ನೆಟ್ ನ್ಯೂಟ್ರಾಲಿಟಿ ಬಗ್ಗೆ ತಿಳಿದುಕೊಳ್ಳಬೇಕಾದ್ದು...

ನೆಟ್ ನ್ಯೂಟ್ರಾಲಿಟಿ ಬಗ್ಗೆ ತಿಳಿದುಕೊಳ್ಳಬೇಕಾದ್ದು...

ಇಂಟರ್ ನೆಟ್ ಬಳಕೆದಾರರ ಸ್ವಾತಂತ್ರ್ಯವನ್ನೇ ಕಸಿದುಕೊಳ್ಳಲು ಇಂಟರ್ ನೆಟ್ ಸೇವಾ...

ಇಂಟರ್ ನೆಟ್ ಬಳಕೆದಾರರ ಸ್ವಾತಂತ್ರ್ಯವನ್ನೇ ಕಸಿದುಕೊಳ್ಳಲು ಇಂಟರ್ ನೆಟ್ ಸೇವಾ ಕಂಪೆನಿಗಳು ಮುಂದಾಗಿವೆ. ಇಂಟರ್ ನೆಟ್ ಫ್ರೀ ಎಂದುಕೊಂಡು ಮನಬಂದಂತೆ ವಾಟ್ಸ್ ಆಪ್ ವಿಡಿಯೋ ಡೌನ್ ಲೋಡ್ ಮಾಡಿಕೊಳ್ಳುತ್ತಿದ್ದವರು ಇನ್ನು ಮುಂದೆ ವಿಡಿಯೋ ಡೌನ್‍ಲೋಡ್ ಮಾಡಲು ಯೋಚಿಸುವಂತಾಗಬಹುದು. ಮೊಬೈಲ್ ನಲ್ಲಿ ಯೂಟ್ಯೂಬ್ ವೀಕ್ಷಿಸುವುದಕ್ಕೆ ಮಾಮೂಲಿಗಿಂತ ಹತ್ತು ಪಟ್ಟು ಶುಲ್ಕ ವಿಧಿಸಬಹುದು.  ಫೇಸ್ ಬುಕ್, ಪ್ಲೇಸ್ಟೋರ್ ಎಲ್ಲವೂ ದುಬಾರಿಯಾದೀತು. ಈಗಾಗಲೇ ಟೆಲಿಕಾಂ ಆಪರೇಟರ್‍ಗಳು ಆಯ್ದ ಆ್ಯಪ್ಸ್ ಮತ್ತು ವೆಬ್ ಸೈಟ್ ಗಳಿಗೆ ಶುಲ್ಕ ವಿಧಿಸುವ ಬಗ್ಗೆ ಕೆಲ ದೂರಸಂಪರ್ಕ ಕಂಪನಿಗಳು ಮುಂದಾಗಿವೆ. ಆದರೆ ಈ ಪ್ರಸ್ತಾಪದ ಬಗ್ಗೆ ಭಾರಿ ವಿರೋಧ ವ್ಯಕ್ತವಾಗಿದೆ.

ನೆಟ್ ನ್ಯೂಟ್ರಾಲಿಟಿ(ಅಂತರ್ಜಾಲ ತಟಸ್ಥ ನೀತಿ) ಎಂದರೆ...
ಯಾವುದೇ ಮೊಬೈಲ್ ಸೇವಾ ಸಂಸ್ಥೆ ನಿಮಗೆ ಇಂಟರ್ ನೆಟ್ ಸೇವೆ ಒದಗಿಸುತ್ತಿದ್ದರೆ, ಅದು ನೀವು ಇಂಟರ್ ನೆಟ್ಟನ್ನು ಯಾವುದಕ್ಕಾಗಿ ಬಳಸುತ್ತಿದ್ದೀರಿ? ಏನು ವೀಕ್ಷಿಸುತ್ತೀರಿ? ಏನು ಡೌನ್ ಲೋಡ್ ಮಾಡುತ್ತೀರಿ ಎಂಬುದನ್ನು ನಿಯಂತ್ರಿಸುವಂತೆಯೂ ಇಲ್ಲ. ಒಟ್ಟು ನೆಟ್ ಪ್ಯಾಕ್ ನೀಡಿದ ಮೇಲೆ ಬೇರೆ ಯಾವ ನಿಬಂಧನೆಗಳಿಗೂ ಒಳಪಡಿಸುವಂತಿಲ್ಲ. ಅಲ್ಲದೇ, ಈಗಾಗಲೇ ಮೊಬೈಲ್ ಇಂಟರ್ ನೆಟ್ ಪ್ಯಾಕೇಜ್‍ಗೆ ದುಡ್ಡು ಕೊಡುವುದರ ಜತೆಗೆ ನೋಡಬೇಕಾದ ಫೋಟೋ, ವಿಡಿಯೋ ಮತ್ತು ವೆಬ್‍ಸೈಟ್‍ಗಳ ವೀಕ್ಷಣೆಗೆ ಹೆಚ್ಚುವರಿಯಾಗಿ ಪಾವತಿ ಮಾಡಬೇಕಾಗುತ್ತದೆ. ಈ ಎಲ್ಲಾ ನಿಯಮಗಳನ್ನು ಹೊಂದಿರುವುದಕ್ಕೆ ನೆಟ್ ನ್ಯೂಟ್ರಾಲಿಟಿ ಎನ್ನುತ್ತಾರೆ.

