ಚಂದ್ರನಲ್ಲೂ 4ಜಿ ಮೊಬೈಲ್ ನೆಟ್‏ವರ್ಕ್, ಭೂಮಿಗೆ ಬರಲಿದೆ ಎಚ್‏ಡಿ ವಿಡಿಯೋ!

ಮುಂದಿನ ವರ್ಷದಿಂದ ಚಂದ್ರನಲ್ಲೂ 4ಜಿ ನೆಟ್​ವರ್ಕ್ ಲಭ್ಯವಾಗಲಿದ್ದು, ಭೂಮಿಗೆ ಎಚ್ ಡಿ ಗುಣಮಟ್ಟದ.....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಮುಂದಿನ ವರ್ಷದಿಂದ ಚಂದ್ರನಲ್ಲೂ 4ಜಿ ನೆಟ್​ವರ್ಕ್ ಲಭ್ಯವಾಗಲಿದ್ದು, ಭೂಮಿಗೆ ಎಚ್ ಡಿ ಗುಣಮಟ್ಟದ ವಿಡಿಯೋಗಳನ್ನು ತರೆಸಿಕೊಳ್ಳಬಹುದಾಗಿದೆ.
ಬಾಹ್ಯಾಕಾಶದಲ್ಲಿ ಸ್ಥಾಪಿಸಲಾಗುತ್ತಿರುವ ಮೊದಲ 4ಜಿ ನೆಟ್​ವರ್ಕ್ ಇದಾಗಲಿದ್ದು, ವೊಡಾಫೋನ್ ಸ್ಥಾಪಿಸಲಿರುವ 1800 ಮೆಗಾರ್ಹ್ಜಟ ಫ್ರೀಕ್ವೆನ್ಸಿ ಬ್ಯಾಂಡ್​ನ ನೆಟ್​ವರ್ಕ್ ಮೂಲಕ ಚಂದ್ರನಿಂದ ಹೈ ಡಿಫಿನೇಷನ್ ಲೈವ್​ಸ್ಟ್ರೀಮ್ ಪ್ರಸಾರ ಸಾಧ್ಯವಾಗಲಿದೆ. 
ವೋಡಾಫೋನ್, ನೋಕಿಯಾ ಹಾಗೂ ಕಾರು ಉತ್ಪಾದಕ ಸಂಸ್ಥೆ ಆಡಿ ಸಂಸ್ಥೆ ಜಂಟಿಯಾಗಿ ಈ ಯೋಜನೆಯನ್ನು ಕೈಗೆತ್ತಿಕೊಂಡಿದ್ದು, ಜರ್ಮನಿಯ ಬರ್ಲಿನ್ ಮೂಲದ ವಿಜ್ಞಾನಿಗಳ ಕನಸಿನ ಮೂನ್ ಮಿಷನ್ ಯೋಜನೆಗೆ ಖಾಸಗಿ ಸಂಸ್ಥೆಗಳು ಹಣ ಹೂಡಿಕೆ ಮಾಡಿವೆ. ಹೀಗಾಗಿ, ಮುಂದಿನ ವರ್ಷ ಚಂದ್ರನಲ್ಲೂ ಮೊಬೈಲ್ ನೆಟ್ವರ್ಕ್ ಸಿಗಲಿದೆ. 
ಬರ್ಲಿನ್ ಮೂಲದ ಕಂಪನಿ ಪಿಟಿಎಸ್ ಸೈಂಟಿಸ್ಟ್ಸ್ ಹಾಗೂ ಮುಖ್ಯ ಕಾರ್ಯ ನಿರ್ವಾಹಕ ರಾಬರ್ಟ್ ಬೊಹ್ಮೆ ಅವರು ಈ ಬಗ್ಗೆ ಮಾತನಾಡಿ, ಕೇಪ್ ಕ್ಯಾನವರಲ್ ನಿಂದ 2019ರಲ್ಲಿ ಸ್ಪೇಸ್ ಎಕ್ಸ್ ಫಾಲ್ಕನ್ 9 ರಾಕೆಟ್ ಮೂಲಕ ಇದನ್ನು ಲಾಂಚ್ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ.
ಮೊಟ್ಟ ಮೊದಲ ಎಚ್ ಡಿ ವಿಡಿಯೋ ಫೀಡ್ ಚಂದ್ರನಿಂದ ಭೂಮಿಗೆ ಸಿಗಲಿದ್ದು, ಬರ್ಲಿನ್ ನ ಮಿಷನ್ ಕಂಟ್ರೋಲ್ ಕೇಂದ್ರದಿಂದ ವಿಶ್ವದೆಲ್ಲೆಡೆ ಪ್ರಸಾರವಾಗಲಿದೆ. ಇದು ಟೆಲಿಕಾಂ ಕ್ಷೇತ್ರದಲ್ಲಿ ಹೊಸದೊಂದು ಕ್ರಾಂತಿಯಾಗಲಿದೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com