ಬಿಲಿಯನ್ ಡಾಲರ್ ಟ್ವಿಟರ್ ಸಂಸ್ಥೆಗೆ ಹೊಸ ಸಿಇಒ ಪರಿಚಯಿಸಿದ ಎಲಾನ್ ಮಸ್ಕ್: ಪರಾಗ್ ಅಗರ್ ವಾಲ್ ಗಿಂತ ಇದೇ ಬೆಸ್ಟ್ ಅಂತೆ!
ಬಿಲಿಯನ್ ಡಾಲರ್ ಉದ್ಯಮಿ, ಟ್ವಿಟರ್ ಮುಖ್ಯಸ್ಥ ಎಲಾನ್ ಮಸ್ಕ್ ಸಿಇಒ ಆಗಿ ಹೊಸಬರನ್ನು ನೇಮಿಸಿಕೊಂಡಿದ್ದಾರೆ. ತಮ್ಮ ಟ್ವಿಟ್ಟರ್ ಖಾತೆಯಲ್ಲಿಯೇ ಹೊಸ ಸಿಇಒ ನನ್ನು ಜಗತ್ತಿಗೆ ಪರಿಚಯಿಸಿದ್ದಾರೆ.
Published: 15th February 2023 12:57 PM | Last Updated: 15th February 2023 12:57 PM | A+A A-

ಎಲಾನ್ ಮಸ್ಕ್
ವಾಷಿಂಗ್ಟನ್: ಬಿಲಿಯನ್ ಡಾಲರ್ ಉದ್ಯಮಿ, ಟ್ವಿಟರ್ ಮುಖ್ಯಸ್ಥ ಎಲಾನ್ ಮಸ್ಕ್ ಸಿಇಒ ಆಗಿ ಹೊಸಬರನ್ನು ನೇಮಿಸಿಕೊಂಡಿದ್ದಾರೆ. ತಮ್ಮ ಟ್ವಿಟ್ಟರ್ ಖಾತೆಯಲ್ಲಿಯೇ ಹೊಸ ಸಿಇಒ ನನ್ನು ಜಗತ್ತಿಗೆ ಪರಿಚಯಿಸಿದ್ದಾರೆ.
ಹೊಸ ಸಿಇಒ ಫೋಟೋ ಹಂಚಿಕೊಂಡಿರುವ ಎಲಾನ್ ಮಸ್ಕ್ "The new CEO of Twitter is amazing" ಎಂದು ಹೇಳಿದ್ದಾರೆ. ಆದರೆ ಟ್ವಿಟರ್‌ನ ಹೊಸ ಸಿಇಒ ಯಾವುದೇ ವ್ಯಕ್ತಿ ಅಲ್ಲ ಬದಲಾಗಿ ನಾಯಿ. ಹೌದು ಎಲೋನ್ ಮಸ್ಕ್, ತಮ್ಮ ಮುದ್ದಿನ ನಾಯಿ, ಫ್ಲೋಕಿಯನ್ನು ಟ್ವಿಟರ್ ನ ಸಿಇಒ ಎಂದು ಕರೆದಿದ್ದಾರೆ.
ಈ ನಾಯಿ ಫ್ಲೋಕಿಗೆ ಶಿಬಾ ಇನು ಎಂಬ ಇನ್ನೊಂದು ಹೆಸರು ಕೂಡಾ ಇದೆ. ನಾಯಿಯನ್ನು CEO ಎಂದು ಹೇಳಿದ ಬಳಿಕ ಎಲಾನ್ ಮಸ್ಕ್ ತಮ್ಮ ನಾಯಿಯನ್ನು ಹೊಗಳಿದ್ದಾರೆ. ಶಿಬಾ ಇನು ತಳಿಯ ಮಸ್ಕ್ ಅವರ ಫ್ಲೋಕಿ ಎನ್ನುವ ನಾಯಿಯನ್ನು ತಮ್ಮ ಸಿಇಒ ಕುರ್ಚಿ ಮೇಲೆ ಕೂರಿಸಿ, ನಾಯಿಯ ಮುಂದೆ ಹಲವು ಫೈಲ್ ಗಳನ್ನು ಇಟ್ಟು, ಈತ ಹೊಸ ಸಿಇಒ, ಯಾವುದೇ ಇತರ ವ್ಯಕ್ತಿಗಿಂತ ಈತನೇ ಬೆಸ್ಟ್ ಎಂದು ಟ್ವೀಟ್ ಮಾಡಿದ್ದಾರೆ.
The new CEO of Twitter is amazing pic.twitter.com/yBqWFUDIQH
— Elon Musk (@elonmusk) February 15, 2023
ಸದ್ಯ ಮಸ್ಕ್ ಅವರ ಟ್ವೀಟ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ಮಸ್ಕ್ ಟ್ವಿಟರ್ ಕೊಂಡ ಬಳಿಕ ಭಾರತ ಮೂಲದ ಪರಾಗ್ ಅಗರವಾಲ್ ಅವರನ್ನು ಸಿಇಒ ಸ್ಥಾನದಿಂದ ವಜಾಗೊಳಿಸಿದ್ದರು. ಇದರೊಂದಿಗೆ ಅನೇಕ ಉದ್ಯೋಗಿಗಳನ್ನೂ ಕೆಲಸದಿಂದ ವಜಾಮಾಡಲಾಗಿತ್ತು.
ಟ್ವಿಟರ್ ಅನ್ನು44 ಬಿಲಿಯನ್ ಡಾಲರ್ ಗೆ ಖರೀದಿಸಿದ ನಂತರ ಎಲಾನ್ ಮಸ್ಕ್ ಅದರ CEO ಆಗಿದ್ದರು. ತಾನು ಸಿಇಒ ಆಗುತ್ತಿದ್ದಂತೆಯೇ ಪರಾಗ್ ಅಗರ್ವಾಲ್ ಸೇರಿದಂತೆ ಅನೇಕ ಜನರನ್ನು ಸೇವೆಯಿಂದ ವಜಾ ಮಾಡಿದ್ದರು.
And has style pic.twitter.com/9rcEtu9w1Z
— Elon Musk (@elonmusk) February 15, 2023