ವ್ಯೋಮಮಿತ್ರ
ವ್ಯೋಮಮಿತ್ರ

ಇಸ್ರೋ ಗಗನ್ ಯಾನ್ ನ ವ್ಯೋಮಮಿತ್ರ ಪರಿಚಯ ಇಲ್ಲಿದೆ

2021 ರ ಡಿಸೆಂಬರ್ ವೇಳೆಗೆ ಇಸ್ರೋ ಮೊದಲ ಮಾನವ ಸಹಿತ ಬಾಹ್ಯಾಕಾಶ ಯಾನ ಗಗನ್ ಯಾನ್ ಮಿಷನ್ ಗೆ ಸಜ್ಜುಗೊಳ್ಳುತ್ತಿದೆ. 

ಬೆಂಗಳೂರು: 2021 ರ ಡಿಸೆಂಬರ್ ವೇಳೆಗೆ ಇಸ್ರೋ ಮೊದಲ ಮಾನವ ಸಹಿತ ಬಾಹ್ಯಾಕಾಶ ಯಾನ ಗಗನ್ ಯಾನ್ ಮಿಷನ್ ಗೆ ಸಜ್ಜುಗೊಳ್ಳುತ್ತಿದೆ. 

ಇದರ ಭಾಗವಾಗಿ ಇಸ್ರೋ ಮೊದಲು ಲೇಡಿ ರೋಬೋಟ್ ನ್ನು ಇಸ್ರೋ ಬಾಹ್ಯಾಕಾಶಕ್ಕೆ ಕಳಿಸಲಿದೆ. 'ವ್ಯೋಮಮಿತ್ರ' ಎಂಬ ಹೆಸರನ್ನು ಈ ರೋಬೋಟ್ ಗೆ ಇಡಲಾಗಿದ್ದು, ಜ.22 ರಂದು ಬಿಡುಗಡೆಯಾಗಿದೆ. 

ವ್ಯೋಮ ಮಿತ್ರ ಎಂಬುದು ಸಂಸ್ಕೃತ ಶಬ್ದವಾಗಿದ್ದು, ವ್ಯೋಮ (ಬಾಹ್ಯಾಕಾಶ) ಮಿತ್ರ ಎಂದರೆ ಸ್ನೇಹಿತ ಎಂಬ ಅರ್ಥ ಇದೆ. ಬಿಡುಗಡೆಯ ಸಮಾರಂಭದಲ್ಲಿ ವ್ಯೋಮಮಿತ್ರ ತನ್ನನ್ನು ತಾನು ಪರಿಚಯ ಮಾಡಿಕೊಂಡಿದ್ದು ಎಲ್ಲರ ಆಸಕ್ತಿಯ ಕೇಂದ್ರಬಿಂದುವಾಗಿತ್ತು. 

ಬಾಹ್ಯಾಕಾಶ ನೌಕೆಯಲ್ಲಿ ಗಗನ ಯಾತ್ರಿಗಳಳೊಂದಿಗೆ ಸಂವಹನ ನಡೆಸುವ ಸಾಮರ್ಥ್ಯ ಹೊಂದಿದ್ದೇನೆ, ಅವರನ್ನು ಗುರುತಿಸಿ, ಕೇಳುವ ಪ್ರಶ್ನೆಗಳಿಗೆ ಉತ್ತರಿಸಬಲ್ಲೆ ಎಂದು ವ್ಯೋಮಮಿತ್ರ ತನ್ನನ್ನು ತಾನು ಪರಿಚಯ ಮಾಡಿಕೊಂಡಿದೆ.

ರೋಬೋಟ್ ಬಗ್ಗೆ ಇಸ್ರೋ ಅಧ್ಯಕ್ಷ ಕೆ.ಶಿವನ್ ಪ್ರತಿಕ್ರಿಯೆ ನೀಡಿದ್ದು, ಮಾನವ ಕ್ರಿಯೆಗಳನ್ನು ಅನುಸರಿಸುವ ಸಾಮರ್ಥ್ಯವನ್ನು ಈ ರೋಬೋಟ್ ಹೊಂದಿದೆ. ಎಲ್ಲಾ ವ್ಯವಸ್ಥೆಗಳೂ ಸರಿ ಇದೆಯೇ ಎಂದು ಪರೀಕ್ಷಿಸಲು ಸಾಮರ್ಥ್ಯ ಹೊಂದಿದೆ ಎಂದು ಹೇಳಿದ್ದಾರೆ. 

Related Stories

No stories found.

Advertisement

X
Kannada Prabha
www.kannadaprabha.com