ಮೋದಿಯೊಳಗೊಬ್ಬ ಸಾಂತಾಕ್ಲಾಸ್!

ನಾವು ಕೇಳಿದ್ದನ್ನೆಲ್ಲ, ಕನವರಿಸಿದ್ದನ್ನೆಲ್ಲ, ಕನಸು ಕಂಡಿದ್ದನ್ನೆಲ್ಲ ಕೊಡಲು...
ನರೇಂದ್ರ ಮೋದಿ
ನರೇಂದ್ರ ಮೋದಿ

ನಾವು ಕೇಳಿದ್ದನ್ನೆಲ್ಲ, ಕನವರಿಸಿದ್ದನ್ನೆಲ್ಲ, ಕನಸು ಕಂಡಿದ್ದನ್ನೆಲ್ಲ ಕೊಡಲು ನಮಗೊಬ್ಬ ಬೇಕಿದ್ದ. ಅದು ಸಾಂತಾಕ್ಲಾಸ್ನಂತೆಯೇ. ಸದ್ಯದ ಭಾರತಕ್ಕೆ ನರೇಂದ್ರ ಮೋದಿಯವರೇ ನಮ್ಮೆಲ್ಲರ ಕನಸುಗಳಿಗೆ ಬಣ್ಣ ಹಚ್ಚುವವರು. ರೆಕ್ಕೆ ಕಟ್ಟುವವರು. ಏನಲ್ಲಾ ಒಂದು ದಿನಂಪ್ರತಿ ಗಿಫ್ಟ್ ಕೊಡುತ್ತಾ ಸಾಂತಾಕ್ಲಾಸ್ ನಂತೆಯೇ ನಗು ಬೀರುವ ಮೋದಿ ಅವರಿಗೆ ಮೋದಿಯವರೇ ಸಾಟಿ. ಕ್ರಿಸ್ಮಸ್ ಅಜ್ಜ ಸಾಂತಾಕ್ಲಾಸ್ ನಿನ್ನೆ ಮೊನ್ನೆ ಬಂದುಹೋದರೆ ಇವರು ಸಾರ್ವಕಾಲಿಕವಾಗಿ ನಮ್ಮೊಟ್ಟಿಗಿರುತ್ತಾರೆ. ಆ ಲೆಕ್ಕದಲ್ಲಿ ನಮಗೆ ನಿತ್ಯವೂ ಕ್ರಿಸ್ಮಸ್ಸೇ. ಮೋದಿಯವರು ಸಾಂತಾಕ್ಲಾಸ್ ಥರ ಯಾಕೆ ನಮಗೆ ಕಾಣುತ್ತಾರೆನ್ನುವುದಕ್ಕೆ ಇಲ್ಲಿ 5 ಕಾರಣಗಳುಂಟು.

1. ಚಿತ್ರದಲ್ಲಿ ಕೆಂಪು ಪೇಟ ತೊಟ್ಟ ಮೋದೀಜಿಯನ್ನು ನೋಡಿ. ಸಾಂತಾ ತಾತಾನಷ್ಟು ಉದ್ದವಲ್ಲದಿದ್ದರೂ, ಬಿಳಿ ಗಡ್ಡ, ಪೇಟದ ಹೊರಗೆ ಕಾಣುವ ಬಿಳಿ ಕೂದಲಿನಿಂದಾಗಿ ಸಾಂತಾನಂತೆಯೇ ಕಾಣುತ್ತಿಲ್ಲವೇ?

2. ನೀವೀ ಚಿತ್ರವನ್ನು ನೋಡಿ. ಏನೇ ಬೇಡಿಕೆ ಇಟ್ಟರೂ ತಳ್ಳಿ ಹಾಕುವ ಲಕ್ಷಣ ಈ ಮುಖದಲ್ಲಿ ಕಾಣಿಸುತ್ತಿಲ್ಲ. ಇನ್ನೇನು ಬೇಕು ಕೇಳಪ್ಪಾ ಎಂಬ ಪ್ರಶ್ನೆಯನ್ನು ನಮಗೇ ರವಾನಿಸುವಂತಿದೆ ಈ ಮುಖದೃಷ್ಟಿ. ಸಾಂತಾಕ್ಲಾಸ್ನದ್ದು ಇಂಥದ್ದೇ ನೋಟ ಅಲ್ಲವೇ? ಕೇಳಿದಕ್ಕೆ ಇವರೆಂದೂ ನೋ ಅನ್ನಲ್ಲ. ಸಾಂತಾಕ್ಲಾಸ್ನಂತೆಯೇ. ಒಳ್ಳೆಯ ಕೇಳುಗ, ಒಳ್ಳೆಯದನ್ನೇ ಕೊಡುತ್ತಾನೆ ಇದು ಕ್ರಿಸ್ಮಸ್ ನೀಡುವ ಪ್ರಮುಖ ಸಂದೇಶಗಳಲ್ಲೊಂದು. ಇದು ಕೂಡ ಮೋದಿಗೆ ಮ್ಯಾಚ್ ಆಗುತ್ತದೆ.