ಇದು ಈಗಾಗಲೇ ಅಮೆರಿಕ, ಚಿಲಿ, ನೆದರ್ ಲ್ಯಾಂಡ್ಸ್ ಮತ್ತು ಬ್ರೆಜಿಲ್ ದೇಶಗಳಲ್ಲಿ ನೆಟ್ ಜಾರಿಗೆ ಬಂದಿದೆ. ಆದರೆ ಭಾರತದಲ್ಲಿ ಇದಕ್ಕೆ ವಿರೋಧ ವ್ಯಕ್ತವಾಗಿದೆ. ಅದರ ವಿರುದ್ಧ ಸಾಮಾಜಿಕ ಜಾಲ ತಾಣಗಳಾದ ಟ್ವಿಟರ್, ಫೇಸ್‍ಬುಕ್‍ಗಳಲ್ಲಿ ಪ್ರತಿರೋಧ ವ್ಯಕ್ತವಾಗಿದೆ. ಸುಮಾರು 1 ಲಕ್ಷಕ್ಕೂ ಅಧಿಕ ಮಂದಿ ಈ ಬಗ್ಗೆ ಸಹಿ ಮಾಡಿ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್)ಕ್ಕೆ ಮನವಿ ಸಲ್ಲಿಸಿದ್ದಾರೆ.

ಸೇವ್ ದ ಇಂಟರ್ ನೆಟ್. ಇನ್ (savetheinternet.in) ಎಂಬ ವೆಬ್‍ಸೈಟ್ ಮೂಲಕ ಈಗಾಗಲೇ ಒಂದು ಲಕ್ಷಕ್ಕಿಂತ ಹೆಚ್ಚು ಮಂದಿ ಮನವಿ ಕಳುಹಿಸಿದ್ದಾರೆ. ಹೊಸ ಹೊರೆಯ ವಿರುದ್ಧ ಮನವಿ ಸಲ್ಲಿಸಲು ಇನ್ನೂ ಒಂದು ವಾರ ಕಾಲ ಅವಕಾಶವಿದೆ. ಹೀಗಾಗಿ, ಈ ಅವಧಿಯಲ್ಲಿ ಅದರ ವಿರೋಧಗಳ ಸಂಖ್ಯೆ 20 ಲಕ್ಷ ತಲುಪುವ ಸಾಧ್ಯತೆ ಹೆಚ್ಚಾಗಿದೆ.
ಸಮಿತಿ ರಚನೆ
ಅಂತರ್ಜಾಲ ತಟಸ್ಥ ನೀತಿ (ನೆಟ್ ನ್ಯೂಟ್ರಾಲಿಟಿ) ಬಗ್ಗೆ ಚರ್ಚೆಗಳು ಆರಂಭವಾಗಿರುವಂತೆಯೇ ಈ ಬಗ್ಗೆ ಅಧ್ಯಯನ ನಡೆಸಲು ಕೇಂದ್ರ ಸರ್ಕಾರ ಜನವರಿಯಲ್ಲಿ ಸಮಿತಿ ರಚಿಸಿದ್ದ ವಿಚಾರ ಬಹಿರಂಗವಾಗಿದೆ. ಮುಂದಿನ ತಿಂಗಳ ಎರಡನೇ ವಾರದಲ್ಲಿ ಈ ಬಗ್ಗೆ ವರದಿ ಸಲ್ಲಿಸುವಂತೆ ಸಮಿತಿಗೆ ಸೂಚಿಸಲಾಗಿದೆ. ಅದರಲ್ಲಿ ಆರು ಮಂದಿ ಸದಸ್ಯರಿದ್ದು, ಈ ಪೈಕಿ ಎ.ಕೆ.ಭಾರ್ಗವ, ಎ.ಕೆ.ಮಿತ್ತಲ್ ಪ್ರಮುಖರು.
'ಏರ್‌ಟೆಲ್ ಜೀರೊ'
ಏರ್‌ಟೆಲ್ ಕಂಪನಿ 'ಏರ್‌ಟೆಲ್ ಜೀರೊ' ಎಂಬ ಯೋಜನೆಯೊಂದನ್ನು ಜಾರಿಗೆ ತಂದಿತು. ಬಳಕೆದಾರರು ನಿರ್ದಿಷ್ಟ ಅಪ್ಲಿಕೇಷನ್‌ಗಳನ್ನಷ್ಟೇ ಉಚಿತವಾಗಿ ಬಳಸುವುದು ಹಾಗೂ ಗ್ರಾಹಕರು ಉಚಿತವಾಗಿ ಬಳಸುವ ಆ್ಯಪ್ ಕಂಪನಿಗಳು ಏರ್‌ಟೆಲ್‌ಗೆ ಶುಲ್ಕ ಕಟ್ಟಬೇಕೆಂಬುದು ಇದರ ಉದ್ದೇಶ. ಟೋಲ್ ಫ್ರೀ ಸಂಖ್ಯೆಗಳಿಗೆ ಜನರು ಉಚಿತವಾಗಿ ಕರೆ ಮಾಡುವುದರಿಂದ ಕಂಪನಿಗೆ ನಷ್ಟವಾಗುತ್ತದೆ. ಇದನ್ನು ತುಂಬಿಕೊಳ್ಳಲು ಈ ನೀತಿ ಅನುಸರಿಸುತ್ತಿದ್ದೇವೆ ಎಂದು ಏರ್‌ಟೆಲ್ ಸಬೂಬು ನೀಡಿತ್ತು. ನೆಟ್ ನ್ಯೂಟ್ರಾಲಿಟಿಯನ್ನು ಬೆಂಬಲಿಸಿರುವ ಫ್ಲಿಪ್ ಕಾರ್ಟ್ ಏರ್ ಟೆಲ್ ಜೀರೋ ಯೋಜನೆಯಿಂದ ಹೊರಬರುವುದಾಗಿ ನಿನ್ನೆ ಘೋಷಿಸಿತ್ತು.

Related Stories

No stories found.

Advertisement

X
Kannada Prabha
www.kannadaprabha.com