ಸುಧಾರಿತ ನ್ಯಾವಿಗೇಷನ್ ಉಪಗ್ರಹ GSLV-F12 ಉಡಾವಣೆ ಯಶಸ್ವಿ: ಇಸ್ರೋ
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸೋಮವಾರ ಶ್ರೀಹರಿಕೋಟಾದಿಂದ ತನ್ನ ಸುಧಾರಿತ ನ್ಯಾವಿಗೇಷನ್ ಉಪಗ್ರಹ GSLV-F12 ಮತ್ತು NVS-01 ನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ.
Published: 29th May 2023 12:30 PM | Last Updated: 29th May 2023 02:32 PM | A+A A-

ಸ್ ಎಲ್ ವಿ-ಎಫ್ 12 ಉಡಾವಣೆ
ಶ್ರೀಹರಿಕೋಟಾ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸೋಮವಾರ ಶ್ರೀಹರಿಕೋಟಾದಿಂದ ತನ್ನ ಸುಧಾರಿತ ನ್ಯಾವಿಗೇಷನ್ ಉಪಗ್ರಹ GSLV-F12 ಮತ್ತು NVS-01 ನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ.
ಜಿಎಸ್ ಎಲ್ ವಿಯ ಉಪಗ್ರಹ ಉಡಾವಣಾ ವಾಹನವು ತನ್ನ 15ನೇ ಹಾರಾಟದಲ್ಲಿ 2,232 ಕೆಜಿ ತೂಕದ ನ್ಯಾವಿಗೇಷನ್ ಉಪಗ್ರಹ NVS-01ನ್ನು ಇಂದು ಬೆಳಿಗ್ಗೆ 10.42ಕ್ಕೆ ಆಂಧ್ರ ಪ್ರದೇಶದ ಶ್ರೀ ಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲಾಗಿದೆ. ರಾಕೆಟ್ ಉಡಾವಣೆಯಾದ 20 ನಿಮಿಷಗಳ ನಂತರ ಸುಮಾರು 251 ಕಿಮೀ ಎತ್ತರದಲ್ಲಿ ಜಿಯೋಸಿಂಕ್ರೋನಸ್ ವರ್ಗಾವಣೆ ಕಕ್ಷೆಯಲ್ಲಿಉಪಗ್ರಹವನ್ನು ಸೇರಿಸಿದೆ ಎಂದು ಇಸ್ರೋ ಹೇಳಿದೆ.
#WATCH | Indian Space Research Organisation's advanced navigation satellite GSLV-F12 and NVS-01 successfully completed their mission.
(Video source: ISRO) pic.twitter.com/Tqxsc8YTln— ANI (@ANI) May 29, 2023
NVS-01 ಭಾರತದ ಎರಡನೇ ತಲೆಮಾರಿನ NavIC ಉಪಗ್ರಹಗಳಲ್ಲಿ ಮೊದಲನೆಯದು, ಇದು ವರ್ಧಿತ ವೈಶಿಷ್ಟ್ಯಗಳೊಂದಿಗೆ ಇರುತ್ತದೆ. ಉಡಾವಣೆಯಾದ 20 ನಿಮಿಷಗಳ ನಂತರ ಉಪಗ್ರಹವನ್ನು ಕಕ್ಷೆಯಲ್ಲಿ ಸೇರಿಸಲಾಯಿತು ಎಂದು ಇಸ್ರೋ ಟ್ವೀಟ್ ನಲ್ಲಿ ಮಾಹಿತಿ ನೀಡಿದೆ. NVS-01 NavIC ಸರಣಿಯಲ್ಲಿ ಎರಡನೇ ತಲೆಮಾರಿನ ಉಪಗ್ರಹಗಳ ಆರಂಭಕ್ಕೆ ಇದು ಸಾಕ್ಷಿಯಾಗಿದೆ. ನ್ಯಾವಿಗೇಷನ್ ಸೇವೆಗಳನ್ನು ಸುಧಾರಿಸಲು ಮತ್ತು ವ್ಯವಸ್ಥೆಗೆ ಹೊಸ ವಿಚಾರಗಳನ್ನು ಪರಿಚಯಿಸಲು ಈ ಉಪ ಗ್ರಹ ಉಡಾವಣೆ ಮಾಡಲಾಗಿದೆ.
ಉಪಗ್ರಹ ಕಕ್ಷೆ ಸೇರುತ್ತಿದ್ದಂತೆ ವಿಜ್ಞಾನಿಗಳ ತಂಡದಲ್ಲಿ ಸಂಭ್ರಮ ಮನೆ ಮಾಡಿತು. ಪರಸ್ಪರ ಹಸ್ತಲಾಘವ ಮಾಡಿ ಶುಭ ಕೋರಿದರು. ಮಿಷನ್ ಯಶಸ್ವಿಯಾದ ಹಿನ್ನೆಲೆಯಲ್ಲಿ ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಇಡೀ ತಂಡವನ್ನು ಅಭಿನಂದಿಸಿದ್ದಾರೆ.