ವಿಮಾನಗಳ ಕಣ್ಮರೆ ಹಿಂದೆ...

162 ಮಂದಿಯನ್ನು ಹೊತ್ತು ಇಂಡೋನೇಷ್ಯಾದಿಂದ ಸಿಂಗಾಪುರ...
ನಾಪತ್ತೆಯಾಗಿರುವ  ಏರ್ ಏಷ್ಯಾ ವಿಮಾನ
ನಾಪತ್ತೆಯಾಗಿರುವ ಏರ್ ಏಷ್ಯಾ ವಿಮಾನ

162 ಮಂದಿಯನ್ನು ಹೊತ್ತು ಇಂಡೋನೇಷ್ಯಾದಿಂದ ಸಿಂಗಾಪುರಕ್ಕೆ ಹೊರಟಿದ್ದ ಏರ್ ಏಷ್ಯಾ ವಿಮಾನ ಭಾನುವಾರ ನಾಪತ್ತೆಯಾಗಿರುವುದು, 10 ತಿಂಗಳ ಹಿಂದೆ ಕಣ್ಮರೆಯಾದ ಮಲೇಷ್ಯಾದ ಎಂಎಚ್ 370 ವಿಮಾನದ ಕಹಿನೆನಪನ್ನು ಮರುಕಳಿಸುವಂತೆ ಮಾಡಿದೆ. ಎರಡೂ ವಿಮಾನಗಳು ಇದ್ದಕ್ಕಿದ್ದಂತೆ ನಿಯಂತ್ರಣಾ ಕೊಠಡಿಯ ಸಂಪರ್ಕ ಕಳೆದುಕೊಂಡು ಅಚ್ಚರಿ ರೀತಿ ಮಾಯವಾಗಿವೆ. ಘಟನೆಯಲ್ಲಿ ಸಾಮ್ಯತೆ ಇದ್ದರೂ ಎರಡೂ ವಿಮಾನಗಳ ಕಣ್ಮರೆಯಲ್ಲಿ ಕೆಲವೊಂದು ವಿಚಾರಗಳು ಭಿನ್ನವಾಗಿವೆ. ಆ ಬಗ್ಗೆ ಮಾಹಿತಿ ಇಲ್ಲಿದೆ.

