
ಸ್ವತಂತ್ರ ಭಾರತದ ಮೊದಲ ಪ್ರಧಾನ ಮಂತ್ರಿ ಪಂಡಿತ್ ಜವಾಹರ್ ಲಾಲ್ ನೆಹರೂ ಅವರ ೧೨೫ ನೆ ಜನ್ಮ ದಿನ ಇಂದು. ಮಕ್ಕಳಿಗೆ ಪ್ರೀತಿಪಾತ್ರರಾಗಿದ್ದ 'ಚಾಚಾ' ಅವರ ಜಯಂತಿಯನ್ನು, ಮಕ್ಕಳ ದಿನಾಚರಣೆ ಎಂತಲೇ ಆಚರಿಸಲಾಗುತ್ತದೆ.
ಪಂಡಿತ್ ನೆಹರೂ ಅವರು "ಮೂಲ ಮಾರ್ಗ" ಎನ್ನುವ ಈ ಕಡತವನ್ನು, ಸಲಹೆಗಳಿಗೋಸ್ಕರ ತನ್ನ ಗೆಳೆಯರು ಮತ್ತು ಬೆಂಬಲಿಗರ ಮಧ್ಯೆ ಖಾಸಗಿ ಪ್ರಸಾರಕ್ಕಾಗಿ ಬರೆದದ್ದು. ನಂತರ ಅಖಿಲ ಭಾರತೀಯ ಕಾಂಗ್ರೆಸ್ ಕಮಿಟಿ, ಇದನ್ನು ಪ್ರಕಟಿಸಲು ಅನುಮಂತಿ ತೆಗೆದುಕೊಂಡಿತ್ತು.
ಇಂದಿಗೂ ಪ್ರಸ್ತುತವಾದ ಇದರ ಒಂದು ಸಣ್ಣ ಆಯ್ದ ಭಾಗ ನಿಮ್ಮ ಓದಿಗೆ.
* ಧರ್ಮ (ರಿಲಿಜಿಯನ್) ವೈಚಾರಿಕತೆಯ ಜೊತೆ ಸಂಘರ್ಷ ಉಂಟುಮಾಡುತ್ತದೆ. ನೈತಿಕ ಮತ್ತು ಅಧ್ಯಾತ್ಮಿಕತೆಗೆ ಜಾಗ ಕೊಡದೆ ಧರ್ಮದ ಮಜಲುಗಳು ಮತ್ತು ಸಾಮಾಜಿಕ ಬಳವಳಿ ಕ್ಷೀಣಿಸಿಬಿಡುತ್ತವೆ. ಇಂದು ಪಾಲಿಸುವ ಧರ್ಮ ಸಾಮಾನ್ಯವಾಗಿ ನಮ್ಮ ಸಾಮಾನ್ಯ ಜೀವನಕ್ಕೆ ಸಂಬಂಧ ಪಡದ ವಿಷಯಗಳೆಡೆಗೆ ಗಮನ ನೀಡಿ, ದಂತ ಗೋಪುರ ಕಟ್ಟುತ್ತದೆ, ಅಥವಾ ಇಂದಿನ ದಿನಕ್ಕೆ ಸಂಬಂಧ ಪಡದ ಸಾಮಾಜಿಕ ಕಟ್ಟುಪಾಡಿಗೆ ಸಿಲುಕಿದೆ. ಇನ್ನೊಂದು ಬದಿಯಲ್ಲಿ ವೈಚಾರಿಕತೆ ಯಾವುದರ ಆಳಕ್ಕೂ ಇಳಿಯದೆ, ವಿಷಯಗಳ ಮೇಲ್ಮೈನ್ನಷ್ಟ್ಟೆ ಚರ್ಚಿಸುತ್ತದೆ. ಹೊಸ ಸಾಧ್ಯತೆಗಳು ಮತ್ತು ನಿಗೂಢಗಳು ಅನಾವರಣವಾಗುತ್ತಿರುವ ಈ ಸಮಯದಲ್ಲೇ ವಿಜ್ಞಾನ ನಮ್ಮ ಮುಂದಿದೆ. ವಸ್ತು ಮತ್ತು ಶಕ್ತಿ ಮತ್ತು ಆತ್ಮ ಒಂದರ ಮೇಲೊಂದು ವ್ಯಾಪಿಸಿವೆ.
*ಹಿಂದಿನ ದಿನಗಳಲ್ಲಿ ಜೀವನ ಬಹಳ ಸರಳವಾಗಿತ್ತು ಮತ್ತು ಪರಿಸರದ ಜೊತೆಗೆ ನೇರ ಸಂಬಧ ಹೊಂದಿತ್ತು. ಈಗ ಅದು ಹೆಚ್ಚೆಚ್ಚು ಜಟಿಲವಾಗಿ, ಹೆಚ್ಚೆಚ್ಚು ವೇಗವಾಗಿ ನಮ್ಮನ್ನು ನಾವು ಪ್ರಶ್ನೆ ಮಾಡಿಕೊಳ್ಳಲೂ ಅಥವಾ ನಮ್ಮನ್ನು ಕಂಡುಕೊಳ್ಳಲು ಕೂಡ ಸಮಯವಿಲ್ಲದಂತಾಗಿದೆ. ವೈಜ್ಞಾನಿಕ ಆವಿಷ್ಕಾರಗಳು ವಿದ್ಯುಚ್ಚಕ್ತಿ ಮತ್ತು ಯಂತ್ರಗಳ ಶಕ್ತಿಯ ಹೆಚ್ಚುವರಿ ಮಾರ್ಗ ಕಂಡುಹಿಡಿದಿದ್ದರು ಅವುಗಳ ಬಳಕೆ ಅಪಾಯಾಕಾರಿ ಕೆಲಸಗಳಿಗೆ ಬಳಕೆಯಾಗುತ್ತಿದೆ.
*"ಜೀವನದ ಅರ್ಥವೇನು?" - ಮನುಷ್ಯತ್ವವನ್ನು ಬಾಧಿಸಿದ ಈ ಪ್ರಾಚೀನ ಪ್ರಶ್ನೆ ಈಗಲೂ ನಮ್ಮ ಮುಂದಿದೆ. ಇಂದಿನ ಪ್ರಶ್ನೆಗಳನ್ನು ಉತ್ತರಿಸದ ಹೊರತು ಹಳೆಯ ನಂಬಿಕೆಗಳು ಅಪ್ರಸ್ತುತವಾಗುತ್ತವೆ. ಬದಲಾಗುತ್ತಿರುವ ವಿಶ್ವದಲ್ಲಿ, ಬದಲಾವಣೆಗೆ ಮತ್ತು ನಡೆಯುವ ಘಟನೆಗಳಿಗೆ ನಿರಂತರ ಹೊಂದಾಣಿಕೆ ಮಾಡಿಕೊಳ್ಳಬೇಕು. ಈ ಹೊಂದಾಣಿಕೆಯಿಂದ ದೂರ ಉಳಿಯುವುದೇ ಸಂಘರ್ಷ ಬಿನ್ನಾಭಿಪ್ರಾಯಗಳ ಹುಟ್ಟಿಗೆ ಕಾರಣ.
Advertisement