ಹಳಿಯೇ ಇಲ್ಲದೇ ರೈಲು ಬಿಟ್ಟಿದ್ದಾಯ್ತು: ಈಗ ಶತಾಬ್ದಿಗೆ ಖೋಕ್ ಇಂಜಿನ್ ಇಲ್ಲದ ರೈಲು ಆನ್ ಟ್ರ್ಯಾಕ್!

ಕಳೆದ ತಿಂಗಳಲ್ಲಿ ಹಳಿಯೇ ಇಲ್ಲದೇ ರೈಲು ಚಾಲನೆ ಮಾಡುವ ಪ್ರಯೋಗ ಯಶಸ್ವಿಯಾಗಿತ್ತು. ರೈಲ್ವೆ ಇಲಾಖೆ ಮತ್ತೊಂದು ಇಂಥಹದ್ದೇ ವಿನೂತನ ಪ್ರಯೋಗವನ್ನು ಯಶಸ್ವಿಗೊಳಿಸಿದ್ದು,
ಹಳಿಯೇ ಇಲ್ಲದೇ ರೈಲು ಬಿಟ್ಟಿದ್ದಾಯ್ತು ಈಗ ಹಳಿಯ ಮೇಲೆ ಬರಲಿದೆ ಇಂಜಿನ್ ಇಲ್ಲದ ರೈಲು!: ರೈಲ್ವೆ ಇಲಾಖೆಯ ಮತ್ತೊಂದು ಸಾಧನೆ!
ಹಳಿಯೇ ಇಲ್ಲದೇ ರೈಲು ಬಿಟ್ಟಿದ್ದಾಯ್ತು ಈಗ ಹಳಿಯ ಮೇಲೆ ಬರಲಿದೆ ಇಂಜಿನ್ ಇಲ್ಲದ ರೈಲು!: ರೈಲ್ವೆ ಇಲಾಖೆಯ ಮತ್ತೊಂದು ಸಾಧನೆ!
ನವದೆಹಲಿ: ಕಳೆದ ತಿಂಗಳಲ್ಲಿ ಹಳಿಯೇ ಇಲ್ಲದೇ ರೈಲು ಚಾಲನೆ ಮಾಡುವ ಪ್ರಯೋಗ ಯಶಸ್ವಿಯಾಗಿತ್ತು. ರೈಲ್ವೆ ಇಲಾಖೆ ಮತ್ತೊಂದು ಇಂಥಹದ್ದೇ ವಿನೂತನ ಪ್ರಯೋಗವನ್ನು ಯಶಸ್ವಿಗೊಳಿಸಿದ್ದು, ಇಂಜಿನ್ ಇಲ್ಲದೇ ಮೆಟ್ರೋ ಮಾದರಿಯಲ್ಲಿ ಉಭಯ ಬದಿಯಿಂದ ಚಾಲನಾ ವ್ಯವಸ್ಥೆ ಹೊಂದಿರುವ ಟ್ರೈನ್-18 ರ ಪ್ರಾಯೋಗಿಕ ಪರೀಕ್ಷೆ ಯಶಸ್ವಿಯಾಗಿ ನಡೆದಿದೆ. 
ಚೆನ್ನೈ ನಲ್ಲಿರುವ ಐಸಿಎಫ್ ಶೇ.80 ರಷ್ಟು ದೇಶಿ ಕಾಂಪೊನೆಂಟ್ ಗಳನ್ನು ಬಳಕೆ ಮಾಡಿಕೊಂಡು ರೈಲನ್ನು ನಿರ್ಮಿಸಲಾಗಿದ್ದು, ಮೇಕ್ ಇನ್ ಇಂಡಿಯಾದ ಯೋಜನೆಯಡಿಯಲ್ಲಿ ತಯಾರಿಸಲಾಗಿದೆ. ಈ ಯೋಜನೆಗಾಗಿ 2020 ರ ವೇಳೆಗೆ ಸುಮಾರು 905,000 ರೂಪಾಯಿ ಹೂಡಿಕೆ ಮಾಡುವುದಕ್ಕೆ ಯೋಜನೆ ಹೊಂದಿದೆ. 
ಹೈ ಸ್ಪೀಡ್ ಟ್ರೇನ್-18 ನ್ನು ಶತಾಬ್ದಿಗಳ ಬದಲಾಗಿ ಬಳಕೆಯಾಗಲಿದ್ದು ಇದರಿಂದಾಗಿ ರೈಲ್ವೆಯು ಅಪಾರ ಪ್ರಮಾಣದ ಸಮಯವನ್ನು ಉಳಿಸಲಿದೆ. ಸುಮಾರು 160 ಕಿ.ಮೀ ಪ್ರತಿ ಗಂಟೆ ವೇಗದಲ್ಲಿ ಚಲಿಸುವ ಈ ರೈಲು 16 ಹವಾನಿಯಂತ್ರಿತ ಬೋಗಿಗಳನ್ನು ಹೊಂದಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com