ಚಂದ್ರಯಾನ-3 ಬಾಹ್ಯಾಕಾಶ ನೌಕೆ ಚಂದ್ರನ ಮೇಲ್ಮೈಗೆ ಮತ್ತಷ್ಟು ಹತ್ತಿರ: ಇಸ್ರೊ

ಭಾರತದ ಮಹತ್ವಾಕಾಂಕ್ಷೆಯ ಮೂರನೇ ಚಂದ್ರಯಾನದ ಬಾಹ್ಯಾಕಾಶ ನೌಕೆ ಚಂದ್ರಯಾನ-3 ಇಂದು ಸೋಮವಾರ ಮತ್ತೊಂದು ಸಾಧನೆ ಮಾಡಿದ್ದು, ಚಂದ್ರನ ಮೇಲ್ಮೈಗೆ ಇನ್ನಷ್ಟು ಹತ್ತಿರಕ್ಕೆ ಬಂದಿದೆ ಎಂದು ಇಸ್ರೋ ತಿಳಿಸಿದೆ.
ಚಂದ್ರಯಾನ-3
ಚಂದ್ರಯಾನ-3
Updated on

ಬೆಂಗಳೂರು: ಭಾರತದ ಮಹತ್ವಾಕಾಂಕ್ಷೆಯ ಮೂರನೇ ಚಂದ್ರಯಾನದ ಬಾಹ್ಯಾಕಾಶ ನೌಕೆ ಚಂದ್ರಯಾನ-3 ಇಂದು ಸೋಮವಾರ ಮತ್ತೊಂದು ಸಾಧನೆ ಮಾಡಿದ್ದು, ಚಂದ್ರನ ಮೇಲ್ಮೈಗೆ ಇನ್ನಷ್ಟು ಹತ್ತಿರಕ್ಕೆ ಬಂದಿದೆ ಎಂದು ಇಸ್ರೋ ತಿಳಿಸಿದೆ.

ಚಂದ್ರಯಾನ-3 ಈಗ ಚಂದ್ರನ ಸುತ್ತ ಸಮೀಪದ ವೃತ್ತಾಕಾರದ ಕಕ್ಷೆಯನ್ನು ಸಾಧಿಸಿದೆ ಎಂದು ಬೆಂಗಳೂರಿನ ಇಸ್ರೊ ಸಂಸ್ಥೆ ತಿಳಿಸಿದೆ. ಕಳೆದ ಜುಲೈ 14 ರಂದು ಉಡಾವಣೆಯಾದ ನಂತರ, ಚಂದ್ರಯಾನ-3 ಆಗಸ್ಟ್ 5 ರಂದು ಚಂದ್ರನ ಕಕ್ಷೆಗೆ ಪ್ರವೇಶಿಸಿ ನಂತರ ಆಗಸ್ಟ್ 6 ಮತ್ತು 9 ರಂದು ಎರಡು ಕಕ್ಷೆ ಸಮೀಪಕ್ಕೆ ಬಂದು ತಮ್ಮ ಪಯಣದಲ್ಲಿ ಮತ್ತಷ್ಟು ಯಶಸ್ಸು ಕಂಡಿತು. 

ಕಕ್ಷೆಯ ಪರಿಚಲನೆ ಹಂತವು ಪ್ರಾರಂಭವಾಗುತ್ತದೆ.ಇಂದು ನಡೆಸಿದ ನಿಖರವಾದ ಕುಶಲತೆಯು 150 ಕಿಮೀ x 177 ಕಿಮೀಗಳ ಸಮೀಪ ವೃತ್ತಾಕಾರದ ಕಕ್ಷೆಯನ್ನು ಸಾಧಿಸಿದೆ ಎಂದು ಇಸ್ರೋ ಟ್ವೀಟ್‌ನಲ್ಲಿ ತಿಳಿಸಿದೆ.

