15 ಪುಸ್ತಕ

ವರ್ಷಕ್ಕೆ ಸಾವಿರಾರು ಪುಸ್ತಕಗಳು ಬಿಡುಗಡೆಯಾಗುತ್ತವೆ. ಒಂದಕ್ಕಿಂತ ಒಂದು ಅದ್ಭುತ ಅನಿಸುವಂತೆಯೂ ಇರುತ್ತವೆ...
ಪುಸ್ತಕಗಳು
ಪುಸ್ತಕಗಳು

ವರ್ಷಕ್ಕೆ ಸಾವಿರಾರು ಪುಸ್ತಕಗಳು ಬಿಡುಗಡೆಯಾಗುತ್ತವೆ. ಒಂದಕ್ಕಿಂತ ಒಂದು ಅದ್ಭುತ ಅನಿಸುವಂತೆಯೂ ಇರುತ್ತವೆ.  ಪಟ್ಟಿ ಮಾಡುತ್ತಾ ಹೋದರೆ ಕನ್ನಡದಲ್ಲೇ ಅಂಥ ಪುಸ್ತಕಗಳ ಲಿಸ್ಟಿನದ್ದೇ ಒಂದು ಪುಸ್ತಕವಾಗುತ್ತದೆ. ಇಲ್ಲಿ ಹೆಸರಿಸದ ಸಹಸ್ರಾರು ಕಾದಂಬರಿ, ಕಥೆ, ವ್ಯಕ್ತಿ ವಿಕಸನ, ಇತ್ಯಾದಿ ಇತ್ಯಾದಿ ಅದ್ಭುತ ಪುಸ್ತಕಗಳಿವೆ ಎಂಬುದು ನಿಜ. ಆದರೂ ಈ ವರ್ಷದಲ್ಲಿ ನೀವು ಇಲ್ಲಿ ಹೆಸರಿಸಿರುವ ಹದಿನೈದು ಪುಸ್ತಕ ಓದಿ ಮುಗಿಸಿದರೆ, ಕಾಲ ಕಾಲಕ್ಕೆ ನೀವು ಓದಿಮುಗಿಸಿರುವ  ಪುಸ್ತಕಗಳು ಈ ಪಟ್ಟಿಯಲ್ಲಿದ್ದರೆ, ನೀವು ಈ ಪಟ್ಟಿಯನ್ನು ಸಮರ್ಥಿಸುವುದಂತೂ ಖಂಡಿತ.


ಮಾಲ್ಗು ಡಿ ಡೇಸ್ ಮತ್ತು ದ ಗೈಡ್
ಆರ್. ಕೆ ನಾರಾಯಣ್


ಕಣ್ಣಿಗೆ ಕಟ್ಟಿದಂತೆ ಚಿತ್ರಿಸುವುದರಲ್ಲಿ ಆರ್ ಕೆ ನಾರಾಯಣ್‌ರನ್ನು ಮೀರಿಸುವವರಿಲ್ಲ. ಭಾರತದ ಅತ್ಯಂತ ಸರಳ ಮತ್ತು ವಿಶಿಷ್ಟ ಶೈಲಿಯ ಆಂಗ್ಲ ಬರಹಗಾರರಲ್ಲಿ ಇವರು ಅಗ್ರ ಗಣ್ಯರು. ಈ ಎರಡು  ಪುಸ್ತಕಗಳು ನಿಮ್ಮನ್ನು ಹೊಸಲೋಕಕ್ಕೆ ಕರೆದೊಯ್ಯುವುದು ನಿಶ್ಚಿತ.

ಪರ್ವ, ಗೃಹ ಭಂಗ
ಎಸ್. ಎಲ್ ಭೈರಪ್ಪ


ಕನ್ನಡದ ಸಾರ್ವಕಾಲಿಕ ಜನಪ್ರಿಯ ಕಾದಂಬರಿಕಾರ ಎಸ್.ಎಲ್ ಭೈರಪ್ಪ. ತಮ್ಮ ಆಳ ಅಧ್ಯಯನವನ್ನು ಕಾದಂಬರಿಗೆ ಅಳವಡಿಸುವುದು. ಅದನ್ನು ರುಚಿಕಟ್ಟಾಗಿಸುವುದು ಇವರ ವೈಶಿಷ್ಟ್ಯ. ಪರ್ವದಂಥ ಕಾದಂಬರಿಗಳಲ್ಲಿ ಮಹಾಭಾರತದ ಪಾತ್ರಗಳನ್ನು ಬೇರೆಯದೇ ದೃಷ್ಟಿಕೋನದಲ್ಲಿ ನೋಡುವ ಭೈರಪ್ಪ, ತಮ್ಮ ಪ್ರತಿ ಕಾದಂಬರಿಯಲ್ಲೂ ಓದುಗರನ್ನು ಚರ್ಚೆಗೆ ಮತ್ತು ಆಲೋಚನೆಗೆ ಒಡ್ಡಿಕೊಳ್ಳುವಂತೆ ಮಾಡುವಲ್ಲಿ ಯಶಸ್ವಿಯಾಗುತ್ತಾರೆ.

