ರಾಕೇಶ್ ಶರ್ಮಾರಿಂದ ರಾಜಾ ಚಾರಿಯವರೆಗೆ: ಬಾಹ್ಯಾಕಾಶದಲ್ಲಿ ಭಾರತದ ಹೆಸರನ್ನು ಬೆಳಗಿದ ಗಗನಯಾತ್ರಿಗಳು

ಅಮೆರಿಕಾದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ 1970ರ ನಂತರ ಇದೇ ಮೊದಲ ಬಾರಿಗೆ 18 ಗಗನಯಾತ್ರಿಗಳನ್ನು ಚಂದ್ರನಲ್ಲಿಗೆ ಕಳಿಸುತ್ತಿದೆ. ಈ ಪೈಕಿ ಭಾರತೀಯ-ಅಮೇರಿಕನ್ ಕೂಡ ಒಬ್ಬರಾಗಿದ್ದಾರೆ ಎನ್ನುವುದು ಭಾರತೀಯರ ಪಾಲಿಗೆ ಹೆಮ್ಮೆಯ ಸಂಗತಿ.
ರಾಕೇಶ್ ಶರ್ಮಾರಿಂದ ರಾಜಾ ಚಾರಿಯವರೆಗೆ: ಬಾಹ್ಯಾಕಾಶದಲ್ಲಿ ಭಾರತದ ಹೆಸರನ್ನು ಬೆಳಗಿದ ಗಗನಯಾತ್ರಿಗಳು

ಅಮೆರಿಕಾದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ 1970ರ ನಂತರ ಇದೇ ಮೊದಲ ಬಾರಿಗೆ 18 ಗಗನಯಾತ್ರಿಗಳನ್ನು ಚಂದ್ರನಲ್ಲಿಗೆ ಕಳಿಸುತ್ತಿದೆ. ಈ ಪೈಕಿ ಭಾರತೀಯ-ಅಮೇರಿಕನ್ ಕೂಡ ಒಬ್ಬರಾಗಿದ್ದಾರೆ ಎನ್ನುವುದು ಭಾರತೀಯರ ಪಾಲಿಗೆ ಹೆಮ್ಮೆಯ ಸಂಗತಿ.

ನಾಸಾದ ಆರ್ಟೆಮಿಸ್​ ಯೋಜನೆಯಡಿ ಚಂದ್ರಯಾನಕ್ಕಾಗಿ 9 ಮಹಿಳೆ, 9 ಪುರುಷ ಗಗನಯಾತ್ರಿಗಳು ಆಯ್ಕೆಯಾಗಿದ್ದು ಇದರಲ್ಲಿ ಯುಎಸ್ ಏರ್ ಫೋರ್ಸ್ ಅಕಾಡೆಮಿ, ಎಂಐಟಿ ಮತ್ತು ಯುಎಸ್ ನೇವಲ್ ಟೆಸ್ಟ್ ಪೈಲಟ್ ಶಾಲೆಯ ಪದವೀಧರರಾದ ರಾಜಾ ಜಾನ್ ವರ್ಪುತೂರ್ಚಾರಿ (43) ಅವರ ಹೆಸರಿದೆ.

2017 ರ ಗಗನಯಾತ್ರಿ ಅಭ್ಯರ್ಥಿ ತರಗತಿಗೆ (ಅಸ್ಟ್ರೋನೆಟ್ ಕ್ಯಾಂಡಿಡೇಟ್ ಕ್ಲಾಸ್) ಸೇರಲು ನಾಸಾ ಅವರನ್ನು ಆಯ್ಕೆ ಮಾಡಿದೆ. ಅವರು ಆಗಸ್ಟ್ 2017 ರಲ್ಲಿ ಕರ್ತವ್ಯಕ್ಕೆ ದಾಖಲಾಗಿದ್ದರು.ಅಲ್ಲಿಂದ ಆರಂಭಿಕ ಗಗನಯಾತ್ರಿ ಅಭ್ಯರ್ಥಿ ತರಬೇತಿಯನ್ನು ಪೂರ್ಣಗೊಳಿಸಿದ ನಂತರ ಈಗ ಮಿಷನ್ ನಿಯೋಜನೆಗೆ ಅರ್ಹರಾಗಿದ್ದಾರೆ.

ರಾಜಾ ಚಾರಿ ಅವರ ತಂದೆ ದೆ ಶ್ರೀನಿವಾಸ್​ ವಿ ಚಾರಿ ಹೈದರಾಬಾದ್ ಮೂಲದವರಾಗಿದ್ದು ಹೈದರಾಬಾದ್ ನಿಂದ ಅಮೆರಿಕಾಗೆ ವಲಸೆ ಹೋಗಿ ನೆಲೆಸಿದ್ದರು. ಅಮೆರಿಕಾದ ಲೋವಾದಲ್ಲಿ ಬೆಳೆದ ರಾಜಾ ಚಾರಿ ಇದೀಗ ಬಾಹ್ಯಾಕಾಶಕ್ಕೆ ಪ್ರಯಾಣಿಸಲು ಸಜ್ಜಾಗಿದ್ದಾರೆ.

ಇನ್ನು ಇದರೊಂದಿಗೆ ಬಾಹ್ಯಾಕಾಶಕ್ಕೆ ತೆರಳಿದ್ದ ಎಲ್ಲಾ ಎಲ್ಲಾ ಭಾರತೀಯ ಮತ್ತು ಭಾರತೀಯ ಮೂಲದ ಗಗನಯಾತ್ರಿಗಳ ಪಟ್ಟಿಯಲ್ಲಿ ರಾಜಾ ಚಾರಿಯವರ ಹೆಸರು ನಾಲ್ಕನೆಯದಾಗಿದೆ. 

