ಭಾರೀ ತೂಕದ ರಾಕೆಟ್‌ ಇಂಜಿನ್‌ನ ಪರೀಕ್ಷೆ ನಡೆಸಿದ ಇಸ್ರೋ

ಈಗಾಗಲೇ ಹಲವು ಮೈಲಿಗಲ್ಲುಗಳನ್ನು ಸಾಧಿಸಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಈಗ ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದು, ತಮಿಳುನಾಡಿನ ಮಹೇಂದ್ರಗಿರಿಯಲ್ಲಿರುವ ಇಸ್ರೋ ಪ್ರೊಪಲ್ಷನ್ ಕಾಂಪ್ಲೆಕ್ಸ್‌ನ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಈಗಾಗಲೇ ಹಲವು ಮೈಲಿಗಲ್ಲುಗಳನ್ನು ಸಾಧಿಸಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಈಗ ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದು, ತಮಿಳುನಾಡಿನ ಮಹೇಂದ್ರಗಿರಿಯಲ್ಲಿರುವ ಇಸ್ರೋ ಪ್ರೊಪಲ್ಷನ್ ಕಾಂಪ್ಲೆಕ್ಸ್‌ನ (ಐಪಿಆರ್‌ಸಿ) ಹೈ ಆಲ್ಟಿಟ್ಯೂಡ್ ಟೆಸ್ಟ್ ಸೌಲಭ್ಯದಲ್ಲಿ ಭಾರೀ ತೂಕದ ಸಿಇ-20 ಇಂಜಿನ್‌ನ ಹಾರಾಟದ ವೇಳೆ ತಡೆದುಕೊಳ್ಳಬಹುದಾದ ಉಷ್ಣಾಂಶ ಧಾರಣ ಸಾಮರ್ಥ್ಯದ ಪರೀಕ್ಷೆ ನಡೆಸಿದೆ.

ಇಸ್ರೋ ಮುಂದಿನ ವರ್ಷ ಈ ಭಾರಿ ತೂಕದ ಉಪಗ್ರಹವನ್ನು ನಭೋ ಮಂಡಲಕ್ಕೆ ರವಾನಿಸಲಿದೆ. ಅದಕ್ಕೆ ಪೂರ್ವಭಾವಿಯಾಗಿ ಇಂಜಿನ್‍ನ ಸಾಮರ್ಥ್ಯದ ಪರೀಕ್ಷೆ ನಡೆಸಲಾಗಿದೆ.

ಇಂಗ್ಲೆಂಡ್‍ನ ಒನ್‍ವೆಬ್ ಇಂಡಿಯಾ ಸಂಸ್ಥೆ ಸಹಯೋಗದಲ್ಲಿ ಇಸ್ರೋ ಮತ್ತು ನವವೈಮಾನಿಕ ಭಾರತೀಯ ಸಂಸ್ಥೆ (ಎನ್‍ಎಸ್‍ಐಎಲ್) ಜಂಟಿಯಾಗಿ ಮುಂದಿನ ವರ್ಷ ನಾಲ್ಕು ಟನ್ ತೂಕದ ಉಪಗ್ರಹವನ್ನು ಉಡಾವಣೆ ಮಾಡಲು ಸಿದ್ಧತೆ ನಡೆಸಿವೆ.

ಅಕ್ಟೋಬರ್ 23ರಂದು ಒನ್‍ವೆಬ್ ಇಂಡಿಯಾ ಸಂಸ್ಥೆ ಸಹಯೋಗದಲ್ಲಿ ಇಸ್ರೋ ಉಪಗ್ರಹಗಳನ್ನು ಉಡಾವಣೆ ಮಾಡಿ ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದೆ. ಈ ಮೂಲಕ ಭಾರತೀಯ ಬಾಹ್ಯಾಕಾಶ ಕ್ಷೇತ್ರದಲ್ಲಿ ಒಟ್ಟು 72 ಉಪಗ್ರಹಗಳು ಕೆಳ ಹಂತದ ಭೂ ಕಕ್ಷೆಯಲ್ಲಿ ಸಕ್ರಿಯವಾಗಿವೆ.

ಎಲ್‍ವಿಎಂ3 ಉಡಾವಣೆ ಯಶಸ್ವಿಯಾದರೆ ಮತ್ತೊಂದು ಮೈಲಿಗಲ್ಲು ಸಾಧಿಸಿದಂತಾಗುತ್ತದೆ. ಇದರಿಂದ 2023ರ ವೇಳೆಗೆ ದೇಶದ ಗುಜರಾತ್‍ನಿಂದ ಅರುಣಾಚಲ ಪ್ರದೇಶದವರೆಗೂ, ಲಡಾಕ್‍ನಿಂದ ಕನ್ಯಾಕುಮಾರಿವರೆಗೂ ದುರ್ಗಮ ಪ್ರದೇಶಗಳು ಸೇರಿದಂತೆ ಎಲ್ಲೆಡೆ ಸಂಪರ್ಕ ಜಾಲ ಸುಗಮವಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com