 ದಿ ಗಾಡ್ ಆಫ್ ಸ್ಮಾಲ್ ಥಿಂಗ್
ಆರುಂಧತಿ ರಾಯ್



1997ರ ಬೂಕರ್ ಪ್ರಶಸ್ತಿ ವಿಜೇತ ಕಾದಂಬರಿ. ಇವತ್ತಿಗೂ ಅತ್ಯಂತ ಬೇಡಿಕೆಯಲ್ಲಿರುವ ಈ ಕಾದಂಬರಿಯಲ್ಲಿ ಜಾತಿ ವ್ಯವಸ್ಥೆ, ಧಾರ್ಮಿಕ ವಿಷಯಗಳು, ಪ್ರೀತಿ ಸ್ನೇಹ, ಸಾಮಾಜಿಕ ಸಂಘರ್ಷಗಳು ಎಲ್ಲವನ್ನೂ ಎಳೆ ಎಳೆಯಾಗಿ ಬಿಡಿಸಿಡಲಾಗಿದೆ. ಎರಡು ಮಕ್ಕಳ ಪಾತ್ರದ ಮೂಲಕ ಇಡೀ ಕತೆಯನ್ನು ಬಿಚ್ಚಿಡುತ್ತಾ ಹೋಗಿರುವುದು ಕಾದಂಬರಿಯ ವೈಶಿಷ್ಟ್ಯ.

ದಿ ವೈಟ್ ಟೈಗರ್
ಅರವಿಂದ್ ಅಡಿಗ


ಚೊಚ್ಚಲ ಕಾದಂಬರಿಗೇ ಬೂಕರ್ ಪ್ರಶಸ್ತಿ ಸಿಕ್ಕ ಹೆಮ್ಮೆ ಅರವಿಂದ್  ಅಡಿಗ ಅವರದ್ದು. ಏಳಿಗೆಗಾಗಿ ಸ್ವಾರ್ಥಿಯಾಗುವ ಮನುಷ್ಯನ ಗುಣದ ಬಗ್ಗೆ ವಿವರಿಸುತ್ತಾ ಹೋಗವು ಕಾದಂಬರಿ ನಿಮ್ಮನ್ನೇ  ಪಾತ್ರಧಾರಿಯನ್ನಾಗಿಸುತ್ತಾ ಆತ್ಮ ವಿಮರ್ಶೆಗೆ  ತೊಡಗುವಂತೆ ಮಾಡುತ್ತದೆ.

ಸೇಕ್ರೆಡ್ ಗೇಮ್ಸ್
ವಿಕ್ರಮ್ ಚಂದ್ರ

ಕಳ್ಳ ಪೊಲೀಸ್ ಕಥೆಯೊಂದು ಇಷ್ಟೊಂದು ರೋಚಕವಾಗಿ ವಿವರಿಸಲು ಸಾಧ್ಯವಾ ಎಂಬ ಪ್ರಶ್ನೆಗೆ ಉತ್ತರವಾಗಿ ಸೇಕ್ರೆಡ್ ಗೇಮ್ಸ್ ಪುಸ್ತಕ ನೀವು ಓದಬೇಕಿದೆ.  ಭೂಗತ ಜೀವಿಯ ಕಥೆಯೊಂದಿಗೆ ಹತ್ತೊಂಬತ್ತನೇ ಶತಮಾನದ ಸಾಮಾಜಿಕ ಪರಿಸ್ಥಿತಿ ಹಾಗೂ ಕಾನೂನು ಸುವ್ಯವಸ್ಥೆಯನ್ನು  ಚಿತ್ರಿಸುತ್ತಾ ಹೋಗುವ ಅನನ್ಯ ಶೈಲಿಯ ಈ ಕಾದಂಬರಿ ಕೇವಲ ರೋಚಕತೆಯಿಂದಷ್ಟೇ ಜನಪ್ರಿಯವಾದುದಲ್ಲ . ಕಥಾವಸ್ತುವಿನಲ್ಲಿರುವ ಚಿಂತನಾರ್ಹ ವಿಷಯಗಳಿಂದಲೂ ಪುಸ್ತಕಕ್ಕೆ ಘನತೆ ದೊರೆತಿದೆ.

