
ಬರ್ಲಿನ್: ಮೂರು ತಿಂಗಳ ಮುಂಚೆ ೬೫ ವರ್ಷದ ಮಹಿಳೆ ಅವಧಿಗೆ ಮುಂಚಿತವಾಗಿಯೇ ಒಂದೇ ಹೆರಿಗೆಯಲ್ಲಿ ಜನನ ನೀಡಿದ್ದ ನಾಲ್ಕು ಮಕ್ಕಳು ಆರೋಗ್ಯವಾಗಿದ್ದು ಶೀಘ್ರದಲ್ಲೆ ಬರ್ಲಿನ್ ಆಸ್ಪತ್ರೆಯಿಂದ ಮನೆಗೆ ತೆರಳಲಿವೆ ಎಂದು ವೈದ್ಯರು ತಿಳಿಸಿದ್ದಾರೆ.
ಈಗ ಈ ಹಸುಗೂಸುಗಳು ೨.೫ ಕೆಜಿಗೂ ಹೆಚ್ಚು ತೂಗುತ್ತಿವೆ ಎಂದು ಚಾರಿಟಿ ಆಸ್ಪತ್ರೆ ಮಂಗಳವಾರ ತಿಳಿಸಿದ್ದು, ಈ ತಿಂಗಳಲ್ಲಿ ಅವರು ಮನೆಗೆ ತೆರಳಬಹುದು ಎಂದು ತಿಳಿಸಿದೆ. ಹೆಣ್ಣು ಮಗುವಿಗೆ ನೀತಾ ಎಂದು ಹೆಸರಿಟ್ಟಿದ್ದು ಮೂರು ಗಂಡು ಮಕ್ಕಳನ್ನು ಡ್ರೀಸ್, ಬೆನ್ಸ್ ಮತ್ತು ಜಾನ್ ಎಂದು ಹೆಸರಿಸಲಾಗಿದೆ. ಸಿಸೇರಿಯನ್ ನಿಂದ ೨೬ ನೆ ವಾರಕ್ಕೆ ತಾಯಿ ಈ ಮಕ್ಕಳಿಗೆ ಮೇ ೧೯ ರಂದು ಜನ್ಮ ನೀಡಿದ್ದರು.
ನಾಲ್ವಳಿಗೆ ಜನ್ಮ ನೀಡಿದ ಅತಿ ದೊಡ್ಡ ವಯಸ್ಸಿನ ಮಹಿಳೆ ಅನ್ನೆಗ್ರೆಟ್ ರೌಂಗಿಕ್ ಎಂದು ನಂಬಲಾಗಿದೆ.
ನಿವೃತ್ತ ಶಾಲಾ ಶಿಕ್ಷಕಿಯಾದ ಈ ಮಹಿಳೆ ಈಗಾಗಲೇ ಐದು ತಂದೆಯರಿಂದ ಪಡೆದ ೧೦ ರಿಂದ ೪೪ ವರ್ಷದ ೧೩ ಜನ ಮಕ್ಕಳನ್ನು ಹೊಂದಿದ್ದಾಳೆ. ಜರ್ಮನಿಯಲ್ಲಿ ಕಾನೂನು ಬಾಹಿರ ಎನ್ನಲಾದ ಫಲವತ್ತಾದ ಅಂಡಾಶಯವನ್ನು ಸ್ವೀಕರಿಸಲು ಈ ಮಹಿಳೆ ವಿದೇಶಕ್ಕೆ ಹಾರಿದ್ದರು ಎಂದು ತಿಳಿದುಬಂದಿದೆ.
Advertisement