ವೆಬ್ ಸೈಟ್ ಗಳಲ್ಲಿ ವಿಡಿಯೋಗಳ 'ಆಟೋಪ್ಲೇ' ಮ್ಯೂಟ್ ಮಾಡಲು ಗೂಗಲ್ ಕ್ರೋಮ್ ಅವಕಾಶ!

ವೆಬ್ ಸೈಟ್ ಗಳಲ್ಲಿನ ಸ್ವಯಂಚಾಲಿತ ವಿಡಿಯೋಗಳಿಂದ ಉಂಟಾಗುವ ಕಿರಿಕಿರಿಗೆ ಗೂಗಲ್ ಕ್ರೋಮ್ ಅಂತ್ಯ ಹಾಡಲು ಕ್ರಮ ಕೈಗೊಂಡಿದ್ದು, ಹೊಸ ಆವೃತ್ತಿಯಲ್ಲಿ ಸ್ವಯಂಚಾಲಿತ ವಿಡಿಯೋಗಳನ್ನು ಮ್ಯೂಟ್ ಮಾಡುವ
ಗೂಗಲ್ ಕ್ರೋಮ್
ಗೂಗಲ್ ಕ್ರೋಮ್
ವೆಬ್ ಸೈಟ್ ಗಳಲ್ಲಿನ ಸ್ವಯಂಚಾಲಿತ ವಿಡಿಯೋಗಳಿಂದ ಉಂಟಾಗುವ ಕಿರಿಕಿರಿಗೆ ಗೂಗಲ್ ಕ್ರೋಮ್ ಅಂತ್ಯ ಹಾಡಲು ಕ್ರಮ ಕೈಗೊಂಡಿದ್ದು, ಹೊಸ ಆವೃತ್ತಿಯಲ್ಲಿ ಸ್ವಯಂಚಾಲಿತ ವಿಡಿಯೋಗಳನ್ನು ಮ್ಯೂಟ್ ಮಾಡುವ ಆಯ್ಕೆಯನ್ನು ನೀಡಿದೆ. 
ವಿಂಡೋಸ್, ಮ್ಯಾಕ್, ಲಿನೆಕ್ಸ್ ನಲ್ಲಿ ಈ ಆಯ್ಕೆ ಲಭ್ಯವಿದ್ದು, ಕ್ರೋಮ್ 64 ರಲ್ಲಿ ಶಾಶ್ವತವಾಗಿ ಸ್ವಯಂಚಾಲಿತ ವಿಡಿಯೋಗಳನ್ನು ಮ್ಯೂಟ್ ಮಾಡುವ ಆಯ್ಕೆ ಲಭ್ಯವಿರುವುದರ ಬಗ್ಗೆ ಇಂಡಿಪೆಂಡೆಂಟ್ ವರದಿ ಪ್ರಕಟಿಸಿದೆ. ಬಳಕೆದಾರರು "ವ್ಯೂ ಸೈಟ್ ಇನ್ಫೋರ್ಮೇಷನ್ ನಲ್ಲಿ ಆಮ್ನಿಬಾರ್ ನ್ನು ಆಯ್ಕೆ ಮಾಡುವ ಮೂಲಕ ವಿಡಿಯೋಗಳನ್ನು ಮ್ಯೂಟ್ ಮಾಡಬಹುದಾಗಿದೆ. 
ಈ ಹಿಂದೆಯೂ ಗೂಗಲ್ ಕ್ರೋಮ್ ನಲ್ಲಿ ವಿಡಿಯೋಗಳನ್ನು ತಾತ್ಕಾಲಿಕವಾಗಿ ಮ್ಯೂಟ್ ಮಾಡುವ ಆಯ್ಕೆ ಲಭ್ಯವಿತ್ತು. ಇದೇ ವೇಳೆ ಹೆಚ್ ಡಿ ಆರ್ ಇಮೇಜಿಂಗ್ ಸಪೋರ್ಟ್ ಆಯ್ಕೆಯನ್ನೂ ಗೂಗಲ್ ಕ್ರೋಮ್ ಹೊಸ ಆವೃತ್ತಿಯಲ್ಲಿ ನೀಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com