ದ್ವಿತೀಯ ಪಿಯು ಅಂಕಪಟ್ಟಿಗಳಿನ್ನು ಸ್ಮಾರ್ಟ್ ಫೋನ್ ನಲ್ಲಿ ಲಭ್ಯ,!

ದ್ವಿತೀಯ ಪಿಯು ವಿದ್ಯಾರ್ಥಿಗಳು ಇನ್ನು ಮುಂದೆ ಆನ್ ಲೈನ್ ಮೂಲಕವೇ ಅಂಕಪಟ್ಟಿಯನ್ನು ಪಡೆದುಕೊಳ್ಳಬಹುದು
ದ್ವಿತೀಯ ಪಿಯು ಅಂಕಪಟ್ಟಿಗಳಿನ್ನು ಸ್ಮಾರ್ಟ್ ಫೋನ್ ನಲ್ಲಿ ಲಭ್ಯ,!
ದ್ವಿತೀಯ ಪಿಯು ಅಂಕಪಟ್ಟಿಗಳಿನ್ನು ಸ್ಮಾರ್ಟ್ ಫೋನ್ ನಲ್ಲಿ ಲಭ್ಯ,!
ಬೆಂಗಳೂರು: ದ್ವಿತೀಯ ಪಿಯು ವಿದ್ಯಾರ್ಥಿಗಳು ಇನ್ನು ಮುಂದೆ ಆನ್ ಲೈನ್ ಮೂಲಕವೇ ಅಂಕಪಟ್ಟಿಯನ್ನು ಪಡೆದುಕೊಳ್ಳಬಹುದು.: ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯು  ಇದೀಗ ಮತ್ತಷ್ಟು ಸ್ಮಾರ್ಟ್ ಮತ್ತು ಹೈಟೆಕ್ ಆಗಿದ್ದು  ವಿದ್ಯಾರ್ಥಿಗಳಿಗೆ ಡಿಜಿ ಲಾಕರ್ ಮೂಲಕ ಅಂಕಪಟ್ಟಿ ವಿತರಿಸಲು ಯೋಜನೆ ಸಿದ್ದಪಡಿಸಿದೆ.
ಈ ಶೈಕ್ಷಣಿಕ ವರ್ಷದಿಂದಲೇ ಈ ಯೋಜನೆ ಜಾರಿಯಾಗಲಿದ್ದು ಕೇಂದ್ರ ಸರ್ಕಾರ ಅಭಿವೃದ್ದಿಪಡಿಸಿರುವ ಡಿಜಿಲಾಕರ್ ನಲ್ಲಿ 2018ರ ಮಾರ್ಚ್​ನಲ್ಲಿ ನಡೆದ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳ ಅಂಕಪಟ್ಟಿಯನ್ನು ಇಲಾಖೆಯು ಅಪ್ ಮಾಡಿದೆ.
ಬಳಕೆ ಹೇಗೆ?
ದ್ವಿತೀಯ ಪಿಯು ವಿದ್ಯಾರ್ಥಿಗಳು ತಮ್ಮ ಸ್ಮಾರ್ಟ್ ಫೋನ್ ನಲ್ಲಿ ಡಿಜಿಲಾಕರ್ ಅಪ್ಲಿಕೇಷನ್ ಡೌನ್ ಲೋಡ್ ಮಾಡಿಕೊಂಡು ಇದರ ಪ್ರಯೋಜನ ಪಡೆಯಬಹುದು, ಇಲ್ಲದೆ ಹೋದಲ್ಲಿ ವೆಬ್ ತಾಣಕ್ಕೆ ಭೇಟಿ ಕೊಟ್ಟು ಸಹ ಲಾಗ್ ಇನ್ ಆಗಬಹುದು.