1. ರಾಕೇಶ್ ಶರ್ಮಾ

ರಾಕೇಶ್ ಶರ್ಮಾ ಬಾಹ್ಯಾಕಾಶಕ್ಕೆ ಹೋದ ಮೊದಲ ಭಾರತೀಯ ಗಗನಯಾತ್ರಿ. ಅವರು 7 ದಿನ 21 ಗಂಟೆ 40 ನಿಮಿಷಗಳನ್ನು ಸ್ಯಾಲ್ಯುಟ್ 7 ಕಕ್ಷೆಯ ನಿಲ್ದಾಣದಲ್ಲಿ ಕಳೆದರು. ರಾಕೇಶ್ ಬಾಹ್ಯಾಕಾಶದಲ್ಲಿ ಪ್ರಯಾಣಿಸಿದ ಏಕೈಕ ಭಾರತೀಯ ಪ್ರಜೆ

2. ಕಲ್ಪನಾ ಚಾವ್ಲಾ

ಕಲ್ಪನಾ ಚಾವ್ಲಾ ಬಾಹ್ಯಾಕಾಶಕ್ಕೆ ಪ್ರವೇಶಿಸಿದ ಮೊದಲ ಭಾರತ ಮೂಲದ ಮಹಿಳೆ. 2003 ರಲ್ಲಿ ಚಾವ್ಲಾ ತನ್ನ ಆರು ಸಿಬ್ಬಂದಿಯೊಂದಿಗೆ ಬಾಹ್ಯಾಕಾಶ ನೌಕೆಯ ಕೊಲಂಬಿಯಾದಲ್ಲಿ ಪ್ರಯಾಣಿಸಿದ್ದರು. ಆದರೆ ನೌಕೆ ಅಪಘಾತವಾದ ಪರಿಣಾಮ ಅವರು ಬದುಕುಳಿಯಲಿಲ್ಲ. ಇದಕ್ಕೆ ಮುನ್ನ . 1997 ರಲ್ಲಿ ಅವರು ಮೊದಲು ಬಾಹ್ಯಾಕಾಶ ನೌಕೆಯ ಕೊಲಂಬಿಯಾದಲ್ಲಿ ಮಿಷನ್ ಸ್ಪೆಷಲಿಸ್ಟ್ ಮತ್ತು ಪ್ರಾಥಮಿಕ ರೊಬೊಟಿಕ್ ಆರ್ಮ್ ಆಪರೇಟರ್ ಆಗಿ ಪ್ರಯಾಣಿಸಿದ್ದರು.  2003 ರಲ್ಲಿ, ಕೊಲಂಬಿಯಾ ದುರಂತದಲ್ಲಿ ಸಾವನ್ನಪ್ಪಿದ ಏಳು ಸಿಬ್ಬಂದಿಗಳಲ್ಲಿ ಚಾವ್ಲಾ ಒಬ್ಬರಾಗಿದ್ದರು, ಭೂಮಿಯ ವಾತಾವರಣಕ್ಕೆ ಮರು ಪ್ರವೇಶಿಸುವಾಗ ಬಾಹ್ಯಾಕಾಶ ನೌಕೆ ದುರಂತ ಅಂತ್ಯ ಕಂಡಿತ್ತು,

3. ಸುನೀತಾ ವಿಲಿಯಮ್ಸ್

ಸುನೀತಾ ವಿಲಿಯಮ್ಸ್ ಅಮೆರಿಕದ ಗಗನಯಾತ್ರಿ ಮತ್ತು ಯುನೈಟೆಡ್ ಸ್ಟೇಟ್ಸ್ ನೌಕಾಪಡೆಯ ಅಧಿಕಾರಿಯಾಗಿದ್ದಾರೆ. ಇವರು ಮಹಿಳೆಯೊಬ್ಬರು ಹೆಚ್ಚಿನ ಬಾಹ್ಯಾಕಾಶಯಾನ (50 ಗಂಟೆ, 40 ನಿಮಿಷಗಳು) ಮಾಡಿದ ದಾಖಲೆ ಹೊಂದಿದ್ದಾರೆ. ವಿಲಿಯಮ್ಸ್ ಅವರನ್ನು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಎಕ್ಸ್‌ಪೆಡಿಶನ್ 14 ಮತ್ತು ಎಕ್ಸ್‌ಪೆಡಿಶನ್ 15 ರ ಸದಸ್ಯರನ್ನಾಗಿ ನೇಮಿಸಲಾಯಿತು. 2012 ರಲ್ಲಿ, ಅವರು ಎಕ್ಸ್‌ಪೆಡಿಶನ್ 32 ರಲ್ಲಿ ಫ್ಲೈಟ್ ಎಂಜಿನಿಯರ್ ಆಗಿ ಸೇವೆ ಸಲ್ಲಿಸಿದರು ಮತ್ತು ನಂತರ ಎಕ್ಸ್‌ಪೆಡಿಶನ್ ಕಮಾಂಡರ್ ಆಗಿದ್ದರು. ಸುನೀತಾ ವಿಲಿಯಮ್ಸ್ ಓಹಿಯೋದ ಯೂಕ್ಲಿಡ್ನಲ್ಲಿ ಭಾರತೀಯ ಅಮೆರಿಕಾದ ನರರೋಗಶಾಸ್ತ್ರಜ್ಞ ಡಾ.ದೀಪಕ್ ಪಾಂಡ್ಯಾ ಮತ್ತು ಬೋನಿ ಪಾಂಡ್ಯಾ ದಂಪತಿಯ ಪುತ್ರಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com