ಟ್ರೈನ್ ಟು ಪಾಕಿಸ್ತಾನ್
ಖುಷ್ವಂತ್ ಸಿಂಗ್


ಖುಷವಂತ್ ಸಿಂಗ್ ಅವರ ವಿಡಂಬನಾತ್ಮಕ ಶೈಲಿಯ ಬರವಣಿಗೆ ಈ ಪುಸ್ತಕದ ಹೈಲೈಟು. ರಾಜಕೀಯ ವ್ಯವಸ್ಥೆಗಳನ್ನು ಗೇಲಿ ಮಾಡುತ್ತಲೇ 1947ರ ಸ್ವಾತಂತ್ರ್ಯಾ ನಂತರ ನಡೆದ ಭಾರತ ಪಾಕಿಸ್ತಾನ ವಿಭಜನೆಯ ಎಫೆಕ್ಟುಗಳನ್ನು ವಿವರಿಸುತ್ತಾ ಹೋಗುವ ಪುಸ್ತಕ ಭಾರತದ ಸಾಹಿತ್ಯ ಲೋಕದಲ್ಲಿ ಸಾರ್ವಕಾಲಿಕ ಜನಪ್ರಿಯ ಪುಸ್ತಕ


ಎಲೆಕ್ಷನ್ ಡಟ್ ಚೇಂಜ್ಡ್ ಇಂಡಿಯಾ
ರಾಜ್ ದೀಪ್ ಸರ್ದೇಸಾಯಿ
ಪ್ರಧಾನಿ ನರೇಂದ್ರ ಮೋದಿಯನ್ನು ವಿರೋಧ ಪಕ್ಷದ ಮುಖಂಡರಿಗಿಂತ ಹೆಚ್ಚಾಗಿ ವಿರೋಧಿಸುತ್ತಾ, ಕಾಲೆಳೆಯುತ್ತ ಬಂದಿದ್ದ ಪತ್ರಕರ್ತ ರಾಜ್ ದೀಪ್ ಸರ್ದೇಸಾಯಿಯ ಅಭಿಪ್ರಾಯಗಳನ್ನೇ ಬದಲಿಸುವಂತೆ ಮಾಡಿದ್ದು. 2014ರ ಚುನಾವಣೆಯ ನಂತರ ಭಾರತದಲ್ಲಾದ ಬದಲಾವಣೆಗಳು. ಅದನ್ನು ಸೂಕ್ಷ್ಮವಾಗಿ ಗಮನಿಸಿ, ಮೋದಿ ವಿರೋಧಿಯಾಗಿಯೂ ಅವರನ್ನು ಮೆಚ್ಚುವ ಅನಿವಾರ್ಯತೆಗೆ ಒಳಗಾಗಿಸಿದ ಸಂದರ್ಭಗಳನ್ನು ಈ ಪುಸ್ತಕದಲ್ಲಿ ರಾಜ್ ದೀಪ್ ವರ್ಣಿಸಿದ್ದಾರೆ.

ಆನ್ ಒಬಿಡಿಯಂಟ್ ಫಾದರ್
ಅಖಿಲ್ ಶರ್ಮ

ಅಮೆರಿಕಾದಲ್ಲಿರುವ ಅನಿವಾಸಿ ಭಾರತೀಯ ಅಖಿಲ್ ಶರ್ಮ ಬರೆದ ಈ ಕಾದಂಬರಿಯಲ್ಲಿ ಭ್ರಷ್ಟ ತಂದೆ ಮತ್ತು ಆತನ ಮಗಳ ಬದುಕನ್ನು ಸಮಾನಾಂತರವಾಗಿ ಚಿತ್ರಿಸುತ್ತಾ ಹೋಗುತ್ತದೆ. ಚಿಕ್ಕ ವಯಸ್ಸಿನವ್ವೇ ಲೈಂಗಿಕ ದೌರ್ಜನ್ಯಕ್ಕೊಳಗಾಗಿ  ಮಗುವನ್ನು ಹಡೆದು ಸಾಕುವ ಪರಿಸ್ಥಿತಿಗೆ ಈಡಾಗುವ ಮಗಳು ಅವಳ ಬದುಕನ್ನು ನೋಡುತ್ತ ತನ್ನನ್ನು ವಿಮರ್ಶೆಗೆ ಒಳಪಡಿಸಿಕೊಳ್ಳುವ  ಅಪ್ಪನ ಪಾತ್ರಗಳು ಓದುಗನನ್ನು ಗಾಢ ಚಿಂತನೆಗೆ ಹಚ್ಚುವಲ್ಲಿ ಯಶಸ್ವಿಯಾಗುತ್ತವೆ,

