ಚಂದ್ರನ ಮೇಲೆ ಕಾಂಕ್ರೀಟ್ ತಯಾರಿಕೆಗೆ ಮನುಷ್ಯನ ಮೂತ್ರ ಉಪಯೋಗವಾಗಬಹುದು: ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ

ಚಂದ್ರ ಗ್ರಹಕ್ಕೆ ಹೋಗಿ ಬಂದವರಿದ್ದಾರೆ. ಅಲ್ಲಿ ನೆಲೆಸಲು ಪ್ರಯತ್ನಗಳು, ಪ್ರಯೋಗಗಳು ನಡೆಯುತ್ತಲೇ ಇದೆ. ಇಂತಹ ಸಂದರ್ಭದಲ್ಲಿ ಚಂದ್ರನಲ್ಲಿ ನಿರ್ಮಾಣಕ್ಕೆ ಕಾಂಕ್ರೀಟ್ ತಯಾರಿಗೆ ಮಾನವನ ಮೂತ್ರ ಬಳಕೆಯ ವಸ್ತುವಾಗಬಹುದು ಎಂದು ಯುರೋಪ್ ನ ಅಂತರಿಕ್ಷ ಸಂಸ್ಥೆ ಹೇಳಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬರ್ಲಿನ್: ಚಂದ್ರ ಗ್ರಹಕ್ಕೆ ಹೋಗಿ ಬಂದವರಿದ್ದಾರೆ. ಅಲ್ಲಿ ನೆಲೆಸಲು ಪ್ರಯತ್ನಗಳು, ಪ್ರಯೋಗಗಳು ನಡೆಯುತ್ತಲೇ ಇದೆ. ಇಂತಹ ಸಂದರ್ಭದಲ್ಲಿ ಚಂದ್ರನಲ್ಲಿ ನಿರ್ಮಾಣಕ್ಕೆ ಕಾಂಕ್ರೀಟ್ ತಯಾರಿಗೆ ಮಾನವನ ಮೂತ್ರ ಬಳಕೆಯ ವಸ್ತುವಾಗಬಹುದು ಎಂದು ಯುರೋಪ್ ನ ಅಂತರಿಕ್ಷ ಸಂಸ್ಥೆ ಹೇಳಿದೆ.

ಸಂಶೋಧಕರು ಇತ್ತೀಚೆಗೆ ನಡೆಸಿದ ಅಧ್ಯಯನದಲ್ಲಿ ಮನುಷ್ಯನ ಮೂತ್ರದಲ್ಲಿ ಇರುವ ಮುಖ್ಯ ಸಾವಯವ ಸಂಯುಕ್ತ ವಸ್ತು ಯೂರಿಯಾ ಚಂದ್ರನ ಮೇಲೆ ಕಟ್ಟಡ ನಿರ್ಮಿಸುವಾಗ ಕಾಂಕ್ರೀಟ್ ತಯಾರಿಗೆ ಮಿಶ್ರಣ ಮಾಡಲು ಬಳಕೆಯಾಗಬಹುದು ಎಂದಿದ್ದಾರೆ.

ಚಂದ್ರನ ಮೇಲ್ಮೈ ಮೇಲೆ ಲಭ್ಯವಾಗುವ ವಸ್ತುಗಳನ್ನು ಮಾತ್ರ ಬಳಕೆ ಮಾಡುವ ಸಾಧ್ಯತೆಯಿರುವುದರಿಂದ ಭೂಮಿಯಿಂದ ನಿರ್ಮಾಣಕ್ಕೆ ವಸ್ತುಗಳನ್ನು ಪೂರೈಸುವ ಅವಶ್ಯಕತೆ ಕಡಿಮೆಯಾಗಬಹುದು ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.

ಚಂದ್ರನ ಮೇಲ್ಮೈ ಮೇಲೆ ದೊರಕುವ ಪೌಡರ್ ತರಹದ ಮಣ್ಣನ್ನು ಚಂದ್ರನಲ್ಲಿ ನಿರ್ಮಾಣಕ್ಕೆ ಕಾಂಕ್ರೀಟ್ ತಯಾರಿಕೆಗೆ ಬಳಸಲಾಗುತ್ತದೆ. ಕಾಂಕ್ರೀಟ್ ತಯಾರಿಕೆಯಲ್ಲಿ ಯೂರಿಯಾ ಹದ ಮಿಶ್ರಣಕ್ಕೆ ಸಹಾಯ ಮಾಡುತ್ತದೆ.

ಭವಿಷ್ಯದಲ್ಲಿ ಚಂದ್ರನ ಮೇಲೆ ವಾಸಿಸಲು ಯೋಚಿಸುತ್ತಿರುವ ನಿವಾಸಿಗಳಿಗೆ ಧನ್ಯವಾದಗಳು, ಒಬ್ಬ ವ್ಯಕ್ತಿಯು ಪ್ರತಿದಿನ ಉತ್ಪಾದಿಸುವ 1.5 ಲೀಟರ್ (3.2 ಪಿಂಟ್) ಮೂತ್ರ ತ್ಯಾಜ್ಯವು ಬಾಹ್ಯಾಕಾಶ ಪರಿಶೋಧನೆಗೆ ಭರವಸೆಯ ಉಪ ಉತ್ಪನ್ನವಾಗಬಹುದು ಎಂದು ಯುರೋಪ್ ನ ಅಂತರಿಕ್ಷ ಸಂಸ್ಥೆ ಹೇಳಿದೆ.

ಭೂಮಿ ಮೇಲೆ ಯೂರಿಯಾವನ್ನು ಕಾರ್ಖಾನೆಗಳಲ್ಲಿ ರಸಗೊಬ್ಬರ ತಯಾರಿಕೆಗೆ ಕಚ್ಚಾ ವಸ್ತುವಾಗಿ ಕಂಪೆನಿಗಳು ಬಳಕೆ ಮಾಡುತ್ತಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com