ಇಒಎಸ್-03 ಉಪಗ್ರಹವನ್ನು ಕಕ್ಷೆಗೆ ತಲುಪಿಸುವಲ್ಲಿ ಜಿಎಸ್ ಎಲ್ ವಿ ಎಫ್-10 ವಿಫಲ, ಇಸ್ರೊ ಉಡಾವಣೆಗೆ ಹಿನ್ನಡೆ 

ಭಾರತವು ತನ್ನ ಅತ್ಯಾಧುನಿಕ ಭೂಮಿ ವೀಕ್ಷಣಾ ಉಪಗ್ರಹ ಇಒಎಸ್-03ಯನ್ನು ಹೊತ್ತೊಯ್ದ ಜಿಎಸ್ ಎಲ್ ವಿ-ಎಫ್ 10 ಗುರುವಾರ ನಸುಕಿನ ಜಾವ 5.43 ಕ್ಕೆ ಶ್ರೀಹರಿಕೋಟಾದ ಸತೀಶ್ ಧವನ್ ಕೇಂದ್ರದಿಂದ ಉಡಾವಣೆಗೊಂಡಿದೆಯಾದರೂ ಕಕ್ಷೆಗೆ ತಲುಪುವಲ್ಲಿ ವಿಫಲವಾಗಿದೆ.
ಉಡಾವಣೆಯ ದೃಶ್ಯ
ಉಡಾವಣೆಯ ದೃಶ್ಯ

ಶ್ರೀಹರಿಕೋಟ(ಆಂಧ್ರಪ್ರದೇಶ): ಭಾರತವು ತನ್ನ ಅತ್ಯಾಧುನಿಕ ಭೂಮಿ ವೀಕ್ಷಣಾ ಉಪಗ್ರಹ ಇಒಎಸ್-03ಯನ್ನು ಹೊತ್ತೊಯ್ದ ಜಿಎಸ್ ಎಲ್ ವಿ-ಎಫ್ 10 ಗುರುವಾರ ನಸುಕಿನ ಜಾವ 5.43 ಕ್ಕೆ ಶ್ರೀಹರಿಕೋಟಾದ ಸತೀಶ್ ಧವನ್ ಕೇಂದ್ರದಿಂದ ಉಡಾವಣೆಗೊಂಡಿದೆಯಾದರೂ ಕಕ್ಷೆಗೆ ತಲುಪುವಲ್ಲಿ ವಿಫಲವಾಗಿದೆ.

ನಿಗದಿಯಂತೆ ಜಿಎಸ್‌ಎಲ್‌ವಿ-ಎಫ್ 10 ಉಡಾವಣೆ ಇಂದು 0543 ಗಂಟೆಗೆ ಉಡಾವಣೆಗೊಂಡಿತು. ಮೊದಲ ಮತ್ತು ಎರಡನೇ ಹಂತಗಳ ಕಾರ್ಯಕ್ಷಮತೆ ಸಾಮಾನ್ಯವಾಗಿತ್ತಾದರೂ ಕ್ರಯೋಜೆನಿಕ್ ಮೇಲಿನ ಹಂತದ ದಹನವು ತಾಂತ್ರಿಕ ಅಡಚಣೆಯಿಂದಾಗಿ ಉದ್ದೇಶಿತ ಉದ್ದೇಶವನ್ನು ಸಾಧಿಸಲು ಸಾಧ್ಯವಾಗಲಿಲ್ಲ ಎಂದು ಇಸ್ರೊ ಹೇಳಿದೆ.

ಇಸ್ರೋ ಪ್ರಕಾರ, ಕ್ರೈಯೊಜೆನಿಕ್ ಮೇಲಿನ ಹಂತದ ಇಗ್ನಿಷನ್ ಲಿಫ್ಟ್ ಆಫ್ ಆದ 4.56 ನಿಮಿಷಗಳ ನಂತರ ನಿಗದಿಯಾಗಿತ್ತು. ಮಿಷನ್ ಕಂಟ್ರೋಲ್ ಸೆಂಟರ್‌ನಲ್ಲಿ ಶ್ರೇಣಿಯ ಕಾರ್ಯಾಚರಣೆಗಳ ನಿರ್ದೇಶಕರು ಔಪಚಾರಿಕ ಘೋಷಣೆಯನ್ನು ಮಾಡಿದರು, "ಕ್ರಿಯೋಜೆನಿಕ್ ಹಂತದಲ್ಲಿ ಉಪಗ್ರಹದ ಕಾರ್ಯಕ್ಷಮತೆ ತಪ್ಪಿಹೋಗಿ ಅಂದುಕೊಂಡಂತೆ ಕಕ್ಷೆ ತಲುಪಲಿಲ್ಲ ಎಂದು ಇಸ್ರೊ ಹೇಳಿಕೆ ಬಿಡುಗಡೆ ಮಾಡಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಇಸ್ರೊ ಅಧ್ಯಕ್ಷ ಕೆ ಶಿವನ್, ಕ್ರೈಯೊಜೆನಿಕ್ ಹಂತದಲ್ಲಿ ತಾಂತ್ರಿಕ ವೈಪರೀತ್ಯದಿಂದ ಸಾಧಿಸಲು ಸಾಧ್ಯವಾಗಲಿಲ್ಲ ಎಂದಿದ್ದಾರೆ.

