ಭಾರತೀಯ ವಿಜ್ಞಾನಿಗಳಿಂದ ಸೌರಮಂಡಲದಾಚೆ ಬೃಹತ್ ಗ್ರಹ ಪತ್ತೆ

ಅಹಮದಾಬಾದ್‌ನ ಭೌತಶಾಸ್ತ್ರ ಸಂಶೋಧನಾ ಪ್ರಯೋಗಾಲಯದ ವಿಜ್ಞಾನಿಗಳು, ಇಂಜಿನಿಯರ್ ಗಳ ತಂಡವು ಶನಿ ಗ್ರಹಕ್ಕಿಂತ ಚಿಕ್ಕದಾದ ಆದರೆ ನೆಪ್ಚೂನ್‌ಗಿಂತ ದೊಡ್ಡದಿರುವ ಗ್ರಹವೊಂದು.....
ಭಾರತೀಯ ವಿಜ್ಞಾನಿಗಳಿಂದ ಸೌರಮಂಡಲದಾಚೆ ಬೃಹತ್ ಗ್ರಹ ಪತ್ತೆ
ಭಾರತೀಯ ವಿಜ್ಞಾನಿಗಳಿಂದ ಸೌರಮಂಡಲದಾಚೆ ಬೃಹತ್ ಗ್ರಹ ಪತ್ತೆ
ಅಹಮದಾಬಾದ್: ಅಹಮದಾಬಾದ್‌ನ ಭೌತಶಾಸ್ತ್ರ ಸಂಶೋಧನಾ ಪ್ರಯೋಗಾಲಯದ ವಿಜ್ಞಾನಿಗಳು, ಇಂಜಿನಿಯರ್ ಗಳ ತಂಡವು ಶನಿ ಗ್ರಹಕ್ಕಿಂತ ಚಿಕ್ಕದಾದ ಆದರೆ ನೆಪ್ಚೂನ್‌ಗಿಂತ ದೊಡ್ಡದಿರುವ ಗ್ರಹವೊಂದು ನಮ್ಮ ಸೌರಮಂಡಲದಾಚೆ  ಸೂರ್ಯನಂತಹಾ ನಕ್ಷತ್ರವೊಂದರ ಸುತ್ತ ಸುತ್ತುತ್ತಿರುವುದನ್ನು ಪತ್ತೆ ಮಾಡಿದ್ದಾರೆ.
ಸಂಶೋಧನಾ ಸಂಸ್ಥೆಯ ಪ್ರೊಫೆಸರ್ ಅಭಿಜಿತ್ ಚಕ್ರವರ್ತಿನೇತೃತ್ವದ ತಂಡ ಈ ನೂತನ ಗ್ರಹವನ್ನು ಆವಿಷ್ಕರಿಸಿದೆ. ಹಾಗೆಯೇ ತಾವು ಕಂಡು ಹಿಡಿದಿರುವ ಈ ಹೊಸ ಗ್ರಹಕೆ EPIC 211945201b ಅಥವಾ  K2-236b ಎಂದು ನಾಮಕರಣ ಮಾಡಿದ್ದಾರೆ.
ಇದು ಭೂಮಿಗಿಂತ ಶೇ.27ರಷ್ಟು ಹೆಚ್ಚಿನ ದ್ರವ್ಯರಾಶಿ ಹೊಂದಿದ್ದು ಇದರ ತ್ರಿಜ್ಯದ ಗಾತ್ರ ಸಹ ಭೂಮಿಗಿಂತ ಆರು ಪಟ್ಟು ಹೆಚ್ಚಿದೆ.
ಸೌರಮಂಡಲದಿಂದ ಆಚೆಗೆ ಇರುವ ಗ್ರಹವೊಂದನ್ನು ಭಾರತೀಯ ವಿಜ್ಞಾನಿಗಳು ಪತ್ತೆ ಮಾಡುತ್ತಿರುವುದು ಇದೇ ಮೊದಲ ಬಾರಿ ಎನ್ನುವ ಕಾರಣಕ್ಕೆ ಈ ಸಂಶೋಧನೆ ಮಹತ್ವವನ್ನು ಪಡೆದಿದೆ. ಜಗತ್ತಿನ ಕೆಲವೇ ಕೆಲವು ರಾಷ್ಟ್ರಗಳು ಇಂತಹಾ ಗಮನಾರ್ಹ ಸಂಶೋಧನೆಯಲ್ಲಿ ತೊಡಗಿಕೊಂಡಿದ್ದು ಇದೀಗ ಭಾರತ ಸಹ ಆ ಸಾಲಿಗೆ ಸೇರ್ಪಡೆಯಾಗಿದೆ.
ರಾಜಸ್ತಾನದ ಅಬು ಪರ್ವತದ ಗುರುಶಿಖರ್‌ ವೀಕ್ಷಣಾಲಯದಲ್ಲಿನ PRL Advance Radial-velocity Abu-sky Search ಸ್ಪೆಕ್ಟ್ರೋಗ್ರಾಫ್‌ ಹಾಗೂ  1.2 ಟೆಲಿಸ್ಕೋಪ್‌ ಸಹಾಯದೊಂದಿಗೆ ಈ ಗ್ರಹವನ್ನು ಪತ್ತೆ ಮಾಡಲಾಗಿದೆ. ಇದಲ್ಲದೆ, ಏಷ್ಯಾದಲ್ಲೇ ಪಿಎಆರ್‌ಎಎಸ್‌ ಇಂತಹಾ ಅವಿಷ್ಕಾರ ಮಾಡಿದ  ಮೊದಲ  ಸ್ಪೆಕ್ಟ್ರೋಗ್ರಾಫ್ ಆಗಿದೆ. 
ಈ ಗ್ರಹದ ಅವಿಷ್ಕಾರವೂ ಸೇರಿದಂತೆ ಇದುವರೆಗೆ ಜಗತ್ತಿನ ವಿವಿಧ ರಾಷ್ಟ್ರಗಳು ಒಟ್ಟು 23 ಗ್ರಹ ವ್ಯವಸ್ಥೆಯನ್ನು ಪತ್ತೆ ಮಾಡಿದೆ. 
ಈ ಸಂಶೋಧನಾ ವರದಿಯು ಆಸ್ಟ್ರೋನಾಮಿಕಲ್ ಜರ್ನಲ್ ಆಫ್ ದಿ ಅಮೆರಿಕನ್ ಆಸ್ಟ್ರೋನಾಮಿಕಲ್ ಸೊಸೈಟಿ ಅಲ್ಲಿ ಪ್ರಕಟವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com