ವಿದ್ಯಾರ್ಥಿಗಳು ತಮ್ಮ ಆಧಾರ್ ಸಂಖ್ಯೆ ನೊಂದಾವಣೆಗೆ ನೀಡಿದ್ದ ಮೊಬೈಲ್ ಸಂಖ್ಯೆಗೆ ಒಟಿಪಿ (ಒನ್ ಟೈಮ್ ಪಾಸ್ ವರ್ಡ್) ಬರಲಿದೆ. ಈ ಪಾಸ್ ವರ್ಡ್ ಬಳಸಿ ವಿದ್ಯಾರ್ಥಿಯು ಅವರ ಬಳಕೆದಾರರ ಹೆಸರು (ಯೂಸರ್ ನೇಮ್) ಹಾಗೂ ಪಾಸ್ ವರ್ಡ್ ಪುನರ್ ರಚಿಸಬೇಕು.
ಹೀಗೆ ಲಾಗ್ ಇನ್ ಆದ ಬಳಿಕ ವಿದ್ಯಾರ್ಥಿಯು ಆಧಾರ್ ಸಂಖ್ಯೆ ನಮೂದಿಸಬೇಕು. (ಒಂದು ವೇಳೆ ಆಧಾರ್ ನೊಂದಣಿಯಾಗದೆ ಹೋದಲ್ಲಿ ಈ ಸೌಲಭ್ಯ ಇರುವುದಿಲ್ಲ)
ಆಧಾರ್ ಸಂಖ್ಯೆ ನಮೂದಿಸಿದಾಗ ಅಪ್ಲಿಕೇಷನ್ ನ ಇಶ್ಯೂಸ್ ವಿಭಾಗಕ್ಕೆ ತೆರಳಿ ಕರ್ನಾಟಕ ಪಿಯು ಬೋರ್ಡ್ ವಿಭಾಗವನ್ನು ಆಯ್ಕೆ ಮಾಡಿ ತಮ್ಮ ನೊಂದಣಿ ಸಂಖ್ಯೆ, ಉತ್ತೀರ್ಣನಾದ ವರ್ಷವನ್ನು ನಮೂದಿಸಿದಾಗ ಅವರ ಡಿಜಿಟಲ್ ಅಂಕಪಟ್ಟಿ ಡೌನ್ ಲೋಡ್ ಆಗಲಿದೆ.
ಏನಿದು ಡಿಜಿಲಾಕರ್?
ಆನ್ ಲೈನ್ ನಲ್ಲಿಯೇ ವಿದ್ಯಾರ್ಥಿಗಳ ಅಂಕಪಟ್ಟಿ ಶೇಖರಿಸಿ ಯಾರು ಯಾವಾಗ ಬೇಕಾದರೆ ಪಡೆದುಕೊಳ್ಳುವ ವಿನೂತನ ವ್ಯವಸ್ಥೆಯೇ ಡಿಜಿಲಾಕರ್. ಕೇಂದ್ರ ಸರ್ಕಾರ ಜಾರಿಗೆ ತಂದ ಈ ಯೋಜನೆಯಲ್ಲಿ ಒಟ್ಟು 5 ಜಿಬಿವರೆಗಿನ ದಾಖಲೆಗಳನ್ನು ಶೇಖರಿಸಿಡಬಹುದಾಗಿದೆ.  ಇದರ ಬಳಕೆ ಅತ್ಯಂತ ಸರಳವಾಗಿದ್ದು ಇದರಲ್ಲಿ ಅಂಕಪಟ್ಟಿ ಮಾತ್ರವಲ್ಲದೆ ವಿದ್ಯಾರ್ಥಿಗಳ  ಶೈಕ್ಷಣಿಕ ಪ್ರಮಾಣ ಪತ್ರ, ಗುರುತಿನ ಚೀಟಿ ಸೇರಿ ಇತರೆ ದಾಖಲೆಗಳನ್ನು ಸಹ ಇಮೇಜ್ ರೂಪದಲ್ಲಿ ಸಮ್ಗ್ರಹಿಸಲು ಅವಕಾಶವಿದೆ.
ಡಿಜಿಲಾಕರ್ ವೆಬ್ ಸೈಟ್ ವಿಳಾಸ:  www.digilocker.gov.in 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com