ವಿಯೆಟ್ನಾಂ ಯುದ್ಧ
ವಿಯೆಟ್ನಾಂ ಯುದ್ಧ

ವಿಯೆಟ್ನಾಂ ಯುದ್ಧಕ್ಕೆ 40 ವರುಷ!

ಏಪ್ರಿಲ್ 30. ವಿಯೆಟ್ನಾಂ ಯುದ್ಧ ಮುಕ್ತಾಯವಾಗಿದ್ದು ಇದೇ ದಿನ. ಈ ಮಹಾಯುದ್ಧದ ಕರಾಳ ನೆನಪಿಗೆ 40 ವರ್ಷ....

ಏಪ್ರಿಲ್ 30. ವಿಯೆಟ್ನಾಂ ಯುದ್ಧ ಮುಕ್ತಾಯವಾಗಿದ್ದು ಇದೇ ದಿನ. ಈ ಮಹಾಯುದ್ಧದ ಕರಾಳ ನೆನಪಿಗೆ 40 ವರ್ಷ. ಕಮ್ಯೂನಿಸ್ಟ್ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ವಿಯೆಟ್ನಾಂ (ಉತ್ತರ ವಿಯೆಟ್ನಾಂ) ಮತ್ತು ರಿಪಬ್ಲಿಕ್ ಆಫ್ ವಿಯೆಟ್ನಾಂ ( ದಕ್ಷಿಣ ವಿಯೆಟ್ನಾಂ) ನಡುವೆ ನಡೆದ ಯುದ್ಧವೇ ವಿಯೆಟ್ನಾಂ ಯುದ್ಧ. ಇದು ವಿಯೆಟ್ನಾಂನಲ್ಲಿ ನಡೆದ ಆಂತರಿಕ ಸಂಘರ್ಷವಾದರೂ ಅಮೆರಿಕ ಕಮ್ಯುನಿಸ್ಟ್ ಶಕ್ತಿಗಳ ವಿರುದ್ಧ ನಡೆಸಿದ ಯುದ್ಧವಾಗಿತ್ತು ಇದು. 1959ರಿಂದ 1975 ಏಪ್ರಿಲ್ 30ರ ವರೆಗಿನ ಕಾಲಾವಧಿಯಲ್ಲಿ ಈ ಯುದ್ಧ ನಡೆದಿತ್ತು.  ಎರಡನೇ ಇಂಡೋ ಚೈನಾ ಯುದ್ಧ, ವಿಯೆಟ್ನಾಂ ಸಂಘರ್ಷ ಎಂಬುದಾಗಿಯೂ, ಈಗಿನ ವಿಯೆಟ್ನಾಂನಲ್ಲಿ ಇದು ಅಮೆರಿಕನ್ ಯುದ್ಧ ಎಂದು ಕರೆಯಲ್ಪಡುತ್ತದೆ. ಈ ಯುದ್ಧದಲ್ಲಿ ಕಮ್ಯನಿಸ್ಟ್ ಬೆಂಬಲಿತ ರಾಷ್ಟ್ರಗಳು ಉತ್ತರ ವಿಯೆಟ್ನಾಂಗೆ ಮತ್ತು ಸಂಯುಕ್ತ ರಾಷ್ಟ್ರಗಳು ದಕ್ಷಿಣ ವಿಯೆಟ್ನಾಂಗೆ ಬೆಂಬಲ ನೀಡಿದ್ದವು.

