ಸಾಂದರ್ಭಿಕ ಚಿತ್ರ
ವಿಜ್ಞಾನ-ತಂತ್ರಜ್ಞಾನ
ಕೇಂದ್ರ ಸರ್ಕಾರದ ಎಚ್ಚರಿಕೆ ಹಿನ್ನೆಲೆ: ಸೆಟ್ಟಿಂಗ್ಸ್ ಬದಲಾಯಿಸುವುದಾಗಿ ವಾಟ್ಸ್ಆ್ಯಪ್ ಪ್ರತಿಕ್ರಿಯೆ
ವಾಟ್ಸ್ ಆಪ್ ನಲ್ಲಿ ಸುಳ್ಳು ಸುದ್ದಿಗಳಿಂದ ಹೆಚ್ಚಾಗುತ್ತಿದ್ದ ಹತ್ಯೆಗಳ ಹಿನ್ನೆಲೆಯಲ್ಲಿ ಸೆಟ್ಟಿಂಗ್ಸ್ ಬದಲಾಯಿಸುವುದಾಗಿ ವಾಟ್ಸ್ಆ್ಯಪ್ ಪ್ರತಿಕ್ರಿಯೆ ನೀಡಿದೆ ಎಂದು ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ.
ನವದೆಹಲಿ: ವಾಟ್ಸ್ ಆಪ್ ನಲ್ಲಿ ಹರಿದಾಡುವ ಸುಳ್ಳು ಸುದ್ದಿಗಳಿಂದ ಹೆಚ್ಚಾಗುತ್ತಿದ್ದ ಹತ್ಯೆಗಳ ಬಗ್ಗೆ ಕೇಂದ್ರಸರ್ಕಾರ ನೀಡಿದ್ದ ಎಚ್ಚರಿಕೆ ಹಿನ್ನೆಲೆಯಲ್ಲಿ ಸೆಟ್ಟಿಂಗ್ಸ್ ಬದಲಾಯಿಸುವುದಾಗಿ ವಾಟ್ಸ್ಆ್ಯಪ್ ಪ್ರತಿಕ್ರಿಯೆ ನೀಡಿದೆ ಎಂದು ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ.
ವಾಟ್ಸ್ ಆಪ್ ನಲ್ಲಿ ಪ್ರಚೋದನಾಕಾರಿ ಸಂದೇಶಗಳು ಹಿಂಸಾಚಾರಕ್ಕೆ ಕಾರಣವಾಗುತ್ತಿದ್ದು, ಈ ಸಂಬಂಧ ನಿನ್ನೆ ವಾಟ್ಸಾಪ್ ಗೆ ನೋಟಿಸ್ ಕಳುಹಿಸಲಾಗಿತ್ತು ಎಂದು ಪ್ರಸಾದ್ ಹೇಳಿದ್ದಾರೆ.
ಈ ಮಧ್ಯೆ ವಾಟ್ಸಪ್, ಟ್ವಿಟರ್, ಫೇಸ್ ಬುಕ್ , ಜವಾಬ್ದಾರಿಯುತ, ಜಾಗರೂಕತೆಯಿಂದ ಕಾರ್ಯನಿರ್ವಹಿಸುವುದನ್ನು ಸ್ವಾಗತಿಸುವುದಾಗಿ ಅವರು ತಿಳಿಸಿದ್ದಾರೆ.
ಇಂತಹ ಸಂದೇಶಗಳನ್ನು ಯಾರು ಕಳುಹಿಸುತ್ತಿದ್ದಾರೆ ಎಂಬುದನ್ನು ಗುಂಪಿನ ನಿರ್ವಾಹಕರು ನಿರ್ಧರಿಸುವಲ್ಲಿ ಅನುಕೂಲವಾಗುವಂತಹ ಸೆಟ್ಟಿಂಗ್ ಅನ್ನು ಪ್ರಾರಂಭಿಸಿರುವುದಾಗಿ ಕ್ಯಾಲಿಪೋರ್ನಿಯಾದಿಂದ ವಾಟ್ಸಾ ಆಪ್ ಕಳುಹಿಸಿದೆ.
ಸಂದೇಶಗಳನ್ನು "ಓದದೇ ಅರ್ಥಮಾಡಿಕೊಳ್ಳದೆ ಮತ್ತೊಬ್ಬರಿಗೆ ಪಾರ್ವಡ್ ಮಾಡಲು ಕಷ್ಟಸಾಧ್ಯವಾದಂತಹ ಪ್ರಯತ್ನವನ್ನು ಮಾಡಲಾಗುತ್ತಿರುವುದಾಗಿ ವಾಟ್ಸ್ ಆಪ್ ತಿಳಿಸಿದೆ. ಇಂತಹ ಕ್ರಮವನ್ನು ಶ್ಲಾಘಿಸುವುದಾಗಿ ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