ಮುಂದಿನ 6 ತಿಂಗಳಲ್ಲಿ ಇಸ್ರೋದಿಂದ ಚಂದ್ರಯಾನ -2 ಸೇರಿ 18 ಯೋಜನೆಗಳ ಜಾರಿಗೆ ಸಿದ್ದತೆ

ಪಿಎಸ್ಎಲ್ವಿ ಕಾರ್ಯಾಚರಣೆಗಳ ನಿರಂತರ ಯಶಸ್ಸಿನೊಂದಿಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಮುಂದಿನ ಆರು ತಿಂಗಳಲ್ಲಿ ಸುಮಾರು 18 ಉಪಗ್ರಹಗಳನ್ನು ಉಡಾವಣೆಗೊಳಿಸುವ ಯೋಜನೆ ....
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಪಿಎಸ್ಎಲ್ವಿ ಕಾರ್ಯಾಚರಣೆಗಳ ನಿರಂತರ ಯಶಸ್ಸಿನೊಂದಿಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಮುಂದಿನ ಆರು ತಿಂಗಳಲ್ಲಿ ಸುಮಾರು 18 ಉಪಗ್ರಹಗಳನ್ನು ಉಡಾವಣೆಗೊಳಿಸುವ ಯೋಜನೆ ಹಾಕಿಕೊಂಡಿದೆ. ಸುಮಾರು ಎರಡು ವಾರಕ್ಕೆ ಒಂದು ಉಪಗ್ರಹ ಉಡಾವಣೆ ಕಾರ್ಯಕ್ರಮ ನಡೆಸಲು ಇಸ್ರೋ ಉದ್ದೇಶಿಸಿದೆ.
ಭಾನುವಾರ ರಾತ್ರಿ ಇಸ್ರೋ ಯುಕೆಗೆ ಸೇರಿದ್ದ ಎರಡು ಖಾಸಗಿ ಉಪಗ್ರಹಗಳನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿತ್ತು.
"ನಾವು ಮುಂದಿನ ಆರು ತಿಂಗಳಲ್ಲಿ 18 ಉಪಗ್ರಹ ಉಡಾವಣೆ ಕಾರ್ಯಾಚರಣೆಗಳನ್ನು ನಡೆಸಲಿದ್ದೇವೆ. ಪ್ರತಿ ಎರಡು ವಾರಗಳಿಗೊಮ್ಮೆ ಈ ಕಾರ್ಯಾಚರಣೆ ನಡೆಯಲಿದೆ.ಎಂದು ಇಸ್ರೋ ಅಧ್ಯಕ್ಷ ಕೆ. ಶಿವನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಿರಿಯ ವಿಜ್ಞಾನಿಗಳ ಪ್ರಕಾರ, ಜಿಸ್ಯಾಟ್  -11, ಚಂದ್ರಯಾನ -2, ಮತ್ತು ಜಿಎಸ್ಎಲ್ವಿ-ಎಂಕೆಐಐಐಐ-ಡಿ 2 ಕಾರ್ಯಾಚರಣೆಗಳನ್ನು ಸಹ ಇದು ಒಳಗೊಂಡಿದೆ.ಜಿಸ್ಯಾಟ್-11 ಬಹು-ಕಿರಣ ಸಂವಹನ ಉಪಗ್ರಹವಾಗಿದ್ದು, ಫ್ರೆಂಚ್ ಗಯಾನಾದಿಂದ ಉಡಾವಣೆಗೆ ಸಿದ್ದತೆ ನಡೆದಿದೆ.
ಚಂದ್ರಯಾನ -2 ಚಂದ್ರನ ಅಧ್ಯಯನಕ್ಕಾಗಿ ಭಾರತ ಕಳಿಸುತ್ತಿರುವ ಎರಡನೇ ವಿಶೇಷ ಉಪಗ್ರಹವಾಗಿದ್ದು ಇದರಲ್ಲಿ ಆರು ಚಕ್ರದ ರೋವರ್ ಅನ್ನು ಸಾಗಿಸುವ ಲ್ಯಾಂಡರ್ ಅನ್ನು ಇಸ್ರೋ ಅಳವಡಿಸಲಿದೆ.
ಚಂದ್ರನಲ್ಲಿನ ರಾಸಾಯನಿಕ, ಖನಿಜಶಾಸ್ತ್ರೀಯ ಮತ್ತು ಛಾಯಾ-ಭೂವೈಜ್ಞಾನಿಕ  ನಕಾಶೆಗಾಗಿ ಚಂದ್ರನ ಮೇಲ್ಮೈಯಿಂದ 100 ಕಿ.ಮೀ ಎತ್ತರದಲ್ಲಿ ಸುತ್ತುತ್ತಿರುವ ಚಂದ್ರಯಾನ-1 ಅನ್ನು 2008 ರಲ್ಲಿ ಇಸ್ರೋ ಯಶಸ್ವಿಯಾಗಿ ಉಡಾವಣೆಗೊಳಿಸಿತ್ತು.
ಚಂದ್ರಯಾನ -2 ರಲ್ಲಿ, ವಿಜ್ಞಾನಿಗಳು ಚಂದ್ರನ ಮೇಲ್ಮೈ ಭೂಮಿ ಅಧ್ಯಯನಕ್ಕಾಗಿ  ರೋವರ್ ಅನ್ನು ನಿಯೋಜಿಸುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com