ಚಂದ್ರಯಾನ-2 ಆರ್ಬಿಟರ್ ಸಕ್ರಿಯವಾಗಿದೆ, ವಿಕ್ರಮ್ ಲ್ಯಾಂಡರ್ ನಿಂದ ಸಿಗ್ನಲ್ ಇಲ್ಲ: ಇಸ್ರೋ ಮುಖ್ಯಸ್ಥ ಶಿವನ್

ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಅಧ್ಯಕ್ಷ ಕೆ.ಶಿವನ್ ಚಂದ್ರಯಾನ-2 ಬಗ್ಗೆ ಮಾತನಾಡಿದ್ದು, ಚಂದ್ರಯಾನ-2 ಆರ್ಬಿಟರ್ ಸಕ್ರಿಯವಾಗಿದೆ, ಆದರೆ ವಿಕ್ರಮ್ ಲ್ಯಾಂಡರ್ ಜೊತೆ ಸಿಗ್ನಲ್ ಸಿಗುತ್ತಿಲ್ಲ ಎಂದು ಹೇಳಿದ್ದಾರೆ. 
ಇಸ್ರೋ ಮುಖ್ಯಸ್ಥ ಶಿವನ್
ಇಸ್ರೋ ಮುಖ್ಯಸ್ಥ ಶಿವನ್

ಅಹ್ಮದಾಬಾದ್: ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಅಧ್ಯಕ್ಷ ಕೆ.ಶಿವನ್ ಚಂದ್ರಯಾನ-2 ಬಗ್ಗೆ ಮಾತನಾಡಿದ್ದು, ಚಂದ್ರಯಾನ-2 ಆರ್ಬಿಟರ್ ಸಕ್ರಿಯವಾಗಿದೆ, ಆದರೆ ವಿಕ್ರಮ್ ಲ್ಯಾಂಡರ್ ಜೊತೆ ಸಿಗ್ನಲ್ ಸಿಗುತ್ತಿಲ್ಲ ಎಂದು ಹೇಳಿದ್ದಾರೆ. 

ಮಾಧ್ಯಮಗಳೊಂದಿಗೆ ಮಾತನಾಡಿರುವ ಇಸ್ರೋ ಅಧ್ಯಕ್ಷರು, ವಿಕ್ರಮ್ ಗೆ ಸಂಬಂಧಿಸಿದ ವಿಷಯವಾಗಿ ವಿಶ್ಲೇಷಣೆ ನಡೆಸುವುದಕ್ಕಾಗಿ ರಾಷ್ಟ್ರ ಮಟ್ಟದ ಸಮಿತಿಯನ್ನು ರಚಿಸಿದ್ದು, ವಿಶ್ಲೇಷಣೆ ವರದಿಯ ನಂತರ ಮುಂದಿನ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. 

ಸ್ಮಾಲ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಎಸ್ಎಸ್ಎಲ್ ವಿ) ಆದಿತ್ಯ ಎಲ್-1 ಮಿಷನ್ ಹಾಗೂ ಗಗನ್ ಯಾನ್ ಮಿಷನ್ ನಲ್ಲಿ ಇಸ್ರೋ ಸಂಸ್ಥೆ ತೊಡಗಿಸಿಕೊಂಡಿದೆ ಎಂದು ಶಿವನ್ ಮಾಹಿತಿ ನೀಡಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com