆ. 
ಇನ್ನು ಈ ಕುರಿತಂತೆ ವಾಟ್ಸ್ ಅಪ್ ಇದಾಗಲೇ ಕೇಂದ್ರ ಸರ್ಕಾರದಿಂದ ಅನುಮತಿ ಪಡೆದಿದೆ ಎನ್ನಲಾಗಿದ್ದು  ವಾಟ್ಸ್ ಅಪ್ , ಯುಪಿಐ ಇಂಟಿಗ್ರೇಶನ್‌ಗೆ ಗೆ ಕೇಂದ್ರ ಕಳೆದ ಜುಲೈನಲ್ಲಿ ಅನುಮತಿ ನೀಡಿದೆ. ಆದರೆ ಇದರ ಅನುಷ್ಠಾನಕ್ಕೆ ಮುನ್ನ ವಾಟ್ಸ್ ಅಪ್ ತನ್ನ ಗ್ರಾಹಕರಿಗಿರಬಹುದಾದ ಡೇಟಾ ಕುರಿತ ಆತಂಕಗಳು ಸೇರಿದಂತೆ ಹಲವು ಅನುಮಾನಗಳನ್ನು ತೊಡೆದು ಹಾಕಬೇಕಿದೆ.
ದೇಶದಲ್ಲಿ ಇದಾಗಲೇ ಪೇಟಿಎಂ, ಭೀಮ್ ಅಪ್ಲಿಕೇಷನ್ ಸೇರಿ ಹಲವು ಡಿಜಿಟಲ್ ಪೇಮೆಂಟ್ ಅಪ್ಲಿಕೇಷನ್ ಗಳು ಸಾಕಷ್ಟು ಜನಪ್ರಿಯವಾಗಿದ್ದು ವಾಟ್ಸ್ ಅಪ್ ಅವುಗಳೊಡನೆ ಸ್ಪರ್ಧೆಗೆ ಇಳಿಯಬೇಕೆನ್ನುವುದು ಸುಳ್ಳಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com