ಎ ಸೂಟೆಬಲ್ ಬಾಯ್
ವಿಕ್ರಮ್ ಸೇಠ್


ತನ್ನ ಮಗಳಿಗೊಂದು ಸೂಕ್ತ ಗಂಡು ಹುಡುಕುವ ತಾಯಿಯ ಕಣ್ಣಿನಲ್ಲಿ ಇಡೀ ಸಮಾಜವನ್ನು ಅನಾವರಣಗೊಳಿಸುವ  ಬೃಹತ್ ಪುಸ್ತಕ. ಒಂದೂವರೆ ಸಾವಿರ ಪುಟಗಳಷ್ಟು  ದೊಡ್ಡ ಕಾದಂಬರಿಯಾದರೂ ಎಲ್ಲೆಲ್ಲೂ ಬೋರು ಹೊಡೆಸದೇ ಓದಿಸಿಕೊಳ್ಳುವ ಈ ಕಾದಂಬರಿ ಐವತ್ತರ ದಶಕದ ಭಾರತವನ್ನು ಕಣ್ಮುಂದೆ ತಂದು ನಿಲ್ಲಿಸುತ್ತದೆ.

ಶ್ಯಾಡೋ ಲೈನ್ಸ್
ಅಮಿತವ್ ಘೋಷ್

ಪದ್ಮಶ್ರೀ ಗೌರವ ಪಡೆದ ಕಾದಂಬರಿಕಾರ ಅಮಿತವ್ ಘೋಷ್‌ರ ಶ್ಯಾಡೋ ಲೈನ್ಸ್‌ಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಕೂಡಾ ಬಂದಿತ್ತು. ಸ್ವಾತಂತ್ರ್ಯ ಭಾರತದ ಅರವತ್ತರ ದಶಕದ ರಾಜಕೀಯ ವ್ಯವಸ್ಥೆಗಳು, ಅಂದಿನ ಗಡಿ ವಿಷಯಗಳು, ಸ್ವದೇಶಿ ಆಂದೋಲನ ಮುಂತಾದವುಗಳನ್ನು ಕಥೆಯಂತೆ ಆಸಕ್ತಿಕರವಾಗಿ ಹೇಳುವ ಪುಸ್ತಕ

ದಿ ಇಮ್ಮಾರ್ಟಲ್ಸ್
ಅಮಿತ್ ಚೌಧರಿ


ಸಂಗೀತವನ್ನೇ ಮುಖ್ಯವಾಗಿಟ್ಟುಕೊಂಡು ಪಾತ್ರವರ್ಗವನ್ನು ರೂಪಿಸುತ್ತಾ ಹೋಗಿರುವ ಕಾದಂಬರಿ, ,ಂಗೀತದ ಜತೆಗೆ ಫಿಲಾಸಫಿಗಳನ್ನೂ ಹೇಳುತ್ತಾ ಸಾಗುತ್ತದೆ. ಮ್ಯೂಸಿಕಲ್ ಅನಿಸುವಂಥ ಈ ಕಾದಂಬರಿಯ ರೀತಿ ಈವರೆಗೆ ಭಾರತೀಯ ಸಾಹಿತ್ಯದಲ್ಲಿ ಬಂದಿಲ್ಲವೆಂಬ ವಾದವಿದೆ. ಓದುವವರಿಗೆ ಅದು ಸಂಗೀತದ ಫೀಲ್ ಕೊಡುವಲ್ಲಿ ಯಶಸ್ವಿಯಾಗುತ್ತದೆ. ಸಂಗೀತ ಪ್ರಿಯರಲ್ಲದವರಿಗೂ!