ವಿಮಾನದ ಬಗ್ಗೆ

  • ಏರ್‌ಏಷ್ಯಾವು ಕ್ಷಿಪ್ರ ಬೆಳವಣಿಗೆ ಹೊಂದುತ್ತಿದ್ದ, ಅಗ್ಗದ ದರದ ಉತ್ತಮ ವಿಮಾನವಾಗಿತ್ತು. ಇದು ಆಗ್ನೇಯ ಏಷ್ಯದಾದ್ಯಂತ ಸೇವೆ ನೀಡುತ್ತಿತ್ತು. ಈ ಕಂಪನಿಯ ಎಲ್ಲ 80 ವಿಮಾನಗಳೂ 5 ವರ್ಷದ ಕೆಳಗಷ್ಟೇ ತಯಾರಾದವು.
  • ಇದು ಸಿಂಗಲ್ ಏಸಲ್ ಏರ್‌ಬಸ್ ಎ320-200 ಆಗಿದ್ದು 2008ರಲ್ಲಿ ನಿರ್ಮಾಣವಾದದ್ದು. ಏರ್‌ಬಸ್ ಎ320 ಸರಣಿ ಜೆಟ್‌ಗಳ ಆಪರೇಟರ್‌ಗಳಲ್ಲಿ ಏರ್ ಏಷ್ಯಾವೂ ಒಂದು.
  • ಏರ್ ಏಷ್ಯಾದ ಸುರಕ್ಷಣಾ ದಾಖಲೆಗಳಲ್ಲಿ ಒಂದೇ ಒಂದು ತೊಡಕಾಗಿಲ್ಲ.
ಹವಾಮಾನ
  • ವಿಮಾನ ಹಾರಾಡುವ ವೇಳೆ ಮೋಡ ಕವಿದಿತ್ತು. ಜತೆಗೆ, ಭಾರಿ ಮಿಂಚುಗಳು ಬಡಿಯುತ್ತಿದ್ದವು. ಹವಾಮಾನವು ಪ್ರತಿಕೂಲವಾತಿತ್ತು.
  • ಏರ್‌ಏಷ್ಯಾ ಪೈಲಟ್‌ನಿಂದಾಗಲೀ, ಸಿಬ್ಬಂದಿಯಿಂದಾಗಲೀ ಅಪಾಯದ ಸೂಚನೆ ಬಂದಿರಲಿಲ್ಲ. ಆದರೆ, ಜಕಾರ್ತಾದ ಏರ್ ಟ್ರಾಫಿಕ್ ಕಂಟ್ರೋಲರ್ ಜತೆ ಸಂಪರ್ಕ ಸಾಧಿಸಿದ್ದ ಪೈಲಟ್, ಪ್ರತಿಕೂಲ ಹವಾಮಾನದ ಬಗ್ಗೆ ವಿವರಿಸಿದ್ದು, ತಮ್ಮ ವಿಮಾನದ ಎತ್ತರವನ್ನು 32 ಸಾವಿರದಿಂದ 38 ಸಾವಿರ ಅಡಿಗೆ ಎತ್ತರಿಸಲು ಅವಕಾಶ ನೀಡುವಂತೆ ಕೋರಿದ್ದರು. ಹಾಗಾಗಿ ವಿಮಾನ ಕಣ್ಮರೆಯಾಗಲು ಪ್ರತಿಕೂಲ ಹವಾಮಾನವೇ ಕಾರಣ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ವಿಮಾನದ ಬಗ್ಗೆ
  • ಈ ವಿಮಾನವು ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದ್ದ ಸರ್ಕಾರಿ ಸ್ವಾಮ್ಯದ ವಿಮಾನವಾಗಿತ್ತು.
  • ಎಂಎಚ್370 ವಿಮಾನವು ಬೋಯಿಂಗ್ 777-200 ಆಗಿದ್ದು, 2002ರಲ್ಲಿ ನಿರ್ಮಾಣವಾದದ್ದು.
ಹವಾಮಾನ
  • ಎಂಎಚ್ 370 ವಿಮಾನ ಕಣ್ಮರೆಯಾದಾಗ ಆಗಸವು ತಿಳಿಯಾಗಿತ್ತು. ಆ ಸಮಯದಲ್ಲಿ ಯಾವುದೇ ಪ್ರತಿಕೂಲ ಹವಾಮಾನ ಇರಲಿಲ್ಲ.
  • ವಿಮಾನದ ಪೈಲಟ್‌ನಿಂದಾಗಲೀ, ಸಿಬ್ಬಂದಿಯಿಂದಾಗಲೀ ಯಾವುದೇ ಅಪಾಯದ ಸೂಚನೆ ಬಂದಿರಲಿಲ್ಲ. ಜತೆಗೆ, ವಿಮಾನವು ವಿಯೆಟ್ನಾಂ ವಾಯುಗಡಿಯತ್ತ ಚಲಿಸುತ್ತಿದ್ದಂತೆ ನಿಯಂತ್ರಮಾ ಕೊಠಡಿಗೆ ಪೈಲಟ್, 'ಶುಭ ರಾತ್ರಿ' ಎಂಬ ಸಂದೇಶ ಕಳುಹಿಸಿದ್ದರು. ಹಾಗಾಗಿ ವಿಮಾನ ಯಾವುದೇ ಅಪಾಯಕ್ಕೆ ಸಿಲುಕ್ಕಿದ್ದ ಸುಳಿವೇ ಸಿಗಲಿಲ್ಲ.
ಸಂವಹನ
ಪೈಲಟ್‌ಗಳು
ಸಂವಹನ
ಪೈಲಟ್‌ಗಳು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com