2019 ರಲ್ಲಿ ಇಸ್ರೋ ಸಾಧಿಸಿದ ಮೈಲಿಗಳ ಬಗ್ಗೆ ಇಲ್ಲಿದೆ ಮಾಹಿತಿ

2019, ಈಗ ಮಿಷನ್ 2.0 ಮೋಡ್ ನಲ್ಲಿರುವ ಇಸ್ರೋ ಪಾಲಿಗೆ ಹಲವು ಹೊಸ ಆರಂಭಗಳನ್ನು ನೀಡಿದ ವರ್ಷ. 
2019 ರಲ್ಲಿ ಇಸ್ರೋ ಸಾಧಿಸಿದ ಮೈಲಿಗಳ ಬಗ್ಗೆ ಇಲ್ಲಿದೆ ಮಾಹಿತಿ
2019 ರಲ್ಲಿ ಇಸ್ರೋ ಸಾಧಿಸಿದ ಮೈಲಿಗಳ ಬಗ್ಗೆ ಇಲ್ಲಿದೆ ಮಾಹಿತಿ
Updated on

2019, ಈಗ ಮಿಷನ್ 2.0 ಮೋಡ್ ನಲ್ಲಿರುವ ಇಸ್ರೋ ಪಾಲಿಗೆ ಹಲವು ಹೊಸ ಆರಂಭಗಳನ್ನು ನೀಡಿದ ವರ್ಷ. 

ಈ ವರ್ಷದಲ್ಲಿ ಇಸ್ರೋ ಪಟ್ಟಿಯಲ್ಲಿ ಹಲವು ಅರ್ಧಶತಕಗಳು ದಾಖಲಿಸಿದ್ದು, ಬರೊಬ್ಬರಿ 50 ವಿದೇಶಿ ಸ್ಯಾಟಲೈಟ್ ಗಳನ್ನು ಕಕ್ಷೆಗೆ ಸೇರಿಸಿದ್ದರೆ 50 ಪಿಎಸ್ಎಲ್ ವಿ ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿದೆ. ಈ ಯಶಸ್ಸಿನ ನಡುವೆ ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್ ವೈಫಲ್ಯವನ್ನೂ ಕೂಡ ಇಸ್ರೋ ಎದುರಿಸಬೇಕಾಯಿತು.

ಇನ್ನು ತಮಿಳುನಾಡಿನಲ್ಲಿ ಎರಡನೇ ರಾಕೆಟ್ ಲಾಂಚ್ ಪ್ಯಾಡ್, ದೇಶಿಯವಾಗಿ ತಯಾರಿಸಲಾಗಿರುವ ನ್ಯಾವಿಗೇಷನ್ ಪ್ರೊಸೆಸರ್ ಚಿಪ್ ರಾಕೆಟ್ ಉಡಾವಣೆ, ರಾಕೆಟ್ ತಯಾರಿಕೆ ಹಾಗೂ ಆಂಟ್ರಿಕ್ಸ್ ಕಾರ್ಪೊರೇಷನ್ ನ ವಾಣಿಜ್ಯ ಚಟುವಟಿಕೆಗಳನ್ನು ವಹಿಸಿಕೊಳ್ಳುವುದು ಸೇರಿದಂತೆ ಹಲವು ದಿಟ್ಟ ನಿರ್ಧಾರಗಳನ್ನು ಇಸ್ರೋ ಹಾಗೂ ಬಾಹ್ಯಾಕಾಶ ಇಲಾಖೆ ಕೈಗೊಂಡಿದ್ದು ವರ್ಷದ ಗಮನಾರ್ಹ ಬೆಳವಣಿಗೆಯಾಗಿತ್ತು.  

ನ್ಯೂ ಸ್ಪೇಸ್ ಇಂಡಿಯಾದ ಅಡಿಯಲ್ಲಿ 5 ಪಿಎಸ್ಎಲ್ ವಿ ರಾಕೆಟ್ ಗಳನ್ನು ಖಾಸಗಿ ಸೆಕ್ಟರ್ ನಿಂದ ತಯಾರಿಸುವ ಮೊದಲ ಪ್ರಯತ್ನ ನಡೆದಿದ್ದು 2019 ರಲ್ಲೆ 

2019 ರಲ್ಲಿ ಇಸ್ರೋ ಒಟ್ಟಾರೆ 319 ಸ್ಯಾಟಲೈಟ್ ಗಳನ್ನು ಉಡಾವಣೆ ಮಾಡಿದ್ದು, ಚಂದ್ರಯಾನ-3 ಮಿಷನ್ ಕೈಗೊಳ್ಳಲು ನಿರ್ಧರಿಸಲಾಯಿತು. ಅಷ್ಟೇ ಅಲ್ಲದೇ ಹ್ಯೂಮನ್ ಸ್ಪೇಸ್ ಫ್ಲೈಟ್ ಸೆಂತರ್ ಸ್ಥಾಪನೆ, ಯುವ ವಿಜ್ಞಾನಿ ಕಾರ್ಯಕ್ರಮ; ಮಾನವ ಸಹಿತ ಬಾಹ್ಯಾಕಾಶ ಕಾರ್ಯಕ್ರಮಕ್ಕೆ ಭಾರತೀಯ ಗಗನಯಾತ್ರಿಗಳಿಗೆ ತರಬೇತಿ ನೀಡಲು ಐಎಎಫ್ ಜೊತೆ ಒಪ್ಪಂದ. 

ಬಾಹ್ಯಾಕಾಶ ಭಗ್ನಾವಶೇಷಗಳಿಂದ ಹೆಚ್ಚಿನ ಮೌಲ್ಯದ ಸ್ವತ್ತುಗಳನ್ನು ರಕ್ಷಿಸುವ ಕೇಂದ್ರಕ್ಕೆ ಬಾಹ್ಯಾಕಾಶ ಸಂಸ್ಥೆಯಿಂದ 2019 ರಲ್ಲಿ ಅಡಿಗಲ್ಲು. 

ಮೈಕ್ರೋಸ್ಯಾಟ್ ಆರ್ ರಕ್ಷಣಾ ಇಮೇಜಿಂಗ್ ಉಪಗ್ರಹವನ್ನು ಉಡಾವಣೆ ಮಾಡುವ ಮೂಲಕ 2019 ರ ವರ್ಷವನ್ನು ಇಸ್ರೋ ಪ್ರಾರಂಭಿಸಿತ್ತು.    

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com