
ನವದೆಹಲಿ: ಮೈಸೂರಿನ ಆರ್ ಕೆ ನಾರಾಯಣ್ ಅವರ 'ಮಾಲ್ಗುಡಿ ದಿನಗಳು' ಕೇಳದವರುಂಟೆ? ಈ ಕಥೆಗಳನ್ನು ಹಿಂದಿಯಲ್ಲಿ ಧಾರಾವಾಹಿಯಾಗಿ ನಿರ್ದೇಶನ ಮಾಡಿ ದೇಶದ ಮನೆ ಮಾತನ್ನಾಗಿಸಿದ ಕೀರ್ತಿಯೂ ಕನ್ನಡಿಗನದ್ದೆ. ಅದು ಶಂಕರ್ ನಾಗ್ ಅವರ ಸೃಷ್ಟಿ.
ಮಕ್ಕಳಿಗೆ ಅತಿ ಪ್ರಿಯವಾದ ಈ "ಮಾಲ್ಗುಡಿ ಸ್ಕೂಲ್ ಡೇಸ್", ಆರ್ ಕೆ ನಾರಾಯಣ್ ಆವರ ಅತಿ ಜನಪ್ರಿಯ ಕೃತಿ "ಸ್ವಾಮಿ ಮತ್ತು ಅವನ ಸ್ನೇಹಿತರು" ಪುಸ್ತಕದ ಸಣ್ಣ ಅವತರಿಣಿಕೆಯಾಗಿದೆ. ಇದರ ಹೊಸ ಆವೃತ್ತಿ ಲಾವಣ್ಯ ನಾಯ್ಡು ಆವರ ಚಿತ್ರಗಳೊಂದಿಗೆ ಮಾರುಕಟ್ಟೆಗೆ ಬಂದಿದೆ.
"ಸ್ವಾಮಿ ಅಂಡ್ ಹಿಸ್ ಫ್ರೆಂಡ್ಸ್" ಪುಸ್ತಕವನ್ನು ಕನ್ನಡಕ್ಕೆ ಇಂದಿರಾಗಾಂಧಿ ಅವರ ಮಾಧ್ಯಮ ಕಾರ್ಯದರ್ಶಿಯಾಗಿದ್ದ ಎಚ್ ವೈ ಶಾರದಾಪ್ರಸಾದ್ ಅವರು ಕನ್ನಡಕ್ಕೆ ಭಾಷಾಂತರ ಮಾಡಿದ್ದಾರೆ. ಇದರ ಮೂಲ ಪುಸ್ತಕಕ್ಕೆ ಆರ್ ಕೆ ನಾರಾಯಣ್ ಅವರ ತಮ್ಮ ಖ್ಯಾತ ವ್ಯಂಗ್ಯಚಿತ್ರಕಾರ ಆರ್ ಕೆ ಲಕ್ಷ್ಮಣ್ ಅವರ ಚಿತ್ರಗಳಿವೆ. ಈ ಕಥೆಗಳು, ಆರ್ ಕೆ ನಾರಾಯಣ್ ಕಲ್ಪನೆಯ 'ಮಾಲ್ಗುಡಿ' ಎಂಬ ಪ್ರದೇಶದಲ್ಲಿ ನಡೆಯುವ ಕಥೆಗಳು. ಇಂದಿಗೂ ಆ ಮಾಲ್ಗುಡಿ ನಿಜವಾದ ಪ್ರದೇಶವೇ ಎಂಬ ಊಹೆ ನಡೆಯುತ್ತಲೇ ಇದೆ. ಮಾಲ್ಗುಡಿ ಎಂಬುದು ಬೆಂಗಳೂರಿನ ಹಳೆಯ ಪ್ರದೇಶಗಳಾದ ಮಲ್ಲೇಶ್ವರಂ ಮತ್ತು ಬಸವನಗುಡಿ ಕೂಡಿ ಬಂದಿರುವ ಕಾಲ್ಪನಿಕ ಪ್ರದೇಶ ಎಂಬುದು ಕೆಲವರ ಊಹೆ.
ಈ ಹೊಸ ಪುಸ್ತಕಕ್ಕೆ ಚಿತ್ರಗಳನ್ನು ಬರೆದಿರುವ ಲಾವಣ್ಯ ಕೋಲ್ಕತ್ತಾ ಮೂಲದ ಇಲ್ಲಸ್ಟ್ರೇಟರ್.
Advertisement