ದಕ್ಷಿಣ ವಿಯೆಟ್ನಾಂನ್ನು ಪ್ರಮುಖ ಕೇಂದ್ರವಾಗಿ ಕಾರ್ಯ ನಿರ್ವಹಿಸಿದ ವಿಯೆಟ್‌ಕೋಂಗ್ ಎಂಬ ಕಮ್ಯುನಿಸ್ಟ್  ಸೈನ್ಯವು ಆ ಪ್ರದೇಶದಲ್ಲಿರುವ ಕಮ್ಯುನಿಸ್ಟ್ ವಿರೋಧಿ ಜನರ ಮೇಲೆ ಗೆರಿಲ್ಲಾ ಯುದ್ಧತಂತ್ರವನ್ನು ಹೂಡಿದ್ದವು. ಬೃಹತ್ ಸೈನ್ಯವನ್ನು ಕಟ್ಟಿಕೊಂಡು ಪರಂಪರಾಗತ ರೀತಿಯಲ್ಲಿರುವ ಯುದ್ಧ ಶೈಲಿಯನ್ನು ಉತ್ತರ ವಿಯೆಟ್ನಾಂ ಸ್ವೀಕರಿಸಿತ್ತು.  ವ್ಯೋಮಸೇನಾ ನಾಯಕತ್ವ ಮತ್ತು ಆಯುಧ ಸಂಗ್ರಹಗಳನ್ನು ಬಳಸಿ ಉತ್ತರ ವಿಯೆಟ್ನಾಂ ಮತ್ತು  ಅಮೆರಿಕ ಭಾರೀ ಆಕ್ರಮಣಗಳನ್ನು ನಡೆಸಿದವು.  ದಕ್ಷಿಣ ವಿಯೆಟ್ನಾಂ ಕಮ್ಯೂನಿಸ್ಟ್‌ರ ಕೈಗೆ ಸಿಗುವುದನ್ನು ತಡೆಯುವ ಸಲುವಾಗಿ ಅಮೆರಿಕ ಯುದ್ಧಭೂಮಿಗೆ ಇಳಿದಿತ್ತು.

1960ರ ಮೊದಲ ಹಂತದಲ್ಲಿ ಯುದ್ಧೋಪದೇಶ ಯೋಜನೆಗಳ ಮೂಲಕ ಆರಂಭವಾದ ಸಂಘರ್ಷ 1965ರ ನಂತರ  ಸೈನ್ಯ ನಿಯೋಜನೆಯ ಮೂಲಕ ಸಂಪೂರ್ಣ ಯುದ್ಧವಾಗಿ  ಮಾರ್ಪಾಡಾಯಿತು.  197ರ ವೇಳೆಯಲ್ಲಿ ಅಮೆರಿಕದ ಬಹುತೇಕ ಸೈನ್ಯಗಳು ಯುದ್ಧದಿಂದ ಹಿಂದೆ ಸರಿದಿದ್ದು, 1975ರಲ್ಲಿ ಕಮ್ಯುನಿಸ್ಟ್ ಪಕ್ಷಗಳು ದಕ್ಷಿಣ ವಿಯೆಟ್ನಾಂನಲ್ಲಿ ಅಧಿಕಾರ ಸ್ಥಾಪಿಸಿದವು. ಇದಾದನಂತರ ಉತ್ತರ -ದಕ್ಷಿಣ ವಿಯೆಟ್ನಾಂಗಳು ಏಕೀಕರಣಗೊಂಡವು. ಈ ಯುದ್ಧದಲ್ಲಿ ಅಮೆರಿಕ ಮುಖಭಂಗ ಅನುಭವಿಸಿದ ಕಾರಣ, ಅಮೆರಿಕದ ರಾಜಕೀಯ, ಸಾಂಸ್ಕೃತಿಕ  ಮತ್ತು ವಿದೇಶ ಸಂಬಂಧಗಳ ಮೇಲೆ ಈ ಯುದ್ಧ ಪರಿಣಾಮ ಬೀರಿತ್ತು.  ಯುದ್ಧಕ್ಕೆ ಪ್ರೇರಣೆ ನೀಡಿದ ಅಮೆರಿಕದ ತೀರ್ಮಾನ ಅಮೆರಿಕದ ಜನತೆಯನ್ನು ಇಬ್ಭಾಗವಾಗಿಸಿತು. ಈ ಮಹಾಯುದ್ಧದಲ್ಲಿ ಸುಮಾರು 58,159 ಅಮೆರಿಕ ಸೈನಿಕರು, 40 ಲಕ್ಷ ವಿಯೆಟ್ನಾಂ ಜನರು ಸೇರಿದಂತೆ 1520 ಲಕ್ಷ ಲವೋಶ್ಯನ್, ಕಂಬೋಡಿಯಾ  ಜನರು ಯುದ್ಧದಲ್ಲಿ ಹತರಾಗಿದ್ದರು.


Related Stories

No stories found.

Advertisement

X
Kannada Prabha
www.kannadaprabha.com