15 ವರ್ಷಗಳ ನಂತರ ಏಕಕಾಲಕ್ಕೆ ಮಂಗಳ ಹಾಗೂ ರಕ್ತಚಂದ್ರ ದರ್ಶನ: ನಭೋ ಮಂಡಲದಲ್ಲಿ ಮತ್ತೊಂದು ಕೌತುಕ

ಶತಮಾನದ ಸುದೀರ್ಘ ಚಂದ್ರಗ್ರಹಣ ಗೋಚರವಾಗಲಿದ್ದು, ಮಂಗಳ ಗ್ರಹವೂ ಸನಿಹದಲ್ಲೇ ಹಾದು ಹೋಗಲಿದೆ. 15 ವರ್ಷದ ನಂತರ ಮಂಗಳ ಗ್ರಹ ಸನಿಹದಲ್ಲೇ ಹಾದುಹೋಗುವ ಸಮಯದಲ್ಲಿ ಚಂದ್ರ ಗ್ರಹಣ ನಡೆಯುತ್ತಿದೆ.
ರಕ್ತ ಚಂದ್ರ
ರಕ್ತ ಚಂದ್ರ
ಪ್ಯಾರಿಸ್: ಶತಮಾನದ ಸುದೀರ್ಘ ಚಂದ್ರಗ್ರಹಣ ಗೋಚರವಾಗಲಿದ್ದು, ಮಂಗಳ ಗ್ರಹವೂ ಸನಿಹದಲ್ಲೇ ಹಾದು ಹೋಗಲಿದೆ.  15 ವರ್ಷದ ನಂತರ ಮಂಗಳ ಗ್ರಹ ಸನಿಹದಲ್ಲೇ ಹಾದುಹೋಗುವ ಸಮಯದಲ್ಲಿ ಚಂದ್ರ ಗ್ರಹಣ ನಡೆಯುತ್ತಿದೆ. 
ಖಗೋಳಶಾಸ್ತ್ರಜ್ಞರಿಗೆ ಇದೊಂದು ಅದ್ಭುತವಾದ ಸಂದರ್ಭವಾಗಿದ್ದು, ಶತಮಾನದ ಕೌತುಕ ಹಾಗೂ ದಶಕದ ಅಪರೂಪವನ್ನು ನೋಡಲು ಕಾತುರದಿಂದ ಕಾದಿದ್ದಾರೆ.  ಸೂರ್ಯ ಗ್ರಹಣ ವೀಕ್ಷಿಸಬೇಕಾದರೆ ಅಗತ್ಯವಿರುವ ಪರಿಕರಗಳು ಈ ಗ್ರಹಣ ಹಾಗೂ ಸನಿಹದಲ್ಲೇ ಹಾದು ಹೋಗುವ ಮಂಗಳ ಗ್ರಹವನ್ನು ವೀಕ್ಷಿಸಬಹುದಾಗಿದೆ. 
ಸುಮಾರು 6 ಗಂಟೆ 14 ನಿಮಿಷಗಳ ಕಾಲ ನಡೆಯುವ ಈ ಕೌತುಕ 21 ನೇ ಶತಮಾನದ ಅತಿ ದೀರ್ಘಾವಧಿಯ ಗ್ರಹಣವಾಗಿದೆ ಎಂದು ರಾಯಲ್ ಅಸ್ಟ್ರಾನಾಮಿಕಲ್ ಸೊಸೈಟಿ ಹೇಳಿದೆ.  ಗ್ರಹಣ ಸಂಭವಿಸುವ ವೇಳೆಯಲ್ಲೇ ಚಂದ್ರನ ಬಳಿ ಮಂಗಳ ಗ್ರಹ ಹಾದು ಹೋಗಲಿದ್ದು, ಬರಿಗಣ್ಣಿಗೆ ಸುಲಭವಾಗಿ ಕಾಣಸಿಗಲಿದ್ದು ಇದೊಂದು ಅಪರೂಪದ ಖಗೋಳ ಕೌತುಕವಾಗಲಿದೆ ಎನ್ನುತ್ತಾರೆ ಪ್ಯಾರಿಸ್ ನ ಖಗೋಳಶಾಸ್ತ್ರಜ್ಞ ಪ್ಯಾಸ್ಕಲ್ ಡೆಸ್ಕ್ಯಾಂಪ್ಸ್ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com