ಯಯಾತಿ
ವಿಎಸ್ ಖಾಂಡೇಕರ್

ಪುರಾಣದ ಒಂದು ಉಪಕಥೆಯೊಂದಿಗೆ ಬೆಳೆಯುತ್ತಾ ಹೋಗುವುದು ಯಯಾತಿ ಕಾದಂಬರಿ ವೈಶಿಷ್ಟ್ಯ. ಇಲ್ಲಿ ಮಹಾರಾಜ ಯಯಾತಿ, ಅಪೂರ್ವ ಲಾವಣ್ಯವತಿ ದೇವಯಾನಿ, ಶ್ರೇಷ್ಠ  ವ್ಯಕ್ತಿತ್ವದ ಶರ್ಮಿಷ್ಟೆ ಹಾಗೂ ಆಪತ್ಕಾಲದಲ್ಲಿ ನೆಂಟನಂತೆ ಬರುವು ಕಚದೇವ ಎಂಬ ಅಪೂರ್ವ ಪಾತ್ರ ಪ್ರಪಂಚವಿದೆ. ಗಮನಿಸಿ. ಯಯಾಕಿ ಜ್ಞಾನಪೀಠ ಪ್ರಶಸ್ತಿ ವಿಜೇತ ಕಾದಂಬರಿ.

ಉದಾರ ಚರಿತರು ಉದಾತ್ತ ಪ್ರಸಂಗಗಳು
ಟಿವಿ ವೆಂಕಟಾಚಲ ಶಾಸ್ತ್ರಿ


ತಮ್ಮ ಜನಪರ ಕಾಳಜಿ ಹಾಗಾ ವರ್ತನೆಗಳಿಂದ ಜನಮನಗೆದ್ದ ಮಹಾಮುಭಾವರ ವ್ಯಕ್ತಿತ್ವದ ಆಪ್ತ ಅನಾವರಣ ಈ ಪುಸ್ತಕದಲ್ಲಿದೆ.

ಮೂಕಜ್ಜಿಯ ಕನಸುಗಳು
ಡಾ.ಶಿವರಾಮ ಕಾರಂತ

ಬಾಲ್ಯ ವಿವಾಹವಾದಾಕೆ ಹತ್ತನೇ ವಯಸ್ಸಿನಲ್ಲೇ ವಿಧವೆಯಾಗಿ ಬದುಕನ್ನು ನೋಡುವ ರೀತಿ, ಆಕೆಯ ಕನಸುಗಳು, ಮೊಮ್ಮಗನ ಜೊತೆಗೆ ಸಾಗುವ ಬದುಕು ಇವೆಲ್ಲವನ್ನೂ ಹೆಣೆದು ಜೊತೆಗೆ ಹಲವು ಪಾತ್ರಗಳನ್ನು ಸೇರಿಸಿ ಸಂಬಂಧಗಳ ಸಂಕೀರ್ಣತೆಗಳನ್ನು ವಿವರಿಸಿರುವ ಅರವತ್ತರ ದಶಕದ ಅದ್ಬುತ ಕಾದಂಬರಿ. ಕಾರಂತರ ಈ ಪುಸ್ತಕ ಐದು ಭಾಷೆಗಳಿಗೆ ಅನುವಾದವೂ ಆಗಿದೆ. ಜ್ಞಾನಪೀಠ ವಿಜೇತ ಕಾದಂಬರಿ ಎಂಬುದು ಗೊತ್ತಿಲ್ಲದ ವಿಷಯವಲ್ಲ ಅಲ್ಲವೆ?

ದುರ್ಗಾಸ್ತಮಾನ
ತರಾಸು

ಚಿತ್ರದುರ್ಗದ ಕೊನೆಯ ದೊರೆ ರಾಜಾಮದಕರಿ ನಾಯಕನ ಪೌರುಷದ ವಿವರಣೆಯೊಂದಿಗೆ ದುರ್ಗದಲ್ಲಿ ನಾಯಕರ ಆಡಳಿತ ಕೊನೆಯಾದ ಸಂದರ್ಭದ ವಿವರಣೆ ಈ ಪುಸ್ತಕದ ಹೂರಣ. ಚರಿತ್ರೆಯನ್ನು ರಸವತ್ತಾಗಿ ಭಾವಪೂರ್ಣವಾಗಿ ವಿವರಿಸುವ ಶೈಲಿ ಅರ್ಥವಾಗಬೇಕೆಂದರೆ ನೀವು ಈ ಕಾದಂಬರಿಯನ್ನು ಓದಬೇಕು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com