ಕೋವಿಡ್ -19 ಸಾಂಕ್ರಾಮಿಕ ರೋಗದಿಂದ ಉಂಟಾದ ಅಡೆತಡೆಗಳನ್ನು ಎದುರಿಸಿದ ಇಸ್ರೋ, ರಾಕೆಟ್ ತನ್ನ ಉಡಾವಣಾ ಕಾರ್ಯಾಚರಣೆಯನ್ನು ಪುನರಾರಂಭಿಸಿದ್ದು, ದೇಶದ ದೊಡ್ಡ ಪ್ರದೇಶಗಳ ನೈಜ-ಸಮಯದ ಚಿತ್ರಣವನ್ನು ಆಗಾಗ್ಗೆ ಮಧ್ಯಂತರಗಳಲ್ಲಿ ಮತ್ತು ನೈಸರ್ಗಿಕ ವಿಪತ್ತುಗಳ ತ್ವರಿತ ಮೇಲ್ವಿಚಾರಣೆಯನ್ನು ಒದಗಿಸುವ ಗುರಿಯನ್ನು ಹೊಂದುವ ಉದ್ದೇಶದಿಂದ ಉಪಗ್ರಹ ತಯಾರಿಸಿತ್ತು.

2 ಸಾವಿರದ 268 ಕೆಜಿ ತೂಕದ ಜಿಸ್ಯಾಟ್-1 ಹೆಸರಿನ ಈ ಉಪಗ್ರಹವನ್ನು ಕಳೆದ ವರ್ಷ ಮಾರ್ಚ್ 5ರಂದು ಉಡಾವಣೆ ಮಾಡಲು ನಿರ್ಧರಿಸಲಾಗಿತ್ತು ಆದರೆ ಅದನ್ನು ತಾಂತ್ರಿಕ ಕಾರಣಗಳಿಂದ ಮುಂದೂಡಲಾಗಿತ್ತು. ನಂತರ ಕೋವಿಡ್ ಲಾಕ್ ಡೌನ್ ಮತ್ತಷ್ಟು ವಿಳಂಬ ಮಾಡಿತು. ನಂತರ ಈ ವರ್ಷ ಮಾರ್ಚ್ 28ರಂದು ಉಡಾವಣೆಗೆ ನಿಗದಿಯಾಗಿದ್ದರೂ ಸಣ್ಣ ಸಮಸ್ಯೆಯಿಂದಾಗಿ ಮತ್ತೊಮ್ಮೆ ಮುಂದೂಡಲ್ಪಟ್ಟಿತ್ತು.

ಇಂದಿನ ಉಡಾವಣೆಗೆ ಮುನ್ನ, ಇಸ್ರೋ ಈ ವರ್ಷದ ಫೆಬ್ರವರಿಯಲ್ಲಿ ಬ್ರೆಜಿಲ್‌ನ ಭೂಮಿಯ ವೀಕ್ಷಣೆ ಉಪಗ್ರಹ ಅಮೆಜೋನಿಯಾ -1 ಮತ್ತು 18 ಸಹ ಪ್ರಯಾಣಿಕರ ಉಪಗ್ರಹಗಳನ್ನು ಉಡಾವಣೆ ಮಾಡಿತ್ತು. ಸ್ಥಳೀಯ ಕ್ರಯೋಜೆನಿಕ್ ಎಂಜಿನ್ ಹೊಂದಿರುವ ಎಂಟನೇ ಉಪಗ್ರಹ ಇದಾಗಿದ್ದು, ಜಿಎಸ್‌ಎಲ್‌ವಿಯ 14 ನೇ ಹಾರಾಟವಾಗಿದೆ. ಶ್ರೀಹರಿಕೋಟಾದಿಂದ 79 ನೇ ಉಡಾವಣಾ ವಾಹನ ಕಾರ್ಯಾಚರಣೆ ಇದಾಗಿದೆ.

ಜಿಎಸ್ ಎಲ್ ವಿ ರಾಕೆಟ್‌ಗಳ ಹಿಂದಿನ ಉಡಾವಣೆಗಳು ಜಿಎಸ್ ಎಲ್ ವಿ-ಎಂಕೆIII-ಎಂ1 ಚಂದ್ರಯಾನ -2 ಕಾರ್ಯಾಚರಣೆಯನ್ನು ಜುಲೈ 2019ರಲ್ಲಿ ಒಳಗೊಂಡಿವೆ ಆದರೆ ಜಿಎಸ್ ಎಲ್ ವಿ ಎಫ್-11 ಡಿಸೆಂಬರ್ 2018 ರಲ್ಲಿ ಜಿಸ್ಯಾಟ್-7ಎಯನ್ನು ಯಶಸ್ವಿಯಾಗಿ ಉಡಾಯಿಸಿತ್ತು.

ಭೂಮಿಯ ವೀಕ್ಷಣೆ ಉಪಗ್ರಹ-ಇಒಎಸ್ -01-ಧ್ರುವ ಉಪಗ್ರಹ ಉಡಾವಣಾ ವಾಹನ ಪಿಎಸ್‌ಎಲ್‌ವಿ-ಸಿ 49 ನಿಂದ ಕಳೆದ ವರ್ಷ ನವೆಂಬರ್ ನಲ್ಲಿ ಉಡಾವಣೆ ಮಾಡಲಾಯಿತು ಎಂದು ಇಸ್ರೋ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com