ಐಪಿಎಲ್ 8ನೇ ಆವೃತ್ತಿಯಲ್ಲಿರುವ 6 ಭರವಸೆಯ ಪ್ರತಿಭೆಗಳು

ಐಪಿಎಲ್ ಪಂದ್ಯದಲ್ಲಿ ಭರವಸೆಯ ಕ್ರಿಕೆಟರ್‌ಗಳು ಎಂದು ಹೇಳಲಾಗುತ್ತಿರುವ 6 ಯುವ ಕ್ರಿಕೆಟರ್‌ಗಳ ಬಗ್ಗೆ ...
(ಎಡದಿಂದ ಬಲಕ್ಕೆ) ಶ್ರೇಯಸ್ ಅಯ್ಯರ್, ಟ್ರೆಂಟ್ ಬೋಲ್ಟ್ , ಡೇವಿಡ್ ವೈಸೀ, ಕೈಲ್ ಅಬೋಟ್, ಸರ್‌ಫರಾಜ್ ಖಾನ್, ಕೆ.ಸಿ ಕಾರ್ಯಪ್ಪ
(ಎಡದಿಂದ ಬಲಕ್ಕೆ) ಶ್ರೇಯಸ್ ಅಯ್ಯರ್, ಟ್ರೆಂಟ್ ಬೋಲ್ಟ್ , ಡೇವಿಡ್ ವೈಸೀ, ಕೈಲ್ ಅಬೋಟ್, ಸರ್‌ಫರಾಜ್ ಖಾನ್, ಕೆ.ಸಿ ಕಾರ್ಯಪ್ಪ
Updated on

ಐಪಿಎಲ್ 8ನೇ ಆವೃತ್ತಿಯಲ್ಲಿ ಹಲವಾರು ಹೊಸ ಪ್ರತಿಭೆಗಳ ಅನಾವರಣವಾಗಲಿದೆ. ಕೆಲವು ಕ್ರಿಕೆಟರ್‌ಗಳು ಈಗಾಗಲೇ ವಿಶ್ವಕಪ್ ಪಂದ್ಯವನ್ನಾಡಿದ್ದರೂ, ಇನ್ನು ಕೆಲವರು ಐಪಿಎಲ್ ಮೂಲಕ ತಮ್ಮ ಪ್ರತಿಭಾ ಪ್ರದರ್ಶನವನ್ನು ನೀಡಲು ಸಜ್ಜಾಗಿದ್ದಾರೆ. ಈ ಐಪಿಎಲ್ ಪಂದ್ಯದಲ್ಲಿ ಭರವಸೆಯ ಕ್ರಿಕೆಟರ್‌ಗಳು ಎಂದು ಹೇಳಲಾಗುತ್ತಿರುವ 6 ಯುವ ಕ್ರಿಕೆಟರ್‌ಗಳ ಬಗ್ಗೆ ಇಲ್ಲಿದೆ ಮಾಹಿತಿ:

ಶ್ರೇಯಸ್ ಅಯ್ಯರ್
ವಯಸ್ಸು: 20
ತಂಡ: ಡೆಲ್ಲಿ ಡೇರ್‌ಡೆವಿಲ್ಸ್


ಮುಂಬೈ ಮೂಲದ ಶ್ರೇಯಸ್ ರಣಜಿ ಪಂದ್ಯದಲ್ಲಿ ಪಾದಾರ್ಪಣೆ ಮಾಡಿ ಅತೀ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್ ((809 ರನ್‌ಗಳು, ಸರಾಸರಿ 50.6). ಡೇರ್‌ಡೇವಿಲ್ಸ್  ತಂಡ ಈತನನ್ನು 2.6 ಕೋಟಿಗೆ ಖರೀದಿ ಮಾಡಿತ್ತು

ಟ್ರೆಂಟ್ ಬೋಲ್ಟ್
ವಯಸ್ಸು: 25
ತಂಡ: ಸನ್‌ರೈಸರ್ಸ್ ಹೈದ್ರಾಬಾದ್


2015 ವಿಶ್ವಕಪ್ ಪಂದ್ಯದಲ್ಲಿ  ಅತಿ ಹೆಚ್ಚು ವಿಕೆಟ್ ಪಡೆದಾತ (22 ವಿಕೆಟ್).

ಡೇವಿಡ್ ವೈಸೀ
ವಯಸ್ಸು: 29
ತಂಡ: ರಾಯಲ್ ಚಾಲೆಂಜರ್ಸ್ ಬೆಂಗಳೂರು

ಆಲ್ ರೌಂಡರ್ ಆಗಿರುವ ಈತ ಟಿ20 ಪಂದ್ಯಗಳಲ್ಲಿ ಸರಾಸರಿ 23.2ರಲ್ಲಿ 160 ಸ್ಟೈಕ್ ರೇಟ್ ಹೊಂದಿದ್ದಾನೆ. ಆರ್‌ಸಿಬಿ ಈತನನ್ನು ರು. 2.8 ಕೋಟಿಗೆ ಖರೀದಿಸಿತ್ತು.

ಕೈಲ್ ಅಬೋಟ್
ವಯಸ್ಸು: 27
ತಂಡ: ಚೆನ್ನೈ ಸೂಪರ್ ಕಿಂಗ್ಸ್


ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಈತ ಬಾಲ್ ಸ್ವಿಂಗ್ ಮಾಡುವುದರಲ್ಲಿ ಪ್ರವೀಣ


ಸರ್‌ಫರಾಜ್ ಖಾನ್
ವಯಸ್ಸು: 17
ತಂಡ: ರಾಯಲ್ ಚಾಲೆಂಜರ್ಸ್ ಬೆಂಗಳೂರು


2014 ಅಂಡರ್ 19 ವಿಶ್ವಕಪ್ ಪಂದ್ಯದಲ್ಲಿ  211 ರನ್ ( ಸರಾಸರಿ  70.3)ಗಳನ್ನು ಗಳಿಸಿದ್ದಾನೆ.

ಕೆ.ಸಿ ಕಾರ್ಯಪ್ಪ
ವಯಸ್ಸು: 20
ತಂಡ: ಕೊಲ್ಕತ್ತಾ ನೈಟ್ ರೈಡರ್ಸ್


ನಿಗೂಢ ಸ್ಪಿನ್ ಮಾಂತ್ರಿಕ ಎಂದೇ ಕರೆಯಲ್ಪಡುವ ಕಾರ್ಯಪ್ಪ ಇಲ್ಲಿಯವರೆಗೆ ಫಸ್ಟ್ ಕ್ಸಾಸ್ ಮ್ಯಾಚ್‌ಗಳನ್ನು ಆಡಿಲ್ಲ. ಕೆಪಿಎಲ್ ನಲ್ಲಿ ಉತ್ತಮ ಪ್ರದರ್ಶನ ತೋರಿದ್ದ ಕರ್ನಾಟಕದ ಹುಡುಗ ಇವನು. ನೆಟ್ ಪ್ರಾಕ್ಟೀಸ್ ಮಾಡುವ ವೇಳೆ ಈತನ ಕೌಶಲ್ಯವನ್ನು ಕೆಕೆಆರ್ ನಾಯಕ ಗೌತಮ್ ಗಂಭೀರ್ ಗುರುತಿಸಿದ್ದರು. ಐಪಿಎಲ್ ಹರಾಜಿನಲ್ಲಿ ರು. 2.4 ಕೋಟಿಗೆ ಕೆಕೆಆರ್ ತಂಡ ಈತನನ್ನು ಖರೀದಿಸಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com