3. ಸಾಂತಾಕ್ಲಾಸ್ಗೆ ಡಿ. 25 ಹೇಗೆ ಪವಿತ್ರ ದಿನವೋ, ಮೋದಿ ಅವರಿಗೂ ಅವತ್ತು ಸ್ಮರಣೀಯ ದಿನ. ಸಾಂತಾಕ್ಲಾಸ್ಗೆ ಕ್ರಿಸ್ತ ಹುಟ್ಟಿದ ಖುಷಿ. ಮೋದಿಗೆ ವಾಜಪೇಯಿ ಹುಟ್ಟಿದ್ದ ಖುಷಿ. ಅದಕ್ಕಾಗಿ ಒಳ್ಳೆಯ ಆಡಳಿತ ದಿನ ಎಂದು ಘೋಷಿಸುವ ಮೂಲಕ ಕ್ರಿಸ್ಮಸ್ಗೂ, ವಾಜಪೇಯಿ ಜನ್ಮದಿನ್ಮಕ್ಕೂ ಮೆರುಗು ತಂದರು ಮೋದಿ.

4. ಸಾಂತಾ ಉಡುಗೊರೆಗಳಿಗೆ ಕಮ್ಮಿ ಮಾಡಲ್ಲ. ಹಾಗೆಯೇ ಮೋದಿ ಕೂಡ. ಹೋದಲ್ಲೆಲ್ಲ ಗಿಫ್ಟೇ. ನೇಪಾಳಕ್ಕೆ ಹೋದ್ರೆ ಆ ದೇಶಕ್ಕೆ ಹೆಲಿಕಾಪ್ಟರ್, ಜಪಾನ್ಗೆ, ಅಮೆರಿಕಕ್ಕೆ ಹೋದ್ರೆ ಅಲ್ಲಿನ ಅಧ್ಯಕ್ಷರಿಗೆ ಭಗವದ್ಗೀತೆ, ಭೂತಾನ್ಗೆ ಹೋದ್ರೆ ಅಲ್ಲಿನವರಿಗೆ ನೆರವಿನ ಪ್ಯಾಕೇನ...ಹೀಗೆ. ಇನ್ನು ನಮಗೆ-ನಿಮಗೆಲ್ಲ ಅಚ್ಛೇ ದಿನದ ಯೋಜನೆಗಳೇ ಗಿಫ್ಟುಗಳು.

5. ಕ್ರಿಸ್ ಮಸ್ ತಾತಾಗೆ ಮಕ್ಕಳೆಂದರೆ ಎಲ್ಲಿಲ್ಲದ ಇಷ್ಟ. ಮೋದಿ ಅವರಿಗೂ ಅಷ್ಟೇ. ಶಿಕ್ಷಕರ ದಿನವನ್ನು ಮಕ್ಕಳೊಂದಿಗೆ ಪ್ರೀತಿ ಮಾತುಗಳನ್ನಾಡುತ್ತಾ ಕಳೆದು ಮಕ್ಕಳ ದಿನವನ್ನಾಗಿಸಿದವರು ಅವರು. ಟೋಕಿಯೋ ಭೇಟಿಯಲ್ಲೂ ಮಕ್ಕಳಿಗಾಗಿ ಕೊಳಲು ನುಡಿಸಿದವರು ಅವರು. ಈಗ ಹೇಳಿ, ಮೋದಿ ಕೂಡ ಸಾಂತಾಕ್ಲಾಸ್ನಂತೆ ಅಲ್ಲವೇ?

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com