ಮುಂದಿನ ಕಾರ್ಯಾಚರಣೆಯನ್ನು ಆಗಸ್ಟ್ 16 ರಂದು ಬೆಳಗ್ಗೆ 8:30 ರ ಸುಮಾರಿಗೆ ಯೋಜಿಸಲಾಗಿದೆ ಎಂದು ತಿಳಿಸಿದೆ. ಮಿಷನ್ ಮುಂದುವರೆದಂತೆ, ಚಂದ್ರಯಾನ-3 ರ ಕಕ್ಷೆಯನ್ನು ಕ್ರಮೇಣ ಕಡಿಮೆ ಮಾಡಲು ಮತ್ತು ಚಂದ್ರನ ಧ್ರುವಗಳ ಮೇಲೆ ಇರಿಸಲು ಇಸ್ರೋ ಮೇಲ್ವಿಚಾರಣೆಯನ್ನು ಮುಂದುವರಿಸುತ್ತಿದೆ. 

ಇಸ್ರೋ ಮೂಲಗಳಿಂದ ಸಿಕ್ಕಿರುವ ಮಾಹಿತಿ ಪ್ರಕಾರ ಇದೇ ಆಗಸ್ಟ್ 16 ರಂದು ಬಾಹ್ಯಾಕಾಶ ನೌಕೆಯಲ್ಲಿ 100 ಕಿಮೀ ಕಕ್ಷೆಯನ್ನು ತಲುಪಲು ಮತ್ತೊಂದು ಪಯಣ ನಡೆಸಲಾಗುವುದು, ನಂತರ ಲ್ಯಾಂಡರ್ ಮತ್ತು ರೋವರ್ ನ್ನು ಒಳಗೊಂಡಿರುವ ಲ್ಯಾಂಡಿಂಗ್ ಮಾಡ್ಯೂಲ್ ಪ್ರೊಪಲ್ಷನ್ ಮಾಡ್ಯೂಲ್‌ನಿಂದ ದೂರ ಹೋಗಲಿದೆ.

ಇದರ ನಂತರ, ಲ್ಯಾಂಡರ್ "ಡೀಬೂಸ್ಟ್" (ನಿಧಾನಗೊಳಿಸುವ ಪ್ರಕ್ರಿಯೆ) ಗೆ ಒಳಗಾಗುವ ನಿರೀಕ್ಷೆಯಿದೆ. ಆಗಸ್ಟ್ 23 ರಂದು ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಮೃದುವಾದ ಲ್ಯಾಂಡಿಂಗ್ ಮಾಡುತ್ತದೆ.

ಲ್ಯಾಂಡಿಂಗ್ ಪ್ರಕ್ರಿಯೆಯ ಪ್ರಾರಂಭದ ವೇಗವು ಸೆಕೆಂಡಿಗೆ ಸುಮಾರು 1.68 ಕಿಮೀ, ಆದರೆ ಈ ವೇಗವು ಚಂದ್ರನ ಮೇಲ್ಮೈಗೆ ಸಮತಲವಾಗಿದೆ. ಇಲ್ಲಿ ಚಂದ್ರಯಾನ 3 ಸುಮಾರು 90 ಡಿಗ್ರಿಗಳಷ್ಟು ವಾಲುತ್ತದೆ, ಅದು ಲಂಬವಾಗಿರಬೇಕು. ಆದ್ದರಿಂದ ಇದು ಸಮತಲದಿಂದ ಲಂಬಕ್ಕೆ ತಿರುಗುವ ಸಂಪೂರ್ಣ ಪ್ರಕ್ರಿಯೆಯು ಗಣಿತದ ಒಂದು ಕುತೂಹಲಕಾರಿ ಲೆಕ್ಕಾಚಾರವಾಗಿದೆ. ನಾವು ಸಾಕಷ್ಟು ಸಿಮ್ಯುಲೇಶನ್‌ಗಳನ್ನು ಮಾಡಿದ್ದೇವೆ. ಇಲ್ಲಿಯೇ ಕಳೆದ ಬಾರಿ ಚಂದ್ರಯಾನ-2 ಕಾರ್ಯಾಚರಣೆಯಲ್ಲಿ ನಮಗೆ ಸಮಸ್ಯೆ ಎದುರಾಗಿತ್ತು ಎಂದು ಇಸ್ರೊ ಅಧ್ಯಕ್ಷ ಎಸ್ ಸೋಮನಾಥ್ ತಿಳಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com